ಮನೆ ಆರೋಗ್ಯ ಕಣ್ಣಿನ ಸಮಸ್ಯೆಗಳು: ಭಾಗ 4

ಕಣ್ಣಿನ ಸಮಸ್ಯೆಗಳು: ಭಾಗ 4

0

    ಡಯಾಬಿಟಿಸ್ ಇರುವ ರೋಗಿಗಳಿಗೆ ಮುನ್ಸೂಚನೆಗಾಗಿ ಯಾವ ಲಕ್ಷಣಗಳು ಕಾಣಿಸಿಕೊಳ್ಳದೆಯೇ ಕಣ್ಣುಗಳಿಗೆ ಅಪಾಯವಾಗುವ ಸಾಧ್ಯತೆಯಿದೆ. ಈ ಕಾರಣದಿಂದಾಗಿ ಡಯಾಬಿಟಿಸ್ ರೋಗಿಗಳು ಕೊನೆಯ ಪಕ್ಷ ವರ್ಷಕ್ಕೊಮ್ಮೆ, ನಿಯಮಿತವಾಗಿ ನೇತ್ರ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ. ಕಣ್ಣಿಗೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆಯಾದರೆ,ಕೂಡಲೇ ನೇತ್ರ ತಜ್ಞರನ್ನು ಕಾಣಬೇಕು.

Join Our Whatsapp Group

 ★ಡಯಾಬಿಟಿಸ್  ರೋಗಿಗಳಿಗೆ ಬರುವ ಕಣ್ಣಿನ ಕಾಯಿಲೆಗಳು ಯಾವುದೆಂದರೆ ಕ್ಯಾಟರಾಕ್ಟ್ : ಸಾಮಾನ್ಯವಾಗಿ ಸ್ವಚ್ಛವಾಗಿರುವ ಹಣ್ಣುಗಳಲ್ಲಿ ಪೊರೆಯುಂಟಾಗುತ್ತದೆ.

 ★ಡಯಾಬಿಟಿಕ್ ರೆಟಿನೋಪಿನ್ (ಕಣ್ಣು ಜಾಲದ ಬೇನೆ) : ಕಣ್ಣುಗಳ ಹಿಂಭಾಗದಲ್ಲಿರುವ ರೆಟಿ ನಾದಲ್ಲಿರುವ ರಕ್ತನಾಳಗಳು ಬಲಹೀನವಾದರೆ, ಇಲ್ಲವೇ ರಕ್ತ ಸ್ರಾವವಾದರೆ ಕುರುಡುತನ ಬರುವ ಅಪಾಯವಿದೆ.

 ★ಗ್ಲಾಕೋಮ ಕಣ್ಣಿನೊಳಗಿರುವ ದ್ರವಗಳ ಒತ್ತಡ ಅಧಿಕವಾಗುವ ಮೂಲಕ ಆಂಧತ್ವ ಬರುವ ಅವಕಾಶವಿದೆ.

ಅನುವಂಶೀ ಡಯಾಬಿಟಿಸ್

 ಬಂಧುಗಳಲ್ಲಿ ಮಧುಮೇಹ ರೋಗ ಇರುವವರಿಗೆ ಇದು ಬರುವ ಸಂಭವ ಹೆಚ್ಚಾಗಿರುತ್ತದೆ.

 ★ಟೈಪ್ -1 ಡಯಾಬಿಟಿಸ್ ಕುರಿತು ನೋಡಿದಾಗ :

 ತಂದೆಗೆ ಟೈಪ್ -ಒಂದು ಡಯಾಬಿಟಿಸ್ ಇದ್ದರೆ ಮಕ್ಕಳಿಗೆ ಬರುವ ಸಂಭವ ಶೇಕಡಾ 9ರಷ್ಟು ಇದೆ

 ತಾಯಿಗೆ ಟೈಪ್ -1 ಡಯಾಬಿಟಿಸ್ ಇದ್ದರೆ ಮಕ್ಕಳಲ್ಲಿಗೆ ಬರುವ ಅವಕಾಶ ಶೇ.3ರಷ್ಟಿರುತ್ತದೆ.

 ತಾಯಿ ತಂದೆ ಇಬ್ಬರಿಗೂ ಟೈಪ್ 1 ಡಯಾಬಿಟಿಸ್ ಇದ್ದರೆ ಅವರ ಮಕ್ಕಳಿಗೆ ಆ ರೋಗ ಬರುವ ಸಂಭವ ಶೇಕಡ 30 ರಷ್ಟಿರುತ್ತದೆ.

ಟೈಪ್-2 ಡಯಾಬಿಟಿಸ್ ಕುರಿತು ನೋಡಿದಾಗ :

 ತಾಯಿಗಾಗಲಿ, ತಂದೆಗಾಗಲಿ ಒಬ್ಬರಿಗೆ ಡಯಾಬಿಟಿಸದ್ದರೆ ಅವರ ಮಕ್ಕಳಿಗೆ ಆ ರೋಗ ಬರಲು 15ರಷ್ಟು ಅವಕಾಶವಿರುತ್ತದೆ

 ತಾಯಿ ತಂದೆ ಇಬ್ಬರಿಗೂ ಟೈಪು ಡಯಾಬಿಟಿಸ್ ಇದ್ದರೆ ಅವರ ಮಕ್ಕಳಿಗೆ ಟೈಟು ಡಯಾಬಿಟಿಸ್ ಬರುವ ಸಂಭಾವ್ಯ ಶೇಕಡ 75 ರಷ್ಟು ಇರುತ್ತದೆ.