ಮನೆ ರಾಷ್ಟ್ರೀಯ ಅಬಕಾರಿ ನೀತಿ ಹಗರಣ: ಇಬ್ಬರು ಉದ್ಯಮಿಗಳನ್ನು ಬಂಧಿಸಿದ ಇಡಿ

ಅಬಕಾರಿ ನೀತಿ ಹಗರಣ: ಇಬ್ಬರು ಉದ್ಯಮಿಗಳನ್ನು ಬಂಧಿಸಿದ ಇಡಿ

0

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉದ್ಯಮಿಗಳನ್ನು ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು ಬಂಧಿಸಿದ್ದಾರೆ.

ವಿಜಯ್ ನಾಯರ್ ಮತ್ತು ಅಭಿಷೇಕ್ ಬೋನಪಲ್ಲಿ ಬಂಧಿತ ಆರೋಪಿಗಳು.

ಪ್ರಸ್ತುತ ಅಬಕಾರಿ ಹಗರಣದ ಹಣ ಅಕ್ರಮ ವರ್ಗಾವಣೆ ಸಂಬಂಧಿಸಿದಂತೆ ಇ.ಡಿ ತನಿಖೆ ನಡೆಸುತ್ತಿದೆ.

ಅಕ್ರಮದ ಆರೋಪ ಬಂದ ಹಿನ್ನೆಲೆಯಲ್ಲಿ ಅಬಕಾರಿ ನೀತಿಯನ್ನು ದೆಹಲಿ ಸರ್ಕಾರ ಹಿಂಪಡೆದಿತ್ತು. ಈಗಾಗಲೇ ಸಿಬಿಐ ವಶದಲ್ಲಿರುವ ಈ ಇಬ್ಬರನ್ನು ವಶಕ್ಕೆ ನೀಡುವಂತೆ ಇ.ಡಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವ ಸಾಧ್ಯತೆ ಇದೆ.

ಹೈದರಾಬಾದ್ ಮೂಲದ ಬೋನಪಲ್ಲಿ ದಕ್ಷಿಣ ಭಾರತದ ಕೆಲ ಮದ್ಯ ವ್ಯಾಪಾರಿಗಳ ಪರ ಲಾಬಿ ನಡೆಸಿದ್ದರು ಎಂಬ ಆರೋಪವಿದೆ.

ನಾಯರ್ ಅವರು, ಈ ಹಿಂದೆ ಎಎಪಿ ಜೊತೆ ನಂಟು ಹೊಂದಿದ್ದ ಕಾರ್ಯಕ್ರಮ ನಿರ್ವಹಣಾ ಕಂಪನಿಯೊಂದರ ಸಿಇಒ ಆಗಿದ್ದು, ಅಬಕಾರಿ ನೀತಿಗೆ ಸಂಬಂಧಿಸಿದಂತೆ ಸಂಚು ನಡೆಸಿದ್ದರು ಎಂಬುದು ಸಿಬಿಐ ಆರೋಪವಾಗಿದೆ.

ಹಿಂದಿನ ಲೇಖನಆರ್’ಟಿಐ ಕಾರ್ಯಕರ್ತನ ಹತ್ಯೆ: ಸಾಕ್ಷ್ಯಾಧಾರ ಕೊರತೆಯಿಂದ ಆರೋಪಿಗಳನ್ನು ಖುಲಾಸೆಗೊಳಿಸಿದ ಹೈಕೋರ್ಟ್
ಮುಂದಿನ ಲೇಖನತನ್ವೀರ್ ಸೇಠ್ ಎನ್.ಆರ್.ಕ್ಷೇತ್ರದ ಜನರ ಭವಿಷ್ಯ ನಿರ್ಮಿಸಲಿ: ಎಸ್.ಎ.ರಾಮದಾಸ್