ಮದ್ದೂರು:ಸಮನ್ಸ್ ಮತ್ತು ವಾರಂಟ್‌ಗಳನ್ನು ಎದುರು ಅರ್ಜಿದಾರರಿಗೆ ಜಾರಿ ಮಾಡದೆ, ನ್ಯಾಯಾಲಯಕ್ಕೆ ಸುಳ್ಳು ವರದಿಗಳನ್ನು ನೀಡಿ ಕರ್ತವ್ಯ ಲೋಪವೆಸಗಿದ ಆರೋಪದ ಮೇಲೆ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅಮಾನತು ಮಾಡಿದ್ದಾರೆ.
ಮದ್ದೂರು ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ರವಿ ಮತ್ತು ಕಾನ್‌ಸ್ಟೆಬಲ್ ವಿಷ್ಣುವರ್ಧನ ಅಮಾನತುಗೊಂಡವರು.
2023ರಲ್ಲಿ ಮದ್ದೂರು ತಾಲ್ಲೂಕಿನ ಚನ್ನಸಂದ್ರ ಗ್ರಾಮದ ಜಮೀನು ಗಲಾಟೆ ವಿಚಾರವಾಗಿ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಠಾಣೆಯ ಸಮನ್ಸ್ ಮತ್ತು ವಾರಂಟ್ ಜಾರಿ ಮಾಡಬೇಕಿದ್ದ ಕಾನ್‌ಸ್ಟೆಬಲ್‌ಗಳು ದೂರುದಾರರ ಜತೆ ಶಾಮೀಲಾಗಿ ಕರ್ತವ್ಯ ಲೋಪವೆಸಗಿದ್ದರು.














