ಮೈಸೂರು(Mysuru): ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಖಾತರಿಗೊಳಿಸಲು ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾದ ಸಂಚಾಲಕ ಯೋಗೇಂದ್ರ ಯಾದವ್ ನೇತೃತ್ವದಲ್ಲಿ ಸಂಸದ(MP) ಪ್ರತಾಪಸಿಂಹ(Prathap simha) ಅವರ ಕಚೇರಿ ಎದುರು ಪ್ರತಿಭಟನೆ(Protest) ನಡೆಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ-ಸಂಯುಕ್ತ ಹೋರಾಟ ಸಮಿತಿಯ ಪದಾಧಿಕಾರಿಗಳು ನಗರದಲ್ಲಿ ಮಂಗಳವಾರ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಪ್ರತಿಭಟನೆಯಲ್ಲಿ ಮಾತನಾಡಿದ ಯೋಗೇಂದ್ರ ಯಾದವ್, ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ತೋರಿಸಿ ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ-ಸಂಯುಕ್ತ ಹೋರಾಟ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಮಾತನಾಡಿದ ಯೋಗೇಂದ್ರ ಯಾದವ್, ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ತೋರಿಸಿ ಎಂದು ಆಗ್ರಹಿಸಿದರು.
‘ಪ್ರಧಾನಿ ಮೋದಿ ಅವರು ಸೀತೆಯ ಪತಿ ರಾಮನ ಹೆಸರು ಹೇಳಿಕೊಂಡು ನೀತಾಳ ಪತಿ ಅಂಬಾನಿಗೆ ಕೆಲಸ ಮಾಡುಕೊಡುತ್ತಿದ್ದಾರೆ’ ಎಂದು ಟೀಕಿಸಿದರು.
ಭತ್ತ ಹಾಗೂ ರಾಗಿಯ ರಾಶಿಯನ್ನು ಸಂಸದರ ಕಚೇರಿ ಮುಂದೆ ರಾಶಿ ಹಾಕಲಾಗಿತ್ತು. ಸಂಸದ ಪ್ರತಾಪಸಿಂಹ ಸ್ಥಳಕ್ಕೆ ಬಂದು ರೈತರು ಹಾಗೂ ಮುಖಂಡರು ಬಂದು ಮನವಿ ಆಲಿಸಿದರು.
ಸಾಹಿತಿ ದೇವನೂರ ಮಹಾದೇವ, ಎಸ್.ಆರ್.ಹಿರೇಮಠ, ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಪಾಲ್ಗೊಂಡಿದ್ದರು.