ಮನೆ ವ್ಯಾಯಾಮ ರಾತ್ರಿ ವೇಳೆ ವ್ಯಾಯಾಮ ಮಾಡಿದರೆ ಕಾಡುವ ಸಮಸ್ಯೆ

ರಾತ್ರಿ ವೇಳೆ ವ್ಯಾಯಾಮ ಮಾಡಿದರೆ ಕಾಡುವ ಸಮಸ್ಯೆ

0

ವ್ಯಾಯಾಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಆದರೆ ರಾತ್ರಿ ವೇಳೆ ವ್ಯಾಯಾಮ ಮಾಡುವುದು ಅಷ್ಟು ಒಳ್ಳೆಯದಲ್ಲ. ರಾತ್ರಿ ವೇಳೆ ವ್ಯಾಯಾಮ ಮಾಡಿದರೆ ಆಗುವ ಸಮಸ್ಯೆಗಳ ಬಗ್ಗೆ ಇಲ್ಲಿದೆ ಮಾಹಿತಿ.

​ಸ್ನಾಯುಗಳ ಬೆಳವಣಿಗೆ ಮೇಲೆ ಪರಿಣಾಮ

ತೀವ್ರವಾದ ವ್ಯಾಯಾಮವನ್ನು ಮಾಡುವಾಗ ನಿಮ್ಮ ಸ್ನಾಯುಗಳು ಹರಿದುಹೋಗುವ ಸಾಧ್ಯತೆಯಿದೆ. ಆದ್ದರಿಂದ ಸ್ನಾಯುಗಳು ಆರೋಗ್ಯಕರವಾಗಿರಲು ಮತ್ತು ಅವುಗಳ ಬೆಳವಣಿಗೆಯನ್ನು ಹೆಚ್ಚಿಸಲು ವಿಶ್ರಾಂತಿಯ ಅಗತ್ಯವಿದೆ. ಆದ್ದರಿಂದ ರಾತ್ರಿಯಲ್ಲಿ ವ್ಯಾಯಾಮ ಮಾಡುವುದರಿಂದ ನಿಮ್ಮ ನಿದ್ರೆಗೆ ಭಂಗ ತರಬಹುದು. ಇದು ಸ್ನಾಯುವಿನ ಬೆಳವಣಿಗೆಗೆ ಅಡ್ಡಿಯಾಗುತ್ತದೆ.

​ನರಮಂಡಲಗಳ ಮೇಲೆಯೂ ಪರಿಣಾಮ ಬೀರುತ್ತದೆ

ವ್ಯಾಯಾಮವು ನರಮಂಡಲವನ್ನು ಉತ್ತೇಜಿಸುತ್ತದೆ ಮತ್ತು ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಈ ನಾಡಿ ನಿಮ್ಮ ನಿದ್ರೆಯನ್ನು ಹಾಳು ಮಾಡುತ್ತದೆ. ರಾತ್ರಿಯಲ್ಲಿ ಓಟ, ಈಜು, ಸೈಕ್ಲಿಂಗ್, ಭಾರ ಎತ್ತುವಿಕೆಯಂತಹ ವ್ಯಾಯಾಮಗಳನ್ನು ಮಾಡಬೇಡಿ. ನರಮಂಡಲವು ವ್ಯಾಯಾಮದ ಸ್ಥಿತಿಯಿಂದ ಶಾಂತವಾಗಲು ಸಮಯ ತೆಗೆದುಕೊಳ್ಳುತ್ತದೆ. ರಾತ್ರಿ ವ್ಯಾಯಾಮ ಮಾಡುವುದರಿಂದ ನಿದ್ದೆ ಸರಿಯಾಗಿ ಆಗದೆ ಅನಾರೋಗ್ಯ ಕಾಡಬಹುದು.

​ನಿದ್ರಾಹೀನತೆ

ರಾತ್ರಿಯಲ್ಲಿ ವ್ಯಾಯಾಮ ಮಾಡುವುದರಿಂದ ಹೃದಯ ಬಡಿತ ಹೆಚ್ಚಾಗುವ ಸಾಧ್ಯತೆಯಿದೆ. ಇದು ನಿದ್ರೆಗೆ ಭಂಗ ತರಬಹುದು. ರಾತ್ರಿಯಲ್ಲಿ ವ್ಯಾಯಾಮವು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಇದು ಒತ್ತಡದ ಹಾರ್ಮೋನ್‌ಗಳನ್ನು ದೇಹಕ್ಕೆ ಬಿಡುಗಡೆ ಮಾಡುತ್ತದೆ. ಇದರಿಂದ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ.

​ಸುಸ್ತು ಕಾಡಬಹುದು

ಯಾವಾಗಲು ಮಲಗುವ ಮೊದಲು ಯಾವುದೇ ಕಠಿಣ ಕೆಲಸಗಳನ್ನು ಮಾಡಬಾರದು. ಇದರಿಂದ ದೇಹಕ್ಕೆ ಹೆಚ್ಚು ಸುಸ್ತಾಗಿ ಸರಿಯಾಗಿ ನಿದ್ದೆ ಬರದೆ ಮರುದಿನವೂ ಸುಸ್ತು ಕಾಣಿಸಿಕೊಳ್ಳಬಹುದು. ಆದ್ದರಿಂದ ನಿದ್ದೆಗೂ ಮೊದಲು ವ್ಯಾಯಾಮ ಮಾಡಬೇಡಿ. ಆದಷ್ಟು ಲಘುವಾಗಿ ಆಹಾರ ಸೇವಿಸಿ. ಆದರೆ ವಾಕಿಂಗ್‌ನಂತಹ ಲಘು ವ್ಯಾಯಾಮಗಳನ್ನು ಮಾಡಬಹುದು.

ಪಾಲಿಸಬೇಕಾದ ಅಂಶಗಳು

ವ್ಯಾಯಾಮವನ್ನು ರಾತ್ರಿ ಮಾಡುವುದಾದರೂ ಮಲಗುವ 3 ರಿಂದ 4 ಗಂಟೆಗಳ ಒಳಗೆ ಮಾಡಿ ಮುಗಿಸಿ. ಮಲಗುವ ಮೊದಲು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಇದರಿಂದ ನಿದ್ದೆ ಚೆನ್ನಾಗಿ ಬರುತ್ತದೆ. ಆರಾಮದಾಯವಾಗುವಂತಹ ಪರಿಮಳಯುಕ್ತ ದ್ರವ್ಯ ಅಥವಾ ಧೂಪದಿಂದ ಮಲಗುವ ಕೋಣೆಯನ್ನು ಶುಭ್ರಗೊಳಿಸಿ. ಇದರಿಂದ ಸೊಳ್ಳೆಗಳ ಕಾಟವೂ ಇರುವುದಿಲ್ಲ. ತಣ್ಣನೆಯ ನೀರಿನ ಸ್ನಾನವನ್ನು ಮಾಡಬಹುದು. ಇದು ದೇಹವನ್ನು ರಿಲಾಕ್ಸ್‌ ಮಾಡುತ್ತದೆ. ಜೊತೆಗೆ ಸೆಕೆಯ ವಾತಾವರಣವಿದ್ದರೆ ಆಹ್ಲಾದಕ ಅನುಭವವನ್ನು ನೀಡುತ್ತದೆ. ನಿದ್ದೆಗೂ ಉತ್ತಮವಾಗಿದೆ.

ಹಿಂದಿನ ಲೇಖನರಾಜ್ಯದಲ್ಲಿ 1425 ಮಂದಿಗೆ ಕೋವಿಡ್ ಪಾಸಿಟಿವ್
ಮುಂದಿನ ಲೇಖನದಕ್ಷಿಣ ಕನ್ನಡದಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡನ ಬರ್ಬರ ಹತ್ಯೆ