ಬೆಳಗಾವಿ : ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟರ್ ನಂಬರ್ ಪ್ಲೇಟ್ (HSRP) ಕಡ್ಡಾಯಗೊಳಿಸಲಾಗಿದ್ದು, ಹಳೆ ವಾಹನಗಳಿಗೆ ನಂಬರ್ ಪ್ಲೇಟ್ ಬದಲಾಯಿಸಲು 2024ರ ಫೆಬ್ರವರಿವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
ಶಾಸಕ ಯಶವಂತರಾಯ ಗೌಡ ಪಾಟೀಲ್ ರವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ಕೇಂದ್ರ ಸರ್ಕಾರದ ಆದೇಶದ ಅನುಸಾರ ರಾಜ್ಯದಲ್ಲಿ 1-04-19 ನಂತರ ಮಾರಾಟವಾಗುವ ಎಲ್ಲ ವಾಹನಗಳಿಗೂ HSRP ನಂಬರ್ ಪ್ಲೇಟ್ ಕಡ್ಡಾಯ ವಾಗಿದ್ದು, ಹಳೆ ವಾಹನಗಳಿಗೆ ನಂಬರ್ ಪ್ಲೇಟ್ ಬದಲಾಯಿಸಲು 17-02-24 ವರಿಗೆ ಕಾಲಾವಕಾಶ ನೀಡಲಾಗಿದೆ.
ಹೆಚ್. ಎಸ್. ಆರ್.ಪಿ ಅಥವಾ ಹೈ ಸೆಕ್ಯುರಿಟಿ ರಿಜಿಸ್ಟರ್ ಪ್ಲೇಟ್ ಟ್ಯಾಮ್ ಪರ್ ಪ್ರೂಫ್ ಮತ್ತು ಮರುಬಳಕೆ ಮಾಡಲಾಗದ ಲಾಕ್‌ಗಳನ್ನು ಹೊಂದಿರುವ ನಂಬರ್ ಪ್ಲೇಟ್‌ನ ಹೊಸ ರೂಪವಾಗಿದೆ. ಒಮ್ಮೆ ನಂಬರ್ ಪ್ಲೇಟ್ ಅನ್ನು ಅಳವಡಿಸಿದರೆ, ಅದನ್ನು ಸುಲಭವಾಗಿ ತೆಗೆದುಹಾಕಲು ಸಾಧ್ಯವಾಗುವುದಿ. ನಂಬರ್ ಪ್ಲೇಟ್‌ನ್ನು ಬದಲಾಯಿಸಲು ಪ್ರಯತ್ನಿಸಿದಲ್ಲಿ ಅದು ನಾಶವಾಗುತ್ತದೆ.
HSRP ಪ್ಲೇಟ್ ಗಳು ಒಂದೇ ರೀತಿಯ ಫಾಂಟ್ ಮತ್ತು ವಿನ್ಯಾಸವನ್ನು ಹೊಂದಿರುತ್ತದೆ ಮತ್ತು ನಂಬರ್ ಪ್ಲೇಟ್ ಎಡಭಾಗದಲ್ಲಿ ನೀಲಿ ಬಣ್ಣದ ಚಕ್ರವನ್ನು ಹೊಂದಿರುತ್ತದೆ. ಪ್ಲೇಟ್‌ನ ಉಳಿದ ಭಾಗದಲ್ಲಿ ವಾಹನ ವರ್ಗದ ಆಧಾರದ ಮೇಲೆ బణ ನಿರ್ಧರಿಸಲಾಗುತ್ತದೆ. ಉದಾಹರಣೆಗೆ ಖಾಸಗಿ ವಾಹನಗಳಿಗೆ ಬಣ್ಣದ ಹಿನ್ನೆಲೆಯಲ್ಲಿ ಕಪ್ಪು ಬಣ್ಣದ ಸಂಖ್ಯೆಗಳಿರುತ್ತವೆ. ನಂಬರ್ ಪ್ಲೇಟ್‌ನಲ್ಲಿ “ಇಂಡಿಯಾ” ಎಂಬ ಹಾಟ್ ಸ್ಟ್ಯಾಂಪ್ ಕೂಡ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ದೋಷ ಪೂರಿತ ನಂಬರ್ ಪ್ಲೇಟ್ ಹೊಂದಿರುವ ವಾಹನಗಳ ವಿರುದ್ಧ ಒಟ್ಟು 71,796 ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ. ಮುಂದಿನ ಕಾಲಾವಕಾಶದ ವರಿಗೆ ದಂಡ ವಿಧಿಸದಂತೆ ಪೊಲೀಸ್ ಪತ್ರ ಬರೆಯಲಾಗಿದೆ ಎಂದು ಉತ್ತರ ನೀಡಿದ್ದಾರೆ. ಸಾರಿಗೆ ಇಲಾಖೆಯು ಹೆಚ್. ಎಸ್. ಆರ್.ಪಿ ನಂಬರ್ ಪ್ಲೇಟ್ ಗಳಿಗೆ ದರ ನಿಗದಿ ಮಾಡಿರುವುದಿಲ್ಲ, ಸದರಿ ದರವನ್ನು ಹೆಚ್. ಎಸ್. ಆರ್.ಪಿ ತಯಾರಿಕಾ ನಿಗದಿಪಡಿಸುತ್ತಾರೆ ಎಂದು ಸಚಿವರು ತಿಳಿಸಿದ್ದಾರೆ