ಮನೆ ಆರೋಗ್ಯ ಆಹಾರದಲ್ಲಿ ಕೊಬ್ಬಿನ ಅಂಶ

ಆಹಾರದಲ್ಲಿ ಕೊಬ್ಬಿನ ಅಂಶ

0

ಪಾಶ್ಚಾತ್ಯರು ಹೆಚ್ಚಿನ ಕೊಬ್ಬಿನ ಅಂಶವಿರುವ ಆಹಾರ ಸೇವಿಸುತ್ತಾರೆ. ಒಂದು ಅಂದಾಜಿನ ಪ್ರಕಾರ ಅವರು ತೆಗೆದುಕೊಳ್ಳುವ ಕ್ಯಾಲರಿ ಶೇ. 40ಕ್ಕೂ ಹೆಚ್ಚು ಕೊಬ್ಬಿನಾಂಶದಿಂದ ಕೂಡಿರುತ್ತದೆ. ಆದರೆ American Heart Association ಅವರು ಆಹಾರ ಕೊಬ್ಬು ಶೇ. 30ಕ್ಕಿಂತ ಅಧಿಕವಾಗಿರಕೂಡದೆಂದು ಸಲಹೆ ನೀಡುತ್ತಾರೆ.

* ಉದ್ಯೋಗಗಳು ಬಾರದಂತೆ ಜಾಗೃತೆ ವಹಿಸಬೇಕಾದರೆ, ಆಹಾರದಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಸ್ಯಾಚುರೇಟೆಡ್ ಫ್ಯಾಟ್ ಗಿಂತ ಅನ್ ಸ್ಯಾಚುರೇಟೆಡ್ ಫ್ಯಾಟ್ ಇರುವಂತೆ ಎಚ್ಚರಿಕೆ ವಹಿಸಬೇಕು.

ಸ್ಥೂಲದೇಹ ಪೂರ್ವಜರ (ಅನುವಂಶಿಯ) ಬಳುವಳಿಯೇ ?

ಹುಟ್ಟುವಾಗ ಬಿಳಿ ಅಥವಾ ಕಪ್ಪು ಬಣ್ಣದ (ಚರ್ಮದ) ಶರೀರದೊಂದಿಗೆ ಜನಿಸುವಂತೆ, ಸ್ಥೂಲತೆ ಹುಟ್ಟಿನಿಂದ ಬರುವುದಿಲ್ಲ. ಇಲ್ಲದಿದ್ದರೆ ಸ್ತೂಲದೇಹವಾಗದಂತೆ ಇರುವ ಸೌಲಭ್ಯದೊಂದಿಗೆ ಹುಟ್ಟಬಹುದು. ಅಂದರೆ ತಿನ್ನುವ ಆಹಾರದಲ್ಲಿರುವ ಕೊಬ್ಬನ್ನು ಸುಲಭವಾಗಿ ಜೀರ್ಣಿಸಿಕೊಳ್ಳುವ ದೇಹದೊಂದಿಗೆ !

ಕೊಬ್ಬನ್ನು ಸುಲಭವಾಗಿ ದೇಹದೊಳಗೆ ಶೇಖರಿಸುವ ಜೀನ್ಸ್ () ನೊಂದಿಗೆ ಹುಟ್ಟಿದರು ಕೂಡ, ಕೊಬ್ಬನ್ನು ಅಧಿಕವಾಗಿ ಸೇವಿಸದೆ ನಿಗ್ರಹಿಸಿಕೊಂಡರೆ ಡಯಟ್ ಮಾಡಿದರೆ ಸ್ಥೂಲದೇಹವಾಗುವುದಿಲ್ಲ. ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದರೆ ಇನ್ನೂ ಅನುಕೂಲ.

ಒಂದು ಮಾತ್ರ ಸತ್ಯ, ಕೊಬ್ಬನ್ನು ಶೇಖರಿಸುವ ಜೀನ್ಸ್ ನೊಂದಿಗೆ ಹುಟ್ಟಿದವರಿಗೆ ಆ ಜೀನ್ಸ್ ನ ಪರಿಣಾಮವಾಗಿ ಚೆನ್ನಾಗಿ ತಿನ್ನಬೇಕು. ಅದರಲ್ಲೂ ಕೊಬ್ಬಿನಂಶದಿಂದ ಕೂಡಿದ ಆಹಾರದ ಅಪೇಕ್ಷೆ ಉಂಟಾಗುವುದು ಸಹಜ. ಆದರೆ ತಿನ್ನುವುದಕ್ಕೆ ಕಡಿವಾಣ ಹಾಕದೆ ಮನ ಬಂದಂತೆ ತಿಂದದ್ದೇ ಆದರೆ ತೂಕ ಹೆಚ್ಚಿಸಿಕೊಳ್ಳುತ್ತಾರೆ.

ಹೆಚ್ಚಾಗಿ ಆಹಾರ ಸೇವಿಸದಿದ್ದರೂ ಏಕೆ ದಪ್ಪಗಾಗುತ್ತಾರೆ?

ಸತ್ಯ ಸಂಗತಿ ಎಂದರೆ, ಅವರು ಹೆಚ್ಚು ತಿನ್ನುವುದಿಲ್ಲ. ತಿನ್ನುತ್ತಲೇ ಇರುತ್ತಾರೆ ! ತಾವು ಹೆಚ್ಚು ತಿನ್ನುವುದಿಲ್ಲವೆಂದು ಅಂದುಕೊಳ್ಳುತ್ತಾರೆ. ಅವರ ಪ್ರಕಾರ ಈಗ ತಿನ್ನುತ್ತಿರುವುದಕ್ಕಿಂತ ಜಾಸ್ತಿ ತಮ್ಮ ನಾಲಿಗೆಗೆ ಕಡಿವಾಣ ಹಾಕದೆ ತಾವು ಹೆಚ್ಚು ತಿನ್ನುತ್ತಿಲ್ಲವೆಂಬ ಭ್ರಮೆಯಲ್ಲಿರುತ್ತಾರೆ.

ಕೊಲಂಬಿಯ ವಿಶ್ವವಿದ್ಯಾಲಯ ಪ್ರೊ || ಸ್ಟೆಯಿ ಹೆನ್ಸ್ ಫೀಲ್ಡ್ ಎಂಬುವವರ ಸಂಶೋಧನೆಯಲ್ಲಿ ತಿಳಿದುಬಂದ ಅಂಶವೇನೆಂದರೆ, ಎಷ್ಟು ತೂಕ ಹೆಚ್ಚಿದೆಯೋ ಅಷ್ಟೇ ಕಡಿಮೆ ತಿನ್ನುತ್ತೇನೆಂದು ವ್ಯಕ್ತಿ ತಿಳಿದುಕೊಳ್ಳುತ್ತಾನೆ. ಆದರೆ ಬೊಜ್ಜುವುಳ್ಳವರು ತಾವು ತಿಳಿದುಕೊಂಡಂತೆ ಕಡಿಮೆ ಏನು ತಿನ್ನುವುದಿಲ್ಲ!!

ಹಿಂದಿನ ಲೇಖನನಿರ್ವಾಹಕ ಸಾವು: ಪರಿಹಾರ ಪಾವತಿ ಹೊಣೆಯನ್ನು ಬಸ್‌ ಮಾಲೀಕನಿಂದ ವಿಮಾ ಕಂಪೆನಿಗೆ ವರ್ಗಾಯಿಸಿದ ಹೈಕೋರ್ಟ್‌
ಮುಂದಿನ ಲೇಖನಮೈಸೂರು: ಮಳೆ ನೀರು ಚರಂಡಿ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿದ ಕೆ ಹರೀಶ್ ಗೌಡ