ಮನೆ ಅಪರಾಧ ತಮ್ಮ ಇಚ್ಛೆಯ ವಿರುದ್ಧವಾಗಿ ಮದುವೆಯಾಗಿದ್ದಕ್ಕೆ ಯುವತಿಯನ್ನು ಕೊಂದು ಸುಟ್ಟು ಹಾಕಿದ ಕುಟುಂಬಸ್ಥರು

ತಮ್ಮ ಇಚ್ಛೆಯ ವಿರುದ್ಧವಾಗಿ ಮದುವೆಯಾಗಿದ್ದಕ್ಕೆ ಯುವತಿಯನ್ನು ಕೊಂದು ಸುಟ್ಟು ಹಾಕಿದ ಕುಟುಂಬಸ್ಥರು

0

ರಾಜಸ್ಥಾನ: ತಮಗೆ ಇಷ್ಟವಿಲ್ಲದಿದ್ದರೂ ಮದುವೆಯಾಗಿದ್ದಾಳೆ ಎನ್ನುವ ಕೋಪದಲ್ಲಿ ಕುಟುಂಬದವರು ಮಗಳನ್ನೇ ಕೊಂದು, ಸುಟ್ಟು ಹಾಕಿರುವ ಘಟನೆ ರಾಜಸ್ಥಾನದ ಜಲಾವರ್​ ಜಿಲ್ಲೆಯಲ್ಲಿ ನಡೆದಿದೆ.

Join Our Whatsapp Group

 20 ವರ್ಷದ ಯುವತಿ ತಮ್ಮ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಳು. ಇದಾದ ಒಂದು ವರ್ಷದ ಬಳಿಕ ಆಕೆಯನ್ನು ಹತ್ಯೆ ಮಾಡಲಾಗಿದೆ.

ಇತ್ತೀಚಿನ ದಿನಗಳಲ್ಲಿ ಮರ್ಯಾದಾ ಹತ್ಯೆಗಳು ಹೆಚ್ಚಾಗಿ ನಡೆಯುತ್ತಿದೆ, ಮಗಳ ಸಂತೋಷವನ್ನು ಧಿಕ್ಕರಿಸಿ, ಕೇವಲ ಗೌರವದ ಬಗ್ಗೆ ಮಾತ್ರ ಆಲೋಚನೆ ಮಾಡಿ ತಪ್ಪು ದಾರಿ ಹಿಡಿಯುವವರ ಸಂಖ್ಯೆ ಹೆಚ್ಚಾಗಿದೆ.

ಎಟಿಎಂನಿಂದ ಹಣ ತೆಗೆಯುತ್ತಿದ್ದಾಗ ಆಕೆಯನ್ನು ಅಪಹರಿಸಿ ನಂತರ ಕೊಲೆ ಮಾಡಿದ್ದಾರೆ ಎಂದು ಮಹಿಳೆಯ ಪತಿ ರವೀಂದ್ರ ಭಿಲ್ ಆರೋಪಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ, ಅದರಲ್ಲಿ ಯುವತಿಯನ್ನು ಕೊಂದು ಆಕೆಯ ಅಂತ್ಯಸಂಸ್ಕಾರ ಮಾಡಿರುವುದು ತಿಳಿದುಬಂದಿದೆ. ಸಿಸಿಟಿವಿ ಫೂಟೇಜ್​ನಲ್ಲಿ ನಾಲ್ವರು ವ್ಯಕ್ತಿಗಳು ಈ ಅಪರಾಧದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.

ಕೊಲೆಯ ಹಿಂದಿನ ಉದ್ದೇಶದ ಬಗ್ಗೆ ತನಿಖೆ ನಡೆಸಲಾಗುತ್ತಿದೆ, ಒಂದು ವರ್ಷದ ಹಿಂದೆ ಭಿಲ್ ತನ್ನ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಶಿಮ್ಲಾ ಕುಶ್ವಾಹಳನ್ನು ವಿವಾಹವಾದರು, ಅಲ್ಲಿಂದ ಮಧ್ಯಪ್ರದೇಶಕ್ಕೆ ತೆರಳಿದ್ದರು.

ಹಿಂದಿನ ಲೇಖನನ್ಯಾಯಾಲಯಗಳಲ್ಲಿ ಸಾಕ್ಷಿ, ಆರೋಪಿಗಳಿಗೆ ಗೌರವ ಸೂಚಕ ಸಂಬೋಧನೆ: ಕಾನೂನು ಮತ್ತು ನೀತಿ-2023ಕ್ಕೆ ಸಂಪುಟದ ಅನುಮೋದನೆ
ಮುಂದಿನ ಲೇಖನಗ್ರಾಹಕನಿಗೆ ಕಿರುಕುಳ: ಏರ್‌ ಟೆಲ್‌ ಗೆ ವಿಧಿಸಿದ್ದ ₹5 ಲಕ್ಷ ದಂಡ ಆದೇಶ ಎತ್ತಿಹಿಡಿದ ದೆಹಲಿ ಗ್ರಾಹಕರ ನ್ಯಾಯಾಲಯ