ಸೆಲೆಬ್ರೆಟಿಗಳನ್ನು ನೋಡೋದಕ್ಕೆ ಫ್ಯಾನ್ಸ್ ಮುಗಿಬೀಳೋದು ಸಹಜ. ಆದರೆ ಅಭಿಮಾನಿಗಳ ಅತ್ಯುತ್ಸಾಹ ಬಹಳಷ್ಟು ಸಲ ನಟ-ನಟಿಯರಿಗೆ ಸಮಸ್ಯೆ ತಂದೊಡ್ಡಿರುವುದೂ ಉಂಟು ಇದಕ್ಕೆ ನಟಿ ನಿಧಿ ಅಗರ್ವಾಲ್ ಕೂಡ ಹೊರತಾಗಿಲ್ಲ.
ಪ್ರಭಾಸ್ ನಟನೆಯ ‘ದಿ ರಾಜಾಸಾಬ್’ ಸಾಂಗ್ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಾಯಕಿ ನಿಧಿ ಅಗರ್ವಾಲ್ ವಾಪಸ್ ತೆರಳುವಾಗ ಕಹಿ ಅನುಭವ ಉಂಟಾಗಿದೆ. ಫ್ಯಾನ್ಸ್ ಕ್ರೌಡ್ ಮಧ್ಯೆ ನಟಿ ಸಿಕ್ಕಿಕೊಂಡು ಭಾರೀ ಕಸಿವಿಸಿ ಅನುಭವಿಸಿದ್ದಾರೆ. ಈ ಕುರಿತ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
‘ದಿ ರಾಜಾ ಸಾಬ್’ ಚಿತ್ರದ ʻಸಹನಾ ಸಹನಾʼ 2ನೇ ಹಾಡು ನಿನ್ನೆ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಯ್ತು. ಹೈದರಾಬಾದ್‌ನ ಮಾಲ್‌ವೊಂದರಲ್ಲಿ ನಡೆದ ಸಮಾರಂಭದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಈ ಮೆಲೋಡಿ ಹಾಡನ್ನ ರಿಲೀಸ್ ಮಾಡಲಾಗಿತ್ತು. ಪ್ರಭಾಸ್ ಜೊತೆ ಈ ಚಿತ್ರದಲ್ಲಿ ನಿಧಿ ಅಗರ್ವಾಲ್, ಮಾಳವಿಕಾ ಮೋಹನನ್, ರಿದ್ಧಿ ಕುಮಾರ್ ನಾಯಕಿಯರಾಗಿ ನಟಿಸಿದ್ದಾರೆ. ಎಸ್. ತಮನ್ ಸಂಗೀತ ಈ ಹಾರರ್ ಕಾಮಿಡಿ ಚಿತ್ರಕ್ಕಿದೆ.
ನಿಧಿ ಕಾರ್ಯಕ್ರಮ ಮುಗಿಸಿ ಹೊರಗಡೆ ಬಂದಾಗ ಪ್ರಭಾಸ್ ಫ್ಯಾನ್ಸ್ ಒಮ್ಮಲೇ ಜೇನುಹುಳುಗಳಂತೆ ಮುತ್ತಿಕೊಂಡರು, ಸೆಲ್ಫಿಗಾಗಿ ಮುಗಿಬಿದ್ದಿದ್ದರು. ಕೆಲವರು ಆಕೆಯನ್ನು ಮುಟ್ಟುವ ಪ್ರಯತ್ನ ಕೂಡ ಮಾಡಿದ್ರು. ಕೊನೆಗೆ ಆಕೆಯ ಬಾಡಿಗಾರ್ಡ್ಸ್ ಹೇಗೋ ಸೇಫಾಗಿ ಕಾರು ಹತ್ತಿಸಿದ್ರು.
ಆದರೂ ಕೆಲ ಕ್ಷಣಗಳು ಪರಿಸ್ಥಿತಿ ಕೈ ಮೀರಿತ್ತು. ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಅದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಒಂದು ಹಂತದಲ್ಲಿ ನಿಧಿ ಕಾರ್ ಹತ್ತುವುದೇ ಕಷ್ಟ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾರ್ ಒಳಗೆ ಕುಳಿತಾಗಲೇ ನಿಧಿ ನಿಟ್ಟುಸಿರು ಬಿಟ್ಟರು ಈ ಬಗ್ಗೆ ಕೆಲ ಸೆಲೆಬ್ರೆಟಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
‘ಮುನ್ನ ಮೈಕೆಲ್’ ಚಿತ್ರದ ಮೂಲಕ ನಿಧಿ ಚಿತ್ರರಂಗಕ್ಕೆ ಬಂದಿದ್ದರು. ಮಿ. ಮಜ್ನು, ಇಸ್ಮಾರ್ಟ್ ಶಂಕರ್, ಹೀರೊ, ಹರಿಹರ ವೀರಮಲ್ಲು ಸೇರಿ ಒಂದಷ್ಟು ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ. ಆದರೆ ಈವರೆಗೆ ದೊಡ್ಡ ಬ್ರೇಕ್ ಮಾತ್ರ ಸಿಕ್ಕಿಲ್ಲ.
ಹೈದರಾಬಾದ್ ಬೆಡಗಿ ನಿಧಿ ಅಗರ್ವಾಲ್‌ಗೆ ದೊಡ್ಡ ಫ್ಯಾನ್ಸ್ ಬಳಗವೇ ಇದೆ. ಸೋಷಿಯಲ್ ಮೀಡಿಯಾದಲ್ಲಿ ಭಾರೀ ಫ್ಯಾನ್ ಫಾಲೋಯಿಂಗ್ ಇದೆ. ಅಭಿಮಾನಿಯೊಬ್ಬರು ಆಕೆಯ ಮೂರ್ತಿಗೆ ಹಾಲಿನ ಅಭಿಷೇಕ ಮಾಡಿದ್ದ ವೀಡಿಯೋವೊಂದು ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು.















