ಮನೆ ವ್ಯಾಯಾಮ ವ್ಯಾಯಾಮ: ಪಾರ್ಕ್‌, ಜಿಮ್‌ ಯಾವುದು ಉತ್ತಮ?

ವ್ಯಾಯಾಮ: ಪಾರ್ಕ್‌, ಜಿಮ್‌ ಯಾವುದು ಉತ್ತಮ?

0

ಉತ್ತಮ ಆರೋಗ್ಯಕ್ಕೆ ಅಹಾರ ಸೇವನೆ ಎಷ್ಟು ಮುಖ್ಯವೋ ಅದೇ ರೀತಿ ವ್ಯಾಯಾಮ ಕೂಡ ಅಷ್ಟೇ ಮುಖ್ಯ. ಆದರೆ ವ್ಯಾಯಾಮ ಮಾಡಲು ಆಯ್ದುಕೊಳ್ಳುವ ಸ್ಥಳ ಯಾವುದು ಎನ್ನುವುದು ಮುಖ್ಯವಾಗುತ್ತದೆ. ಜಿಮ್‌ನಲ್ಲಿ ವ್ಯಾಯಾಮ ಮಾಡುವುದು ಮತ್ತು ಹೊರಗೆ ಪಾರ್ಕ್‌ಗಳಿಗೆ ಹೋಗಿ ವ್ಯಾಯಾಮ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಹಾಗಾದರೆ ಎಲ್ಲಿ ವ್ಯಾಯಾಮ ಮಾಡುವುದು ಒಳ್ಳೆಯದು ಎಂಬುದರ ಮಾಹಿತಿ ಇಲ್ಲಿದೆ.

ಸಂಶೋಧನೆಯ ಪ್ರಕಾರ ಹೊರಾಂಗಣದಲ್ಲಿ ವ್ಯಾಯಾಮ ಮಾಡುವುದು ನಿಮ್ಮ ದೇಹ ಮತ್ತು ಮನಸ್ಸಿಗೆ ಉತ್ತಮವಾಗಿದೆ. ಮನೆಯೊಳಗಿನ ವ್ಯಾಯಾಮಕ್ಕೆ ಹೋಲಿಸಿದರೆ, ಹೊರಾಂಗಣದಲ್ಲಿ ವ್ಯಾಯಾಮ ಮಾಡುವುದು ಕೋಪ, ಆಯಾಸ ಮತ್ತು ದುಃಖವನ್ನು ಕಡಿಮೆ ಮಾಡುವುದು ಉತ್ತಮವಾಗಿದೆ.

ಪಾರ್ಕ್‌ ನಲ್ಲಿ ವ್ಯಾಯಾಮ

ಹೊರಗಿನ ವಾತಾವರಣಕ್ಕೆ ಮೈ ಒಡ್ಡಿಕೊಂಡಾಗ ಅಥವಾ ಹೊರಗಿನ ಪರಿಸರದಲ್ಲಿ ವ್ಯಾಯಾಮ ಮಾಡಿದಾಗ ದೇಹಕ್ಕೆ ಹೊಸ ಚೈತನ್ಯ ಮೂಡುತ್ತದೆ. ದೇಹಕ್ಕೆ ವಿಟಮಿನ್‌ ಡಿ, ಉತ್ತಮ ಆಮ್ಲಜನಕ ದೊರೆಯುತ್ತದೆ. ಹೀಗಾಗಿ ಮನಸ್ಸು ಕೂಡ ಉಲ್ಲಾಸಭರಿತವಾಗಿರುತ್ತದೆ. ದೇಹಕ್ಕೆ ಮಾತ್ರವಲ್ಲದೆ ಮನಸಿಗೂ ಒಳ್ಳೆಯ ಥೆರಪಿ ಸಿಕ್ಕಹಾಗೆ ಆಗುತ್ತದೆ. ಈ ಕಾರಣದಿಂದ ಹೊರಗೆ ಹೋಗಿ ವ್ಯಾಯಾಮ ಮಾಡುವುದು ಒಳ್ಳೆಯದು. ಪಾರ್ಕ್‌ಗಳಿಗೆ ಹೋಗಿ ವ್ಯಾಯಾಮ ಮಾಡುವುದರಿಂದ ಉತ್ತಮ ಗಾಳಿ, ಬೆಳಕು ಸಿಗುತ್ತದೆ. 

ಜಿಮ್‌ ನಲ್ಲಿ ವ್ಯಾಯಾಮ

ಜಿಮ್‌ಗೆ ಹೋಗಿ ವ್ಯಾಯಾಮ ಮಾಡುವುದು ಒಂದು ರೀತಿಯಲ್ಲಿ ಉತ್ತಮ. ಏಕೆಂದರೆ ಸರಿಯಾದ ತರಬೇತಿದಾರರು ಸಿಗುವ ಕಾರಣ ಯಾವ ರೀತಿಯ ವ್ಯಾಯಾಮಗಳನ್ನು ಎಷ್ಟು ಹೊತ್ತು, ಹೇಗೆ ಮಾಡಬೇಕು ಎನ್ನುವ ಬಗ್ಗೆ ತರಬೇತಿ ನೀಡುತ್ತಾರೆ. ಹೀಗಾಗಿ ಯಾವುದೇ ಅನುಮಾನಗಳಿಲ್ಲದೆ, ಹಾನಿಯೂ ಇಲ್ಲದೆ ವ್ಯಾಯಾಮ ಮಾಡಬಹುದು.

ಹಿಂದಿನ ಲೇಖನರಾಜ್ಯದಲ್ಲಿ 1,191 ಮಂದಿಗೆ ಕೋವಿಡ್ ಪಾಸಿಟಿವ್
ಮುಂದಿನ ಲೇಖನಸಿದ್ದರಾಮಯ್ಯ ಕಿರಿಯ ಸಹೋದರ ರಾಮೇಗೌಡ ನಿಧನ: ಸಂತಾಪ ಸೂಚಿಸಿದ ಸಿಎಂ ಬೊಮ್ಮಾಯಿ