ಮನೆ ಆರೋಗ್ಯ ಕಣ್ಣಿನ ತೊಂದರೆಗಳು

ಕಣ್ಣಿನ ತೊಂದರೆಗಳು

0

ಕಣ್ಣಿನ ನೋವು :-
ಇದು ಬ್ಯಾಕ್ಟೀರಿಯಾ ಮತ್ತು ವೈರಸ್ ಸೋಂಕಿನಿಂದ ಬರುವ ಒಂದು ಸಾಮಾನ್ಯ ಸಮಸ್ಯೆ. ಚಿಕ್ಕ ಮಕ್ಕಳಿಗೆ ಹೆಚ್ಚಾಗಿ ಬರುತ್ತದೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುತ್ತದೆ.


ಬ್ಯಾಕ್ಟೀಯಾ ಸೋಂಕಿನಿಂದ ಇದು ಬಂದಿದ್ದರೆ, ಕಣ್ಣು ಕೆಂಪಾಗಿ ಕೆಂಡ ದುಂಡೆಯಂತಿರುತ್ತದೆ. ಕಣ್ಣಿನ ರೆಪ್ಪೆಗಳು ಅಂಟಿಕೊಳ್ಳುತ್ತವೆ. ವೈರಸ್ ಸೋಂಕಿನಿಂದ ಬಂದಿದ್ದರೆ ರೆಪ್ಪೆಗಳು ದಪ್ಪವಾಗುತ್ತದೆ. ಆಂಟಿಬಯಾಟಿಕ್ ಔಷಧಿ ಐ ಡ್ರಾಪ್ಸನ್ನು ವೈದ್ಯರ ಸಲಹೆಯಂತೆ ಬಳಸಬೇಕು.
ಚಿಕ್ಕಮಕ್ಕಳಲ್ಲಿ ಶುಕ್ಲಗಳು :-
ಕೆಲವು ಮಕ್ಕಳಿಗೆ ಹುಟ್ಟುತ್ತಿದ್ದಂತೆ ಶುಕ್ಲಗಳಿರುತ್ತದೆ. ಇವು ಒಂದೇ ಕಣ್ಣಿನಲ್ಲಿರಬಹುದು. ಇಲ್ಲವೇ ಎರಡು ಕಣ್ಣಿನಲ್ಲಿರಬಹುದು. ಶುಕ್ಲಗಳು ಔಷಧಿಯಿಂದ ವಾಸಿಯಾಗುವುದಿಲ್ಲ. ಸಾಧ್ಯವಾದಷ್ಟು ಬೇಗ ಆಪರೇಷನ್ ಮಾಡಬೇಕು. ಕೆಲವರು ಸ್ವಲ್ಪ ವಯಸ್ಸು ಬಲಿತ ನಂತರ ಆಪರೇಷನ್ ಮಾಡಿಸೋಣವೆಂದು ತಡ ಮಾಡುತ್ತಾರೆ. ಇದು ತಪ್ಪು ತಡವಾದರೆ ಶಾಶ್ವತವಾಗಿ ಕುರುಡಾಗುವ ಸಂಭವವಿದೆ.
ಕಣ್ಣಿನಿಂದ ನೀರು ಸುರಿಯುವುದು (ಎಪಿಪೋರಾ) :-
ಕೆಲವು ಮಕ್ಕಳಿಗೆ ಹುಟ್ಟಿದಾಗಿನಿಂದಲೂ ಕಣ್ಣಿನಲ್ಲಿ ನೀರು ಸುರಿಯುತ್ತದೆ. ಲಾಕ್ರಿಮಲ್ ಡಕ್ಟ್ ಮುಚ್ಚಿಹೋಗಿರುವುದರಿಂದ ಹೀಗಾಗುತ್ತದೆ; ಇಲ್ಲವೇ ಲಾಕ್ರಿಮಲ್ ಡಕ್ಟ್ ರಚನೆಯ ದೋಷವಿರುತ್ತದೆ…
ನಾಸೋಲಾಕ್ರಿಮಲ್ ಡಕ್ಟ್ ಅಡ್ಡಿಯಾಗಿದ್ದಾಗ, ಆದಷ್ಟು ಬೇಗ ಚಿಕಿತ್ಸೆ ಆರಂಭಿಸಬೇಕು. ಕೆಲವರಿಗೆ ಸಾಕ್ ಮಸಾಜ್, ಆಂಟಿ ಬಯೋಟಿಕ್ ಹನಿ ಔಷಧಿಯಿಂದ ನೀರು ಸುರಿಯುವುದು ಕಡಿಮೆಯಾಗುತ್ತದೆ. ಈ ಚಿಕಿತ್ಸೆಯಿಂದ ನಾಲ್ಕು ವಾರಗಳಾದರೂ ವಾಸಿಯಾಗದಿದ್ದರೆ, ಸರ್ಜರಿ ಮಾಡಬೇಕಾಗುತ್ತದೆ.
ಟ್ರೆಕೋಮಾ :-
ಧೂಳು, ಜನಸಂದಣಿ ಹೆಚ್ಚಾಗಿರುವ ಕಡೆ ವಾಸಿಸುವವರಲ್ಲಿ, ಟ್ರೇಕೋಮಾ ರೋಗ ಹೆಚ್ಚಾಗಿ ಕಾಣಿಸುತ್ತದೆ. ಟ್ರೆಕೋಮಾದಿಂದ ಕಣ್ಣುಗಳು ನವೆಯಾಗುತ್ತದೆ. ಉಜ್ಜಬೇಕೆನಿಸುತ್ತದೆ. ಕಣ್ಣಿನಿಂದ ಹೆಚ್ಚಾಗಿ ನೀರು ಸುರಿಯುತ್ತದೆ. ಮೇಲಿನ ರೆಪ್ಪೆಗಳು ಕೆಂಪಗಾಗಿ ಬಾವು ಬಂದಿರುತ್ತದೆ. ಕೆಲವರಿಗೆ ಕಣ್ಣಿನಲ್ಲಿ ಕೀವಿನಂತೆ ಬರುತ್ತದೆ. ಸೂಕ್ತವಾದ ಐಡ್ರಾಪ್ಸ್ ನಿಂದ ನಿವಾರಿಸಿಕೊಳ್ಳಬಹುದು.
ಆಫ್ತಾಲ್ಮಿಯಾ ಮಿಯಿನೆಟೋರಂ :-
ಈ ಕಣ್ಣಿನ ರೋಗ ಮಗು ಹುಟ್ಟಿದ ಮೊದಲ ತಿಂಗಳಿನಲ್ಲಿ ಬರುತ್ತದೆ. ಹೆರಿಗೆ ಸಮಯದಲ್ಲಿ ತಾಯಿಯ ಜನನೇಂದ್ರಿಯದ ಮಗುವಿಗೆ ಈ ರೋಗದ ರೋಗಾಣುಗಳು ಸಂಕ್ರಮಣವಾಗುತ್ತದೆ. ತಾಯಿಯ ಯೋನಿಯಲ್ಲಿ ಗನೋರಿಯ ಅಥವಾ ಬ್ಯಾಕ್ಟೀರಿಯಾ ಸೋಂಕಿದ್ದರೆ ಈ ರೋಗಗಳು ಮಗುವಿನಲ್ಲಿ ಆಫ್ತಾಲ್ಮಿಯಾ ಮಿಯಿನೆಟೋರಂ ಎಂಬ ಕಣ್ಣಿನ ರೋಗವನ್ನುಂಟು ಮಾಡುತ್ತದೆ. ಕಣ್ಣಿನ ರೆಪ್ಪೆಗಳು ಊತ ಬಂದು ಕೆಳಗೆ ಗುಳ್ಳೆಗಳಾಗುತ್ತವೆ.
ತಾಯಿಯ ಯೋನಿ ಮಾರ್ಗದಲ್ಲಿ ಸೋಂಕಿದ್ದಿದ್ದಾದರೆ ಮಗು ಹುಟ್ಟುತ್ತಲೇ ಕಣ್ಣನ್ನು ಶುಭ್ರಗೊಳಿಸಿ, ಕಣ್ಣಿಗೆ ಆಂಟಿಬಯೋಟಿಕ್ ಹನಿ ಔಷಧಿಯನ್ನು ಹಾಕಬೇಕು. ತಾಯಿಗೆ ಕೂಡ ಯೋನಿ ಮಾರ್ಗದ ಸೋಂಕು ವಾಸಿಯಾಗಲು ಔಷಧಿ ಬಳಸಬೇಕು. ಮಗುವನ್ನು ಶುಭ್ರವಾದ ಕೈಗಳಿಂದ ಮುಟ್ಟಬೇಕು..

ಹಿಂದಿನ ಲೇಖನಚಾಕೊಲೇಟ್, ಹಣದ ಆಮಿಷ ತೋರಿಸಿ ಬಾಲಕರನ್ನು ಲೈಂಗಿಕ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದ ಆರೋಪಿ ಬಂಧನ
ಮುಂದಿನ ಲೇಖನಕಾಡಿನಲ್ಲಿ ಸಿಗುವ ಹಣ್ಣಿನ ಶರಬತ್ತು ಮಾಡಿ ಕುಡಿದ  ಮಹಿಳೆ ಸಾವು