ಮೈಸೂರು(Mysuru) : ಬೆಳೆಯಿಂದ ನಷ್ಟ ಹೊಂದಿದ ಕಾರಣ ಸಾಲ ಹಿಂತಿರುಗಿಸಲಾಗದೇ ಮನನೊಂದು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ಕೊಲ್ಲೂರಿನಲ್ಲಿ ನಡೆದಿದೆ.
ರೈತ ಮಂಜುನಾಥ್ (47) ಇವರು ತಮ್ಮ ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಯನ್ನು ಹಿಡಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇವರಿಗೆ 2.16 ಎಕರೆ ಜಮೀನಿದ್ದು, ಕೊಲ್ಲೂರಿನ ಪಿಎಸ್ಎಸ್ಎನ್ಬಿ ಸೇರಿದಂತೆ ಹಲವೆಡೆ 18 ಲಕ್ಷ ರೂ.ನಷ್ಟು ಸಾಲ ಮಾಡಿಕೊಂಡಿದ್ದರು, ಬೆಳೆದ ಬೆಳೆಯಿಂದಾಗಿ ನಷ್ಟ ಅನುಭವಿಸಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.















