ಮನೆ ಅಪರಾಧ ಕೌಟುಂಬಿಕ ಕಲಹ:  ಒಂದು ದಿನದ ಹಸುಗೂಸು ಬಲಿ

ಕೌಟುಂಬಿಕ ಕಲಹ:  ಒಂದು ದಿನದ ಹಸುಗೂಸು ಬಲಿ

0

ಮೈಸೂರು: ಕೌಟುಂಬಿಕ ಕಲಹಕ್ಕೆ ಒಂದು ದಿನದ ಹಸುಗೂಸು ಬಲಿಯಾದ ಘಟನೆ ಜಿಲ್ಲೆಯ ಹೆಚ್​ ಡಿ ಕೋಟೆ ತಾಲೂಕಿನ ಕಣಿಯಹುಂಡಿ ಗ್ರಾಮದಲ್ಲಿ ನಡೆದಿದೆ.

Join Our Whatsapp Group

ಪತಿ ಜೊತೆ ಜಗಳವಾಡಿದ ಗರ್ಭಿಣಿ ಆತ್ಮಹತ್ಯೆಗಾಗಿ ಮಾತ್ರೆ ಸೇವಿಸಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿಗದಿತ ಅವಧಿಗೂ ಮುನ್ನವೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದಾದ ಒಂದು ದಿನಕ್ಕೆ ಹಸುಗೂಸು ಸಾವನ್ನಪ್ಪಿದೆ.

ಕಣಿಯನಹುಂಡಿ ಗ್ರಾಮದ ಸಿದ್ದರಾಜು ಮತ್ತು ಅರ್ಪಿತಾ ದಂಪತಿ ಎರಡು ಮೂರು ತಿಂಗಳಲ್ಲಿ ತಂದೆ-ತಾಯಿಯಾಗಲಿದ್ದರು. ವೈದ್ಯರು ಸೆಪ್ಟೆಂಬರ್ ​ಗೆ ಹೆರಿಗೆ ದಿನಾಂಕ ನಿಗದಿ ಮಾಡಿದ್ದರು. ಈ ಮಧ್ಯೆ ಇಬ್ಬರ ನಡುವೆ ಕೌಟುಂಬಿಕ ಕಲಹ ಏರ್ಪಟ್ಟಿದೆ. ಇದರಿಂದ ಮನನೊಂದ ಅರ್ಪಿತಾ ಆತ್ಮಹತ್ಯೆ ಮಾಡಿಕೊಳ್ಳಲು ಯಾವುದೋ ಮಾತ್ರೆಗಳನ್ನು ಸೇವಿಸಿದ್ದಾರೆ.

ಮಾತ್ರೆಗಳನ್ನು ಸೇವಿಸಿದ ಕೂಡಲೇ ಎಚ್ಚೆತ್ತ ಕುಟುಂಬಸ್ಥರು ಆಕೆಯನ್ನು ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಿದ್ದಾರೆ. ಆಸ್ಪತ್ರೆಯಲ್ಲಿ ನಿಗದಿತ ಅವಧಿಗೂ ಮುನ್ನವೇ ಅರ್ಪಿತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಜನ್ಮ ನೀಡಿದ ಒಂದೇ ದಿನಕ್ಕೆ ಮಗು ಸಾವನ್ನಪ್ಪಿದೆ. ಆತ್ಮಹತ್ಯೆಗೆ ಯತ್ನಿಸಿದ ಅರ್ಪಿತಾಗೆ ಚಿಕಿತ್ಸೆ ಮುಂದುವರಿದಿದೆ.

ಘಟನೆ ಸಂಬಂಧ ಹೆಚ್​ ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.