ಮೈಸೂರು : ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2024-25 ನೇ ಸಾಲಿಗೆ ಪೋಷಕ ವಾರ್ಷಿಕ ವರಮಾನ 2.5 ಲಕ್ಷದೊಳಗಿರುವ ಮೈಸೂರು ತಾಲೂಕಿನ ವಿವಿಧ ವಿದ್ಯಾ ಸಂಸ್ಥೆಗಳಲ್ಲಿ ಮೆಟ್ರಿಕ್ ನಂತರದ ವೃತ್ತಿಪರ ಕೋರ್ಸ್ ಗಳಿಗೆ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ರಾಜ್ಯ ವಿದ್ಯಾರ್ಥಿವೇತನ ತಂತ್ರಾ o ಶದ ssp.postmatric.karnataka.gov.in ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಜುಲೈ 10 ರವರೆಗೆ ವಿಸ್ತರಿಸಲಾಗಿದೆ .
ಅರ್ಹ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಆಧಾರ್ ಸೀಡಿಂಗ್ ಮಾಡಿಸುವುದು ಕಡ್ಡಾಯ . ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿ ಪ್ರಿಂಟ್ ಮತ್ತು ಆಧಾರ್ ಕಾರ್ಡ್ ಪ್ರತಿ ಗ್ರಾಮ ಒನ್ , ಕರ್ನಾಟಕ ಓನ್ , ಮೈಸೂರು ಒನ್ ಹಾಗೂ ಇತರೆ ಸೇವಾ ಸಿಂಧು ಕೇಂದ್ರಗಳಿಗೆ ಭೇಟಿ ನೀಡಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಬಯೋಮೆಟ್ರಿಕ್ ಇ – ದೃಢೀಕರಣ ಮಾಡಬೇಕಾಗಿದೆ . ಸದರಿಗಳಲ್ಲಿ ಇದು ಯಾವುದೇ ಹಣವನ್ನು ಪಾವತಿಸುವುದಿಲ್ಲ .
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಗ್ರೇಡ್ -1 ಸಮಾಜ ಕಲ್ಯಾಣ ಇಲಾಖೆ , ಮೈಸೂರು ತಾಲೂಕು ಡಾ . ಬಾಬು ಜಗಜೀವನ ರಾಮ್ ಭವನ ಕಟ್ಟಡ , ಆದಿಪಂಪ ರಸ್ತೆ ಒಂಟಿಕೊಪ್ಪಲು ಪೂರ್ವ , ಬಡಾವಣೆ ಪಡುವಾರಹಳ್ಳಿ ಮೈಸೂರು -12, ದೂ . ಸಂ : 0821-2520910 ಅನ್ನು ಸಂಪರ್ಕಿಸಬಹುದು ಎಂದು ಮೈಸೂರು ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಗ್ರೇಡ್ -1 ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಮುಂತಾದವು .














