ಮನೆ ಅಪರಾಧ ಕಣಚೂರು ಆಸ್ಪತ್ರೆಗೆ ಹುಸಿ‌ ಬಾಂಬ್ ಬೆದರಿಕೆ ಪ್ರಕರಣ: ಆರೋಪಿಯ ಬಂಧನ

ಕಣಚೂರು ಆಸ್ಪತ್ರೆಗೆ ಹುಸಿ‌ ಬಾಂಬ್ ಬೆದರಿಕೆ ಪ್ರಕರಣ: ಆರೋಪಿಯ ಬಂಧನ

0

ಕೊಣಾಜೆ: ದೇರಳಕಟ್ಟೆ ಸಮೀಪದ ಕಣಚೂರು ಮೆಡಿಕಲ್ ಕಾಲೇಜಿಗೆ ಹುಸಿ ಬಾಂಬ್ ಬೆದರಿಕೆ ನೀಡಿದ ಪ್ರಕರಣದಲ್ಲಿ ತೀವ್ರ ತನಿಖೆ ನಡೆಸಿದ ಉಳ್ಳಾಲ ಪೊಲೀಸರು ಆರೋಪಿಯನ್ನು ಗುರುತಿಸಿ ಬಂಧಿಸಿದ್ದಾರೆ.‌

ಬಂಧಿಸಲ್ಪಟ್ಟಿರುವವರು ಚಲಸಾನಿ ಮೋನಿಕಾ ಚೌಧರಿ, ಅವರು ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಪಿ.ಜಿ. ವಿದ್ಯಾರ್ಥಿನಿಯಾಗಿದ್ದಾರೆ.‌

ಜೂನ್ 4ರಂದು ಬೆಳಗ್ಗೆ ಅನಾಮಿಕ ಫೋನ್ ಕರೆ ಬಂದಿದ್ದು, “ಕಾಲೇಜಿನಲ್ಲಿ ಬಾಂಬ್ ಇಡಲಾಗಿದೆ. ಹನ್ನೊಂದು ಗಂಟೆಗೆ ಸ್ಫೋಟವಾಗಲಿದೆ” ಎಂಬ ಘೋಷಣೆ ಮಾಡಲಾಗಿತ್ತು. ಈ ಕರೆ ಆಘಾತದ ಹಿನ್ನಲೆಯಲ್ಲಿ ಕಾಲೇಜ್ ಆಡಳಿತ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿತ್ತು. ಪ್ರಕರಣ ಗಂಭೀರ ಸ್ವರೂಪದ್ದೆಂದು ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ, ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದರು. ಪರಿಶೀಲನೆಯ ನಂತರ ಅದು ಹುಸಿ ಬೆದರಿಕೆ ಎಂದು ದೃಢಪಟ್ಟಿತ್ತು.

ಘಟನೆಗೆ ಸಂಬಂಧಿಸಿದಂತೆ ಪಿ.ಜಿ.ವಿದ್ಯಾರ್ಥಿನಿ ಚಲಸಾನಿ ಮೋನಿಕಾ ಚೌಧರಿ ಎಂಬಾಕೆ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬಳಿಕ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು ತಂಡ ರಚಿಸಿ ತನಿಖೆ ನಡೆಸಿ ತಾಂತ್ರಿಕ ವಿಶ್ಲೇಷಣೆ ನಡೆಸಿದಾಗ ದೂರು ನೀಡಿದಾಕೆಯೇ ಆರೋಪಿ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇಂದು ಪೊಲೀಸರು ಆರೋಪಿ ಮೋನಿಕಾ ಚೌಧರಿಯನ್ನು ಬಂಧಿಸಿದ್ದಾರೆ.

ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ಮೋನಿಕಾ ಚೌಧರಿ ಅವರು ಅಂದು ತಮ್ಮ ಪಿ.ಜಿ. ಸೆಮಿನಾರ್ ನಡೆಯಬೇಕಿತ್ತು. ಅದನ್ನು ತಪ್ಪಿಸಲು ಏರ್ಪಡಿಸಿದ್ದ ಹುಸಿ ಬೆದರಿಕೆಯ ಚಟುವಟಿಕೆಗೆ ಅವರು ಕೈ ಹಾಕಿದ್ದಾರೆಂದು ತಿಳಿಸಿದ್ದಾರೆ.