ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಮಾವಿನ ಬೆಲೆಯಲ್ಲಿ ಬಹಳ ಕುಸಿತವಾಗಿದೆ. ಪ್ರತಿಬಾರಿಯಂತೆ ಬೆಲೆ ಇರದ ಕಾರಣ ಮಾವು ಬೆಳೆಗಾರರು ಸಂಕಷ್ಟದಲ್ಲಿದ್ದರು. ಆದರೆ ಇದೀಗ ಕೇಂದ್ರ ಸರ್ಕಾರ ಅವರಿಗೆ ಗುಡ್ ನ್ಯೂಸ್ ನೀಡಿದ್ದು, ಪರಿಹಾರ ಘೋಷಣೆ ಮಾಡಿದೆ.
ಕೇಂದ್ರಕ್ಕೆ ಪತ್ರ ಬರೆದಿದ್ದ ಎಚ್.ಡಿ. ಕೆ
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಕರ್ನಾಟಕದಲ್ಲಿ ಮಾವಿನ ಬೆಲೆ ಇಳಿದ ಕಾರಣದಿಂದ ರೈತರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ಅವರಿಗೆ ಪರಿಹಾರ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್ ಮಾವಿಗೆ ರೂ.1616 ಪರಿಹಾರ ಘೋಷಣೆ ಮಾಡಿದೆ.
ರಾಜ್ಯದ 2,50,000 ಮೆಟ್ರಿಕ್ ಟನ್ ಮಾವಿಗೆ ಪರಿಹಾರ
ಕೇಂದ್ರ ಕೃಷಿ ಸಚಿವರು ಈ ಪರಿಹಾರ ಹಣ ಘೋಷಿಸಿದ ಬೆನ್ನಲ್ಲೆ, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಹೆಚ್ಚಿನ ಮಾಹಿತಿ ನೀಡಿದ್ದು,ನಾನು ಬರೆದ ಪತ್ರಕ್ಕೆ ಕೃಷಿ ಸಚಿವರು ಸ್ಪಂದಿಸಿದ್ದು, 2025-26ನೇ ಸಾಲಿನ ಮಾವು ಬೆಳೆಗೆ ಪರಿಹಾರ ಘೋಷಣೆ ಮಾಡಿದ್ದಾರೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಕೇಂದ್ರದಿಂದ ಪ್ರತಿ ಕ್ವಿಂಟಾಲ್ ಮಾವಿಗೆ 1616 ರೂ ಪರಿಹಾರ ನೀಡಲಾಗಿದೆ. ಹಾಗೆಯೇ, ನಮ್ಮ ರಾಜ್ಯದ ಸುಮಾರು 2,50,000 ಮೆಟ್ರಿಕ್ ಟನ್ ಮಾವಿಗೆ ಪರಿಹಾರ ನೀಡಲಾಗುತ್ತದೆ. ಇನ್ನು ಕೇಂದ್ರ ಸರ್ಕಾರ ಎಂಐಎಸ್ ಯೋಜನೆಯಡಿ ಪರಿಹಾರ ನೀಡಲು ಆದೇಶ ನೀಡಿದೆ ಎಂದು ಹೇಳಿದ್ದಾರೆ.














