ಮುಧೋಳ: ಸಾಲಬಾಧೆ ತಾಳದೆ ರೈತ ಮಹಿಳೆಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಸೋರಗಾವಿ ಗ್ರಾಮದಲ್ಲಿ ಸೋಮವಾರ (ನ.4) ನಡೆದಿದೆ.
ಮೃತ ಮಹಿಳೆಯನ್ನು ದೊಡ್ಡವ್ವ ಕಟ್ಟಿಮನಿ (46) ಎಂದು ಗುರುತಿಸಲಾಗಿದೆ.
ದೊಡ್ಡವ್ವ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ 3,80,000 ಸಾಲ ಪಡೆದಿದ್ದರು. ಘಟನೆಗೆ ಸಂಬಂಧಿಸಿದಂತೆ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.