ಮನೆ ರಾಜ್ಯ ಅರಣ್ಯ ಅಧಿಕಾರಿ ವಿರುದ್ಧ ರೈತರ ಪ್ರತಿಭಟನೆ

ಅರಣ್ಯ ಅಧಿಕಾರಿ ವಿರುದ್ಧ ರೈತರ ಪ್ರತಿಭಟನೆ

0

ಮಂಡ್ಯ:ಗಿಡಗಳನ್ನು ನೆಟ್ಟು ಪೋಷಿಸಿ ಮರ ಬೆಳೆಸಿ ಅರಣ್ಯ ಸಂರಕ್ಷಿಸುವ ಸಮಾಜಮುಖಿ ಕೆಲಸ ಮಾಡುತ್ತಿರುವ ಪರಿಸರ ರಮೇಶ್ ರನ್ನು ಅವಹೇಳನ ಮಾಡಿರುವ ಅರಣ್ಯಾಧಿಕಾರಿ ವಿರುದ್ಧ ರೈತರು ಮಂಡ್ಯದಲ್ಲಿ ಪ್ರತಿಭಟಿಸಿದರು.


ರೈತ ಸಂಘದ ಆಶ್ರಯದಲ್ಲಿ ನಗರದ ಅರಣ್ಯ ಇಲಾಖೆಯ ಜಿಲ್ಲಾ ಅರಣ್ಯಾಧಿಕಾರಿ ಕೊಠಡಿ ಎದುರು ರೈತರು ಧರಣಿ ನಡೆಸಿ ಪರಿಸರ ಪ್ರೇಮಿಯನ್ನು ಅವಮಾನಿಸಿರುವ ವಲಯ ಅರಣ್ಯ ಅಧಿಕಾರಿ ಮಹದೇವಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 20 ವರ್ಷದಿಂದ ಶ್ರೀರಂಗಪಟ್ಟಣ ಸುತ್ತಮುತ್ತಲ ಪ್ರದೇಶದ ಅರಣ್ಯ ವ್ಯಾಪ್ತಿಯಲ್ಲಿ ಗಿಡಗಳನ್ನು ಪೋಷಿಸಿ ಮರಗಳನ್ನು ಬೆಳೆಸುತ್ತಾ ಬಂದಿರುವ ಪರಿಸರ ರಮೇಶ್ ಇತ್ತೀಚೆಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ರವರ ಹುಟ್ಟುಹಬ್ಬದ ನಿಮಿತ್ತ ಕರಿಘಟ್ಟದ ಪ್ರದೇಶದಲ್ಲಿ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲು ಮುಂದಾಗಿ ಅರಣ್ಯ ಇಲಾಖೆ ಅನುಮತಿ ಕೇಳಿದಾಗ ಅರಣ್ಯ ಬೆಳೆಸುವ ಕೆಲಸವನ್ನು ಪ್ರೋತ್ಸಾಹಿಸುವ ಬದಲು ಪರಿಸರ ಪ್ರೇಮಿಯನ್ನು ನಿಂದನೆ ಮಾಡಿ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿದರು.
ಅರಣ್ಯ ಸಂರಕ್ಷಣೆ ಮಾಡುವ, ಗಿಡ ಮರಗಳನ್ನು ಬೆಳೆಸುವ ಪರಿಸರ ಪ್ರೇಮಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದ ಅರಣ್ಯ ಇಲಾಖೆಯ ಅಧಿಕಾರಿ ಅವಹೇಳನ ಮಾಡುವುದು ಸರಿಯಲ್ಲ, ಈ ರೀತಿ ಅವಮಾನ ಮಾಡುವುದು ಒಳ್ಳೆಯ ನಡತೆಯಲ್ಲ,ಸಾಲುಮರ ತಿಮ್ಮಕ್ಕರನ್ನು ಸರ್ಕಾರ ಗೌರವ ಯುತವಾಗಿ ಕಂಡಿದೆ,ಅದೇ ರೀತಿಯ ಕೆಲಸದಲ್ಲಿ ಸಕ್ರಿಯರಾಗಿರುವ ಪರಿಸರ ಪೋಷಕರನ್ನು ಅವಮಾನಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ನಾವೇನು ಅವರನ್ನು ಶಿಕ್ಷಿಸಲು ಬಂದಿಲ್ಲ, ಬದಲಾಗಿ ತಪ್ಪನ್ನು ತಿದ್ದಿಕೊಳ್ಳುವಂತೆ ತಿಳಿಸಲು ಬಂದಿದ್ದೇವೆ,ತಪ್ಪಿತಸ್ಥ ಅಧಿಕಾರಿಯನ್ನು ಸ್ಥಳಕ್ಕೆ ಕರೆಯಿಸಿ ಎಂದು ಹೇಳಿದರೂ ಇಲ್ಲಸಲ್ಲದ ಸಬೂಬು ಹೇಳುತ್ತಿದ್ದಾರೆ.ಜಿಲ್ಲಾ ಅರಣ್ಯ ಅಧಿಕಾರಿ ಕೂಗಿದರು ಬರದಿರುವುದು, ಅಧಿಕಾರಿಯ ಉಡಾಫೆ ವರ್ತನೆ ತೋರಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್. ಕೆಂಪೂಗೌಡ ಆಕ್ರೋಶ ವ್ಯಕ್ತಪಡಿಸಿದರು.
ಕೆ.ಸಿ.ರವೀಂದ್ರ, ವಿಜಯ್ ಕುಮಾರ್ ಸೇರಿದಂತೆ ಇತರರು ಹಾಜರಿದ್ದರು

ಹಿಂದಿನ ಲೇಖನಮೈಸೂರು: ನಾಳೆ ಮಹಿಷ ದಸರಾ ಆಚರಣೆಗೆ ಷರತ್ತುಬದ್ಧ ಅನುಮತಿ
ಮುಂದಿನ ಲೇಖನರಾಷ್ಟ್ರೀಯ ಸಿನಿಮಾ ದಿನ: 99 ರೂಪಾಯಿಗೆ ಮಲ್ಟಿಪ್ಲೆಕ್ಸ್​ ನಲ್ಲಿ ಸಿನಿಮಾ ವೀಕ್ಷಿಸಿ