ಬಹಳ ಮಂದಿ ತಮ್ಮ ಶರೀರದ ಶೇಪ್ ಅನ್ನು ಕಾಪಾಡಿಕೊಳ್ಳಲು ಜೀವನವಿಡಿ ಶ್ರಮ ಪಡುತ್ತಾರೆ. ಶರೀರ ಒಂದು ಸುಸ್ಥಿತಿಯಲ್ಲಿದ್ದರೆ ನೋಡಲು ಚೆಂದ. ಕೆಲವರಲ್ಲಿ ಶರೀರ ಸುಕೋಮಲವಾಗಿದ್ದರೆ, ಮತ್ತೆ ಕೆಲವರ ಶರೀರದಲ್ಲಿ ಅನವಶ್ಯಕ ಕೊಬ್ಬು ಸೇರಿ ದಪ್ಪಗೆ ವಿಕಾರವಾಗಿ ಕಾಣಿಸುತ್ತಾರೆ.
ನಾವು ಸೇವಿಸುವ ಆಹಾರದಲ್ಲಿ ಕೊಬ್ಬಿನ ಅಂಶ ಇಲ್ಲದಿರುವಂತೆ ನೋಡಿಕೊಳ್ಳಬೇಕು. ನಿಯಮಿತ ವ್ಯಾಯಾಮ, ಯೋಗ ಮುಂತಾದ ಆರೋಗ್ಯಕರ ಅಭ್ಯಾಸಗಳು ಶರೀರದಲ್ಲಿ ಅನಾವಶ್ಯಕ ಕೊಬ್ಬು ಶೇಖರಣೆಯಾಗುವುದನ್ನ ತಡೆಯುತ್ತದೆ. ಶರೀರದ ಆಕಾರವನ್ನು ಕಾಪಾಡುವಲ್ಲಿ ಸಹಕಾರಿಯಾಗುತ್ತದೆ. ಆದರೆ ಕೆಲವರು ಎಷ್ಟೇ ಮಿತವಾಗಿ ತಿಂದರೂ, ಎಷ್ಟೇ ಕೆಲಸ ವ್ಯಾಯಾಮ ಮಾಡಿದರೂ, ಶರೀರ ಮಾತ್ರ ಕರಗುವುದಿಲ್ಲ. ಅವರ ಶರೀರದ ಪ್ರಕೃತಿಯೇ ಹಾಗೆಂದು ಅವರ ಮೇಲೆ ಕನಿಕರ ಉಂಟಾಗುತ್ತದೆ.
ಹಾಗಾದರೆ ನಮ್ಮ ಶರೀರದ ಕೊಬ್ಬು ದೇವರು ಕೊಟ್ಟ ಬಳುವಳಿಯೇ ? ಅಥವಾ ಅದು ನಾವು ಸೇವಿಸುವ ಆಹಾರವನ್ನು ಅವಲಂಬಿಸಿದೆಯೇ?
* ಶರೀರದ ಕೊಬ್ಬನ್ನು ಲಿಪಿಡ್ಸ್(Lipids) ಎನ್ನುತ್ತಾರೆ. ಕಾರ್ಬನ್ ಡೈ ಆಕ್ಸೈಡ್ ಹೈಡ್ರೋಜನ್ ಮತ್ತು ಸ್ವಲ್ಪ ಆಕ್ಸಿಜನ್ ಗಳ ಮಿಶ್ರಣವೇ ಈ ಲಿಪಿಡ್ಸ್
* ರಾಸಾಯನಿಕ ವಿಶ್ಲೇಷಣೆ ಮಾಡಿದಾಗ, ಕೊಬ್ಬಿನಲ್ಲಿ ಗ್ಲಿಸರಾಲ್ (Glycerol) ಸೇರಿದ ʼFatty Acidsʼಇದೆ ಎಂದು ತಿಳಿಯುತ್ತದೆ.
ಕೊಬ್ಬಿನ ಅವಶ್ಯಕತೆ :
* ಶರೀರವು ಸಿದ್ಧಪಡಿಸಲಾಗದ, ಅದಕ್ಕೆ ಬೇಕಾದ ಕೆಲವು Fatty Acids ಗೋಸ್ಕರ ಕೊಬ್ಬನ್ನು ಆಹಾರದಲ್ಲಿ ಸೇವಿಸಬೇಕಾಗುತ್ತದೆ.
* ಶರೀರದ ಪ್ರತಿಯೊಂದು ಕಾಣದ ಸುತ್ತಲೂ ಕೊಬ್ಬಿನ ಪದರವಿರುತ್ತದೆ. ದೇಹ ಚಳಿಯಿಂದ ಕಾಪಾಡಿಕೊಳ್ಳುವ ಕ್ರಿಯೆಯಲ್ಲಿ ಕೊಬ್ಬಿನ ಅವಶ್ಯಕತೆ ಇರುತ್ತದೆ. ದೇಹದಲ್ಲಿ ಶಕ್ತಿ(energy)ಯಾಗಿ ಉಳಿಸಿಕೊಳ್ಳಲು ಉಪಯೋಗಕಾರಿ.
* ಶರೀರದಲ್ಲಿರುವ ಮೂಳೆಗಳು ಮತ್ತು ಇತರ ಅವಯವಗಳ ಸುತ್ತಲೂ ಕೊಬ್ಬಿನ ಪದರವಿದ್ದು, ಅದು ಶಾಕ್ ಅಬ್ಜಾರ್ಬರ್ ನಂತೆ ಕೆಲಸ ಮಾಡುತ್ತದೆ.
* ನರಗಳ ಸುತ್ತಲೂ ಕೊಬ್ಬು ಆವರಿಸಿ Insulationನಂತೆ ಕಾರ್ಯ ನಿರ್ವಹಿಸುತ್ತದೆ.
* ಕೊಬ್ಬು ನಮ್ಮ ಚರ್ಮಕ್ಕೆ ಮೃದುತ್ವ ಕೊಡುತ್ತದೆ.
* ಕೊಬ್ಬು ಎ,ಡಿ,ಇ,ಕೆ ವಿಟಮಿನ್ ಗಳನ್ನು ಶರೀರದೊಳಗೆಲ್ಲ ರವಾನಿಸುತ್ತದೆ.
* ಎಲ್ಲಾ ಆಹಾರ ಪದಾರ್ಥಗಳಿಗಿಂತ ಕೊಬ್ಬಿನಲ್ಲಿ ಶಕ್ತಿ ಹೆಚ್ಚಾಗಿರುತ್ತದೆ.
* ಕೊಬ್ಬಿನಿಂದಾಗಿ ಶರೀರದ ತೂಕವೂ ಹೆಚ್ಚಾಗುತ್ತದೆ. ಪ್ರೋಟೀನ್, ಕಾರ್ಬೋಹೈಡ್ರೇಟ್ ಗಳಿಗಿಂತ ಎರಡರಷ್ಟು ಹೆಚ್ಚಾಗಿ ಕ್ಯಾಲರಿಗಳು ದೊರಕುತ್ತದೆ.
* ಉದಾಹರಣೆಗೆ, ಒಂದು ಗ್ರಾಂ ಪ್ರೋಟೀನ್ ಇಲ್ಲವೇ ಕಾರ್ಬೋಹೈಡ್ರೇಟ್ ಗಳಲ್ಲಿ ನಾಲ್ಕು ಕ್ಯಾಲೋರಿಗಳಷ್ಟು ಶಕ್ತಿ ದೊರಕಿದರೆ, ಒಂದು ಗ್ರಾಂ ಕೊಬ್ಬಿನಲ್ಲಿ ಒಂಬತ್ತು ಕ್ಯಾಲರಿಗಳಷ್ಟು ಶಕ್ತಿ ದೊರಕುತ್ತದೆ.
* ಕೊಬ್ಬಿನಿಂದ ಮತ್ತೊಂದು ಉಪಯೋಗವಿದೆ. ಕೊಬ್ಬಿನಿಂದ ರುಚಿ ಹೆಚ್ಚುತ್ತದೆ. ತುಪ್ಪದ ಅನ್ನಕ್ಕೂ, ತುಪ್ಪವಿಲ್ಲದ ಅನ್ನಕ್ಕೂ ರುಚಿಯಲ್ಲಿ ಎಷ್ಟು ವ್ಯತ್ಯಾಸವಿದೆಯೆಂದು ಎಲ್ಲರೂ ಬಲ್ಲಿರಿ.
ಎರಡು ವಿಧಗಳು :-
ಕೊಬ್ಬಿನಲ್ಲಿ ಸಂತೃಪ್ತ(saturated fats) ಮತ್ತು ಅಸಂತೃಪ್ತ (unsaturated fats)ಎಂದು ಎರಡು ವಿಧಗಳಿವೆ. ಅವುಗಳಲ್ಲಿರುವ Fatty Acids ಮೇಲೆ ಈ ವ್ಯತ್ಯಾಸ ಉಂಟಾಗುತ್ತದೆ. ಉದಾಹರಣೆಗೆ Fatty Acids ಹೈಡ್ರೋಜನ್ ಕಣಗಳು ಎಷ್ಟು ಜಾಸ್ತಿ ಇದ್ದರೆ, ಅಷ್ಟು ಕೊಬ್ಬನ್ನು ಸ್ಯಾಚುರೇಟೆಡ್ ಫ್ಯಾಟ್ ಎನ್ನುತ್ತಾರೆ.
* ಅಸಂತೃಪ್ತ (unsaturated)ಕೊಬ್ಬಿನಲ್ಲಿ ಎರಡು ವಿಧವಿದೆ :-
1. ಮೋನೋ ಅನ್ ಸ್ಯಾಚುರೇಟೆಡ್ ಫ್ಯಾಟ್ಸ್.
2. ಪಾಲಿ ಅನ್ ಸ್ಯಾಚುರೇಟೆಡ್ ಫ್ಯಾಟ್ಸ್.
* ಸ್ಯಾಚ್ಯುರೇಟೆಡ್ ಫ್ಯಾಟ್ ನಲ್ಲಿ ಒಂದು ಹೈಡ್ರೋಜನ್ ಕಣ ಕಡಿಮೆ ಇದ್ದರೆ, ಅದು Mono-Unsaturated Fat ಎರಡು ಅಥವಾ ಎರಡಕ್ಕಿಂತ ಹೆಚ್ಚು ಹೈಡ್ರೋಜನ್ ಕಣಗಳು ಕಡಿಮೆ ಇದ್ದರೆ, ಅದು Poly-Unsaturated Fat
* ಸಾಮಾನ್ಯ ಉಷ್ಣತೆಯಲ್ಲಿ ಸ್ಯಾಚುರೇಟೆಡ್ ಫ್ಯಾಟ್ ಗಟ್ಟಿಯಾಗಿರುತ್ತದೆ, ಅನ್ ಸ್ಯಾಚುರೇಟೆಡ್ ಫ್ಯಾಟ್ ದ್ರವ ರೂಪದಲ್ಲಿ ಇರುತ್ತದೆ.
ಆಹಾರದಲ್ಲಿ ಕೊಬ್ಬು ಮಾರ್ಪಾಟಾಗುವುದು :-
* ನಾವು ಸೇವಿಸುವ ಆಹಾರದಲ್ಲಿರುವ ಕೊಬ್ಬು ಜೀರ್ಣಾಂಗಕ್ಕೆ ಹೋದಾಗ Fatty acid ಆಗಿಯೂ, ಗ್ಲಿಸರಾಲ್ (Glycerol) ಆಗಿಯೂ ವಿಭಜಿಸಲ್ಪಡುತ್ತದೆ.
* ನಂತರ ಪುನಃ ವಿಭಜನೆ ಹೊಂದಿ, ಶರೀರಕ್ಕೆ ಬೇಕಾದ ಶಕ್ತಿ (Energy)ಯಾಗಿ ಮಾರ್ಪಾಡಾಗುತ್ತದೆ. ಉಳಿದದ್ದು ಶರೀರಕ್ಕೆ ಅನಾವಶ್ಯಕವಾದ್ದರಿಂದ Fatty Acids ಆಗಿ ಮಾರ್ಪಾಡಾಗಿ, ಚರ್ಮದ ಒಳಗಿರುವ ಕಣಗಳಲ್ಲೂ, ಅವಯವಗಳ ಸುತ್ತಲೂ ಪಸರಿಸುತ್ತದೆ.
* ಫ್ಯಾಟಿ ಆಸಿಡ್ ಅಲ್ಲದೆ, ಉಳಿದಿರುವ Glycerol ಗ್ಲೈಕೋಜನ್ ಆಗಿ ತಕ್ಷಣಕ್ಕೆ ಬೇಕಾದ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಯಕೃತ್ತಿನಲ್ಲಿ ಉಳಿದ ಗ್ಲೈಕೋಜನ್ ಬಂದು ಸೇರಿದರೆ, ಅದು ಕೊಬ್ಬಾಗಿ ಶರೀರದ ಕಣಗಳಲ್ಲಿ ಸೇರಿಕೊಳ್ಳುತ್ತದೆ. ಹೀಗೆ ಸೇರಿಕೊಂಡ ಕೊಬ್ಬು ಅಧಿಕವಾದಾಗ ಬೊಜ್ಜು ಎಂದೆನಿಸಿಕೊಳ್ಳುತ್ತದೆ.
ಹೆಚ್ಚು ಕೊಬ್ಬು – ಹೆಚ್ಚು ಸಮಸ್ಯೆ :-
ಕೊಬ್ಬು ಪದಾರ್ಥಗಳನ್ನು ಸೇವಿಸುವುದರಿಂದ ತೊಂದರೆಗಳಾಗುವುದಿಲ್ಲ. ಹೆಚ್ಚುಹೆಚ್ಚು ಸೇವನೆಯಿಂದ ಸಮಸ್ಯೆಗಳು ತಲೆದೂರಬಹುದು.
ನಾವು ತಿನ್ನುವ ಆಹಾರದಲ್ಲಿ ಕೊಬ್ಬು ಹೆಚ್ಚಾದಾಗ, ಶರೀರದಲ್ಲಿ ಅಧಿಕವಾಗಿ ಕೊಬ್ಬು ಶೇಖರಣೆಯಾಗುತ್ತದೆ. ಇದಕ್ಕೆ ಎರಡು ಕಾರಣಗಳಿವೆ.
* ಒಂದು ಗ್ರಾಂ ಪ್ರೊಟೀನ್ ಗಿಂತ, ಒಂದು ಗ್ರಾಂ ಕಾರ್ಬೋಹೈಡ್ರೇಟ್ ಕ್ಕಿಂತ ಒಂದು ಗ್ರಾಂ ಕೊಬ್ಬಿನಲ್ಲಿ ಎರಡರಷ್ಟು ಕ್ಯಾಲರಿಗಳಿರುತ್ತದೆ.
* ಪ್ರೋಟೀನ್ ಗಳು ,ಕಾರ್ಬೋಹೈಡ್ರೇಟ್ ಗಿಂತ ಕೊಬ್ಬು ಸುಲಭವಾಗಿ ಶರೀರದ ಕಣಗಳಲ್ಲಿ ಸೇರಿಕೊಳ್ಳುತ್ತದೆ. ಮತ್ತೊಂದು ವಿಷಯವೇನೆಂದರೆ, ಶರೀರ ತನಗೆ ಬೇಕಾದ ಶಕ್ತಿಯನ್ನು ಹಣ್ಣು, ಬೆಳೆ ಧಾನ್ಯಗಳಿಂದ ದೊರಕುವ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ಸ್ ನಿಂದ ತೆಗೆದುಕೊಳ್ಳುತ್ತದೆ. ಕೊಬ್ಬಿನಿಂದ ದೊರಕುವ ಶಕ್ತಿಯನ್ನು ದ್ವಿತೀಯ ಇಂಧನವಾಗಿ (Second-ary Fuel) ಮಾತ್ರ ಗ್ರಹಿಸುತ್ತದೆ. ಇದರಿಂದ ಶರೀರದಲ್ಲಿ ಇಂಧನ ಖರ್ಚಾಗಿರುವುದರಿಂದ, ಶರೀರದಲ್ಲಿ ಕೊಬ್ಬಿನ ರೂಪದಲ್ಲಿ ಶೇಖರಣೆಯಾಗುತ್ತದೆ.
* ಕೊಬ್ಬು ಮುಖ್ಯವಾಗಿ ಸ್ಯಾಚುರೇಟೆಡ್ ಫ್ಯಾಟ್ ರಕ್ತನಾಳಗಳ ಒಳಪದರದಲ್ಲಿ ಶೇಖರವಾಗಿ ಹೃದಯದ ರಕ್ತ ಸರಬರಾಜಿನಲ್ಲಿ ಏರುಪೇರು ಉಂಟಾಗುತ್ತದೆ. ಇದರಿಂದ ಹೃದ್ರೋಗಗಳು, ಪಾಶ್ವ ವಾಯು (ಲಕ್ವ) ಉಂಟಾಗಬಹುದು.
* ಶರೀರದಲ್ಲಿ ಕೊಬ್ಬು ಅಧಿಕವಾಗಿ ಶರೀರದ ತೂಕವೂ ಹೆಚ್ಚಾದಾಗ, ಈ ಕೆಳಗಿನ ಸಮಸ್ಯೆ ಉಂಟಾಗುತ್ತದೆ.
* ಮಧುಮೇಹ
* ಅಧಿಕ ರಕ್ತದೊತ್ತಡ.
* ಉಬ್ಬಸ, ಬ್ರಾಂಕೈಟಿಸ್ ಮತ್ತು ಇತರ ಶ್ವಾಸಕೋಶ ಸಂಬಂಧಿ ರೋಗಗಳು.
* Arthrities ನಂತಹ ಮೂಳೆರೋಗಗಳು.
* ಕೊಬ್ಬಿನಿಂದ ಉಂಟಾಗುವ ಚರ್ಮ ವ್ಯಾಧಿಗಳು.