ಮನೆ ರಾಜಕೀಯ ಗ್ಯಾರಂಟಿ ಯೋಜನೆ ಜಾರಿಯಾಗದಿದ್ದರೆ ಅರಾಜಕತೆ ಸೃಷ್ಠಿ: ಬಿ.ವೈ.ವಿಜಯೇಂದ್ರ

ಗ್ಯಾರಂಟಿ ಯೋಜನೆ ಜಾರಿಯಾಗದಿದ್ದರೆ ಅರಾಜಕತೆ ಸೃಷ್ಠಿ: ಬಿ.ವೈ.ವಿಜಯೇಂದ್ರ

0

ದಾವಣಗೆರೆ: ರಾಜ್ಯದ ಕೆಲವೆಡೆ ಜನರು ಬಸ್ ನಲ್ಲಿ ಟಿಕೆಟ್ ತೆಗೆದುಕೊಳ್ಳದೆ ಗಲಾಟೆ ಮಾಡುತ್ತಾ ಇದ್ದಾರೆ. ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು ಗಲಾಟೆಯಾಗುತ್ತಿದೆ. ಗ್ಯಾರಂಟಿ ಯೋಜನೆ ಬೇಗ ಜಾರಿ ಮಾಡದೇ ಇದ್ದಲ್ಲಿ ರಾಜ್ಯದಲ್ಲಿ ಅರಾಜಕತೆ ಉಂಟಾಗುತ್ತದೆ ಎಂದು ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

Join Our Whatsapp Group

ಚುನಾವಣಾ ಗೆಲುವಿನ ಬಳಿಕ ಹರಿಹರ ಕನಕ ಗುರುಪೀಠದ ಕನಕ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಯಾರು ಕೂಡ ನಿರೀಕ್ಷೆ ಮಾಡದ ರೀತಿಯಲ್ಲಿ ಕಾಂಗ್ರೆಸ್ ಗೆ ಬಹುಮತ ಸಿಕ್ಕಿದೆ. ಈ ಮೂಲಕ ಆಡಳಿತದ ಗದ್ದುಗೆ ಏರಿರುವುದು ಡಬಲ್ ಸ್ಟೇರಿಂಗ್ ಸರ್ಕಾರ ಎಂದು ವ್ಯಂಗ್ಯವಾಡಿದ್ದಾರೆ.

 ಸಿಎಂ ಒಂದು ಕಡೆ, ಡಿಸಿಎಂ ಇನ್ನೊಂದು ಕಡೆ ಸ್ಟೇರಿಂಗ್ ಎಳೆಯುತ್ತಾ ಇದ್ದಾರೆ. ಹೀಗಾಗಿ ಡಬಲ್ ಸ್ಟೇರಿಂಗ್ ಸರ್ಕಾರ ಎಂದು ಹೇಳಿದ್ದೇನೆ ಎಂದರು.

ವಿರೋಧ ಪಕ್ಷದ ನಾಯಕನಾಗುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ನಾನು ಕೇವಲ ಶಿಕಾರಿಪುರದ ಶಾಸಕನಷ್ಟೇ ಎಂದರು.