ಮನೆ ಕ್ರೀಡೆ ಸಿಎಸ್‌ ಕೆ ಒಡೆತನದ ತಂಡಕ್ಕೆ ಫಫ್ ಡುಪ್ಲೆಸಿ ಸೇರ್ಪಡೆ

ಸಿಎಸ್‌ ಕೆ ಒಡೆತನದ ತಂಡಕ್ಕೆ ಫಫ್ ಡುಪ್ಲೆಸಿ ಸೇರ್ಪಡೆ

0

ನವದೆಹಲಿ (New Delhi): ಆರ್‌ ಸಿಬಿ ನಾಯಕ ಫಫ್ ಡುಪ್ಲೆಸಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಫ್ರ್ಯಾಂಚೈಸಿ ಒಡೆತನದ ಜೋಹಾನ್ಸ್‌ಬರ್ಗ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ದಕ್ಷಿಣ ಆಫ್ರಿಕಾ ಟಿ20 ಲೀಗ್ ಟೂರ್ನಿಯಲ್ಲಿ ಜೋಹಾನ್ಸ್‌ಬರ್ಗ್ ತಂಡವು ಆಡಲಿದೆ. 2011ರಿಂದ 2021ರವರೆಗೂ ಫಫ್‌ ಡುಪ್ಲೆಸಿ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಿದ್ದರು. ಈ ತಂಡವು ಇಂಗ್ಲೆಂಡ್‌ನ ಮೋಯಿನ್ ಅಲಿ ಅವರನ್ನೂ ಸೇರ್ಪಡೆ ಮಾಡಿಕೊಂಡಿದೆ ಎನ್ನಲಾಗಿದೆ. ಅಲಿ ಕೂಡ ಸದ್ಯ ಚೆನ್ನೈ ತಂಡದಲ್ಲಿದ್ದಾರೆ.

ಎಂಐ ಕೇಪ್‌ಟೌನ್ ತಂಡದಲ್ಲಿ ಮುಂಬೈ ಇಂಡಿಯನ್ಸ್ ಒಡೆತನ ಹೊಂದಿದೆ. ಉಳಿದಂತೆ ಡರ್ಬನ್, ಗೆಬೆರಾ, ಪಾರ್ಲ್ ಹಾಗೂ ಪ್ರಿಟೊರಿಯಾ ತಂಡಗಳನ್ನು ಕ್ರಮವಾಗಿ ಲಖನೌ ಸೂಪರ್ ಜೈಂಟ್ಸ್, ಸನ್‌ರೈಸರ್ಸ್ ಹೈದರಾಬಾದ್, ರಾಜಸ್ಥಾನ ರಾಯಲ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಫ್ರ್ಯಾಂಚೈಸಿಗಳು ಖರೀದಿಸಿವೆ.