ಚಿಕ್ಕಮಗಳೂರು : ಬೆಂಗಳೂರಿನಲ್ಲಿ ವೈದ್ಯೆ ಕೃತಿಕಾ ರೆಡ್ಡಿ ಹತ್ಯೆ ಜನರನ್ನ ಬೆಚ್ಚಿಬೀಳಿಸಿದೆ. ಈ ನಡುವೆ ಚಿಕ್ಕಮಗಳೂರಿನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಅಜ್ಜಂಪುರ ತಾಲೂಕಿನ ಚಿಕ್ಕನಾವಂಗಲ ಗ್ರಾಮದಲ್ಲಿ ಘಟನೆ ನಡೆದಿದೆ. ತನು (25) ಕೊಲೆಯಾದ ಮಹಿಳೆ, ರಮೇಶ್ ಕೊಲೆಗೈದ ಪತಿ. ಮನೆಯ ರೂಮಿನ ತುಂಬೆಲ್ಲ ರಕ್ತ ಚೆಲ್ಲಿದ್ದು, ರಕ್ತದ ಮಡುವಿನಲ್ಲಿ ಪತ್ನಿಯ ಶವ ಪತ್ತೆಯಾಗಿದೆ.
ತನು & ರಮೇಶ್ 7 ವರ್ಷಗಳ ಹಿಂದೆ ಮದ್ವೆಯಾಗಿದ್ದರು. ದಂಪತಿಗೆ 6 ವರ್ಷದ ಗಂಡು ಮಗು ಇದೆ. ಗಂಡನೊಂದಿಗೆ ಜಗಳ ಮಾಡಿಕೊಂಡಿದ್ದ ತನು 2 ವರ್ಷಗಳಿಂದ ಪ್ರತ್ಯೇಕವಾಗಿ ವಾಸವಿದ್ದಳು.
ಹೀಗಾಗಿ ಇಬ್ಬರ ನಡುವೆ ಕಲ ಇತ್ತು. ಬುಧವಾರ ರಾತ್ರಿ ಕುಡಿದು ಬಂದಿದ್ದ ರಮೇಶ್, ಪತ್ನಿಯನ್ನು ಕ್ರೂರವಾಗಿ ಕೊಲೆ ಮಾಡಿದ್ದಾರೆ. ಈ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















