ಮನೆ ಸುದ್ದಿ ಜಾಲ ದೈಹಿಕವಾಗಿ ಆರೋಗ್ಯ ವೃದ್ಧಿಸಲು ವ್ಯಾಯಾಮ ಮುಖ್ಯ: ಬಿ.ಆರ್.ಪೂರ್ಣಿಮಾ

ದೈಹಿಕವಾಗಿ ಆರೋಗ್ಯ ವೃದ್ಧಿಸಲು ವ್ಯಾಯಾಮ ಮುಖ್ಯ: ಬಿ.ಆರ್.ಪೂರ್ಣಿಮಾ

0

ಮೈಸೂರು(Mysuru): ಎಲ್ಲರೂ  ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಲು ವ್ಯಾಯಾಮ ಮುಖ್ಯ . ದಿನದ ಒಂದೂವರೆ ಗಂಟೆ ನಿಮಗಾಗಿ ಮೀಸಲಿಡಿ ಎಂದು ಪೋಲಿಸ್ ಸಿಬ್ಬಂದಿಗೆ   ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಗಳಾದ ಬಿ.ಆರ್ .ಪೂರ್ಣಿಮಾ ಕಿವಿ ಮಾತು ಹೇಳಿದರು.

ಅವರು ಇಂದು ಮೈಸೂರಿನ  ಜ್ಯೋತಿನಗರದ ಡಿಎಆರ್   ಮೈದಾನದಲ್ಲಿ ಮೂರು ದಿನಗಳ  ಕಾಲ ನಡೆಯಲಿರುವ ಮೈಸೂರು ಜಿಲ್ಲಾ ವಾರ್ಷಿಕ ಕ್ರೀಡಾಕೂಟ ಕ್ಕೆ  ಪಾರಿವಾಳ ಮತ್ತು ಬಲೂನ್  ಹಾರಿಬಿಡುವ ಮೂಲಕ ಚಾಲನೆ ನೀಡಿ, ವಂದನೆ ಸ್ವೀಕರಿಸಿ, ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿ  ಮಾತನಾಡಿದರು. 

ನಿಮ್ಮ ದಿನದ ಒಂದೂವರೆ ಗಂಟೆ ನಿಮಗಾಗಿ ಮೀಸಲಿಡಿ. ದಿನನಿತ್ಯ ವ್ಯಾಯಮ ಮಾಡಿ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಿ. ನನಗೆ ಪೋಲಿಸ್ ಇಲಾಖೆ ತುಂಬ ಪ್ರಿಯವಾದ ಇಲಾಖೆ. ನಮ್ಮ ಪೋಷಕರು ಆರೋಗ್ಯ ಇಲಾಖೆಯಲ್ಲಿದ್ದರು. ಹಾಗಾಗಿ ನಾನು ಹೆಚ್ಚು ಪ್ರಾಧಮಿಕ ಆರೋಗ್ಯ ಕೇಂದ್ರದ ಕ್ವಾರ್ಟರ್ಸ್ ಗಳಲ್ಲಿ ಬೆಳೆಯಬೇಕಾಯಿತು. ನನ್ನ ಸಹೋದರರು ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ಪೊಲೀಸ್ ಇಲಾಖೆ ನನಗೆ ಪ್ರಿಯವಾದ ಇಲಾಖೆ. ನನ್ನ ಮಾತೃ ಇಲಾಖೆ ಕಂದಾಯ ಇಲಾಖೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಕಾನೂನು ನಿರ್ವಹಣೆ ಮತ್ತು  ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪೊಲೀಸರು ಹೆಚ್ಚಿನ ಒತ್ತಡದಿಂದ ಕಾರ್ಯನಿರ್ವಹಿಸುತ್ತಿರುತ್ತಾರೆ. ಈ ದಿಸೆಯಲ್ಲಿ ಕ್ರೀಡೆ ಕೂಡ ಪ್ರಮುಖ ಪಾತ್ರ ವಹಿಸಲಿದೆ.  ಆದ್ದರಿಂದ ಇನ್ನೂ ಹೆಚ್ಚಿನ ಕಾರ್ಯಕ್ಷಮತೆ, ದಕ್ಷತೆ, ಮನೋಬಲ, ನೈತಿಕ ಸ್ಥೈರ್ಯ ಹಾಗೂ ದೈಹಿಕ ಆರೋಗ್ಯ ವೃದ್ಧಿಗಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅವರ ಕಾರ್ಯದಲ್ಲಿ ಇನ್ನೂ ಹೆಚ್ಚಿನ ದಕ್ಷತೆಯನ್ನು ಕಾಪಾಡಿಕೊಳ್ಳಲು ಪ್ರತಿನಿತ್ಯ ಒಂದು ಕ್ರೀಡೆಯನ್ನು ಅವರ ಹವ್ಯಾಸವನ್ನಾಗಿ ಮಾಡಿಕೊಂಡಿರುವುದನ್ನು ನಾವು ನೋಡುತ್ತೇವೆ. ಈ ಬಾರಿ ಅಂದರೆ 2022ನೇ ಸಾಲಿನ ಮೈಸೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾ ಕೂಟಕ್ಕೆ ನಮ್ಮ ಕೋರಿಕೆಯ ಮೇರೆಗೆ ಜಿ.ಪಂ.ಸಿಇಒ ಅವರು ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಎಂದರು.

ಇದೇ ವೇಳೆ ಸ್ಪರ್ಧಿಗಳು ಕ್ರೀಡಾ ಪ್ರಮಾಣವಚನವನ್ನು ಸ್ವೀಕರಿಸಿದರು. ಆಕರ್ಷಕ ಪಥಸಂಚಲನವೂ ನಡೆಯಿತು.  

ಕ್ರೀಡಾಕೂಟದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

ನ.24ರಂದು ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಲಿದ್ದು, ದಕ್ಷಿಣ ವಲಯದ ಪೊಲೀಸ್ ಮಹಾನಿರೀಕ್ಷಕ ಪ್ರವೀಣ್ ಮಧುಕರ್ ಪವಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.