ಪಾಂಡವಪುರ : ತುಂಡಾಗಿ ನೆಲಕ್ಕೆ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ರೈತನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಚಿನಕುರಳಿ ಹೋಬಳಿ ಮಲ್ಲಿಗೆರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಎಂ. ನಾಗರಾಜು ಬಿನ್ ಲೇಟ್ ಮರೀಸ್ವಾಮಿಗೌಡ ಎಂಬವರೇ ಸಾವನ್ನಪ್ಪಿದವರಾಗಿದ್ದು, ನಾಗರಾಜು ತಮ್ಮ ಮನೆಯಿಂದ ಹೊಲಕ್ಕೆ ಹೋಗುವಾಗ ಜಮೀನೊಂದರ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ಸಾವನಪ್ಪಿದ್ದಾರೆ.