ಮನೆ ರಾಜ್ಯ ನಟ ದರ್ಶನ್‌ ಬರ್ತ್‌ಡೇ ಸೆಲೆಬ್ರೇಶನ್‌ಗೆ ಮುಗಿಬಿದ್ದ ಫ್ಯಾನ್ಸ್ – ಹೈಡ್ರಾಮಾ ಮಾಡಿದವನಿಗೆ ಪೊಲೀಸರಿಂದ ಕಪಾಳಮೋಕ್ಷ..!

ನಟ ದರ್ಶನ್‌ ಬರ್ತ್‌ಡೇ ಸೆಲೆಬ್ರೇಶನ್‌ಗೆ ಮುಗಿಬಿದ್ದ ಫ್ಯಾನ್ಸ್ – ಹೈಡ್ರಾಮಾ ಮಾಡಿದವನಿಗೆ ಪೊಲೀಸರಿಂದ ಕಪಾಳಮೋಕ್ಷ..!

0

ನಟ ದರ್ಶನ್‌ ಹುಟ್ಟುಹಬ್ಬದ ಆಚರಣೆಗೆ ಅವರ ಅನುಪಸ್ಥಿತಿಯಲ್ಲೂ ಆರ್‌ಆರ್ ನಗರದ ನಿವಾಸದ ಬಳಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಪೊಲೀಸರು ದರ್ಶನ್‌ ಮನೆಯ ರಸ್ತೆಯಲ್ಲಿ ಬ್ಯಾರಿಕೇಡ್‌ ಹಾಕಿ ಅಭಿಮಾನಿಗಳನ್ನು ತಡೆಯುತ್ತಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬ ಅತಿರೇಕದ ವರ್ತನೆ ತೋರಿದ್ದು, ಆತನಿಗೆ ಪೊಲೀಸ್‌ ಅಧಿಕಾರಿಯೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ದರ್ಶನ್‌, ಈ ಬಾರಿಯ ಹುಟ್ಟುಹಬ್ಬವನ್ನು ಜೈಲಲ್ಲೇ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಫ್ಯಾನ್ಸ್‌ ಮಾತ್ರ ದರ್ಶನ್‌ ಜೈಲಲ್ಲಿದ್ರೂ, ಮನೆ ಬಳಿ ಜಮಾಯಿಸುತ್ತಿದ್ದಾರೆ. ಅಲ್ಲದೇ ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಅವರ ಫ್ಯಾನ್ಸ್‌ ಮಾಡುತ್ತಿದ್ದಾರೆ.

ಬಾಸ್‌ಗೆ ವಿಶ್ ಮಾಡಿದ ಕನ್ನಡ ಸಿನಿ ಸ್ಟಾರ್ಸ್ – ಇಂದು (ಫೆಬ್ರವರಿ 16) ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜನ್ಮದಿನ. ದುರಾದೃಷ್ಟವಶಾತ್ ದರ್ಶನ್ ಈಗ ಜೈಲಿನಲ್ಲಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಸಿಲುಕಿರುವ ದರ್ಶನ್‌ ಜೈಲುವಾಸ ಅನುಭವಿಸುತ್ತಾರೆ. ಹುಟ್ಟುಹಬ್ಬದಂದು ದರ್ಶನ್ ಅವರನ್ನ ಆತ್ಮೀಯರು, ಫ್ಯಾನ್ಸ್ ಸಿಕ್ಕಾಪಟ್ಟೆ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ದರ್ಶನ್‌ ಹುಟ್ಟುಹಬ್ಬದ ಪ್ರಯುಕ್ತ ಪತ್ನಿ ವಿಜಯಲಕ್ಷ್ಮೀ ಸ್ಪೆಷಲ್ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ವಿಶ್ ಮಾಡಿದ್ದಾರೆ. ಇನ್ನೂ ರಕ್ಷಿತಾ ಪ್ರೇಮ್, ಅನುಷಾ ರೈ, ಯಶಸ್ ಸೂರ್ಯ, ಚಿಕ್ಕಣ್ಣ, ಅಭಿಷೇಕ್ ಅಂಬರೀಶ್, ಧನ್ವೀರ್ ಗೌಡ, ನಟಿ ರಚಿತಾ ರಾಮ್ ಸೇರಿದಂತೆ ಹಲವು ತಾರೆಯರು ದರ್ಶನ್‌ ಜೊತೆಗಿನ ಫೋಟೋ ಹಂಚಿಕೊಂಡು ಶುಭಾಶಯಗಳನ್ನು ತಿಳಿಸಿದ್ದಾರೆ.