ನಾವು ಆರೋಗ್ಯಕರವಾಗಿ ಹೆಚ್ಚು ದಿನಗಳ ಕಾಲ ಯಾವುದೇ ಕಾಯಿಲೆ ಕಸಾಲೆ ಇಲ್ಲದೆ ಬದುಕಬೇಕು ಎಂದರೆ ಅದಕ್ಕೆ ವ್ಯಾಯಾಮ ಬಹಳ ಮುಖ್ಯ ಮತ್ತು ಅಗತ್ಯ ಕೂಡ.
ದೇಹದ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಮತ್ತು ಆರೋಗ್ಯಕರವಾದ ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುವ ಆಹಾರ ಸೇವನೆ ಮಾಡಿದರೆ, ಖಂಡಿತ ನಮ್ಮ ಬಳಿ ಯಾವುದೇ ಕಾಯಿಲೆ ಹತ್ತಿರ ಕೂಡ ಸುಳಿಯುವುದಿಲ್ಲ. ಆಸ್ಪತ್ರೆಗೆ ಹೋದಾಗ ವೈದ್ಯರು ಹೇಳುವುದು ಇದನ್ನೇ. ಒಳ್ಳೆಯ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಮನುಷ್ಯನ ಆರೋಗ್ಯವನ್ನು ಉತ್ತಮವಾಗಿ ಕಾಪಾಡಬಲ್ಲದು.
ಆರೋಗ್ಯ ತಜ್ಞರ ಪ್ರಕಾರ
ದೇಹದಲ್ಲಿ ಯಾವಾಗ ಕೊಬ್ಬಿನ ಅಂಶ ಹೆಚ್ಚಾಗುತ್ತದೆ ಅದು ಬೊಜ್ಜಿನ ರೂಪ ಪಡೆದು ಕೊಂಡು ದೇಹದ ಆಕಾರವನ್ನು ಮತ್ತು ಅಂದವನ್ನು ಹಾಳುಮಾಡುತ್ತದೆ. ಮತ್ತೆ ನಮ್ಮ ಮೊದಲಿನ ಆಕಾರವನ್ನು ನಾವು ಪಡೆದುಕೊಳ್ಳಬೇಕು ಎಂದರೆ ಮೊದಲು ಕೊಬ್ಬು ಕರಗಿಸುವ ಪ್ರಯತ್ನ ಮಾಡಬೇಕು. ಈ ನಿಟ್ಟಿನಲ್ಲಿ ಆರೋಗ್ಯ ತಜ್ಞರ ಪ್ರಕಾರ ನೆಲ್ಲಿಕಾಯಿ ಜ್ಯೂಸ್ ಸಕ್ಕತ್ ಹೆಲ್ಪ್ ಫುಲ್!
ಆಂಟಿ ಆಕ್ಸಿಡೆಂಟ್
ಹೌದು ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ತಿನ್ನಲು ಸ್ವಲ್ಪ ಹುಳಿ ಹುಳಿ ಎನಿಸಿದರೂ ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ದೇಹದ ತೂಕ ತಾನಾಗಿಯೇ ಕಡಿಮೆಯಾಗುತ್ತದೆ. ಮುಖ್ಯವಾಗಿ ದೇಹದಿಂದ ಕೆಟ್ಟ ಕೊಬ್ಬಿನ ಅಂಶ ಮತ್ತು ವಿಷಕಾರಿ ಅಂಶಗಳು ಹೊರ ಹೋಗುತ್ತವೆ.
ಪ್ರೋಟೀನ್ ಪ್ರಮಾಣದ ಉಪಯೋಗ
ನಾವು ಪ್ರತಿದಿನ ಒಂದೇ ರೀತಿಯ ಆಹಾರ ತಿನ್ನುವುದಿಲ್ಲ. ಕೆಲವೊಂದು ಆಹಾರಗಳಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ನಾರಿನ ಪ್ರಮಾಣ ಹೆಚ್ಚಾಗಿರುತ್ತದೆ.
ಒಂದೇ ರೀತಿ ಎಲ್ಲವೂ ಸಹ ನಮ್ಮ ದೇಹದಲ್ಲಿ ಜೀರ್ಣ ಆಗುವುದಿಲ್ಲ. ಏಕೆಂದರೆ ಮೆಟಬಾಲಿಸಂ ತುಂಬಾ ನಿಧಾನವಾಗಿ ನಡೆಯುತ್ತದೆ.
ಈ ಸಮಯದಲ್ಲಿ ಪ್ರೋಟೀನ್ ಕೆಲವೊಮ್ಮೆ ಹಾಗೆ ಉಳಿದು ನಮ್ಮ ದೇಹದ ತೂಕ ಹೆಚ್ಚಾಗುವಂತೆ ಮಾಡುತ್ತದೆ. ಆದರೆ ನೆಲ್ಲಿಕಾಯಿ ಜ್ಯೂಸ್ ಇಲ್ಲಿ ಚಮತ್ಕಾರ ಮಾಡಬಲ್ಲದು. ಕೊಬ್ಬಿನ ಅಂಶ ಕರಗಿಸಿ ಮೆಟಬಾಲಿಸಂ ಹೆಚ್ಚುವಂತೆ ಮಾಡುತ್ತದೆ.
ಶಕ್ತಿಯ ಜೊತೆಗೆ ತಾಜಾತನ ಕೊಡುತ್ತದೆ
ನಮ್ಮ ದೇಹದಲ್ಲಿ ಹೊಸ ಚೈತನ್ಯ ಮತ್ತು ಹುರುಪು ಇದ್ದರೆ ನಾವು ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ಎಷ್ಟು ಸಮಯ ಬೇಕಾದರೂ ಸುಲಭವಾಗಿ ಮಾಡಿ ಮುಗಿಸಬಹುದು. ಇದಕ್ಕೆ ನಮ್ಮ ದೇಹದಲ್ಲಿ ಎಲೆಕ್ಟ್ರೋಲೈಟ್ ಗಳ ಸಂಚಾರ ಇರಬೇಕು.
ಇದರಿಂದ ನಮ್ಮ ದೇಹದಲ್ಲಿ ತಾಜಾತನ ಮನೆ ಮಾಡುತ್ತದೆ. ಈ ನಿಟ್ಟಿನಲ್ಲಿ ನೋಡುವು ದಾದರೆ ನೆಲ್ಲಿಕಾಯಿ ಇಲ್ಲಿ ಸಾಕಷ್ಟು ಸಹಾಯ ಮಾಡುತ್ತದೆ. ನಮ್ಮ ದೇಹಕ್ಕೆ ನಿರ್ಜಲೀಕರಣ ಆಗದಂತೆ ನೀರಿನ ಅಂಶವನ್ನು ಕೊಡುತ್ತದೆ. ಜೊತೆಗೆ ಒಳ್ಳೆಯ ಶಕ್ತಿಯನ್ನು ಮತ್ತು ಚೈತನ್ಯವನ್ನು ಸಹ ಕೊಡುತ್ತದೆ.