ಮನೆ ಅಪರಾಧ ಕ್ಷುಲ್ಲಕ ಕಾರಣಕ್ಕೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ: ಇಬ್ಬರ ಬಂಧನ

ಕ್ಷುಲ್ಲಕ ಕಾರಣಕ್ಕೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ: ಇಬ್ಬರ ಬಂಧನ

0

ಹುಣಸೂರು: ಕ್ಷುಲ್ಲಕ ಕಾರಣಕ್ಕೆ ಎಳನೀರು ಮಾರಾಟ ಮಾಡುವವರ ನಡುವೆ ಮಾತಿನ ಚಕಮಕಿ ನಡೆದು ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದ ಬೈಪಾಸ್ ರಸ್ತೆ ತಹಶೀಲ್ದಾರ್ ಕಚೇರಿ ಬಳಿ ನಡೆದಿದ್ದು, ಇಬ್ಬರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ನಗರದ ರಂಗನಾಥ ಬಡಾವಣೆ ನಿವಾಸಿಲೇ.ಶಿವರಾಂ ಪುತ್ರರಾದ ಸ್ವಾಮಿ ಮತ್ತು ವೆಂಕಟೇಶ್ ಬಂಧಿತರು. ಹಲ್ಲೆಗೊಳಗಾದ ಎಳನೀರು ವ್ಯಾಪಾರಿ ದಿನೇಶ್ ಮತ್ತವನ ಸಹೋದರ ವಿಜಯಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಗರದ ರಂಗನಾಥ ಬಡಾವಣೆಯ ಲೇ.ಶಿವರಾಂ ಪುತ್ರರಾದ ಸ್ವಾಮಿ ಮತ್ತು ವೆಂಕಟೇಶ್ ಹಾಗೂ ವಿಜಯಕುಮಾರ್ ಮತ್ತು ದಿನೇಶ್ ನಡುವೆ ಹಳೇ ವೈಷಮ್ಯವಿದ್ದು, ಈ ಸಂಬಂಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇದರಿಂದ ಕುಪಿತಗೊಂಡಿದ್ದ ಸ್ವಾಮಿ ಹಾಗೂ ವೆಂಕಟೇಶ್‌ರವರು  ವಿಜಯಕುಮಾರ್ ಎದುರಿಗೆ ಸಿಕ್ಕವೇಳೆ ದುರುಗುಟ್ಟಿ ನೋಡುವುದು ಮಾಡುತ್ತಿದ್ದ ಎನ್ನಲಾಗಿದ್ದು,  ತಹಶೀಲ್ದಾರ್ ಕಚೇರಿ ಬಳಿ ದಿನೇಶ್ ಹಾಗೂ ವಿಜಯಕುಮಾರ್ ವ್ಯಾಪಾರ ನಡೆಸುತ್ತಿದ್ದ ವೇಳೆ ವಿನಾಕಾರಣ ಜಗಳ ಆರಂಭಿಸಿ ಮಾತಿನ ಚಕಮಕಿ ನಡೆದಿದೆ.

ಹಠಾತ್ತನೆ ಎಳನೀರು ಕೊಚ್ಚುವ ಮಚ್ಚು ಎತ್ತಕೊಂಡು ವಿಜಯಕುಮಾರ್ ಮೇಲೆ ಹಲ್ಲೆ ನಡೆಸಲು ಮುಂದಾದ ವೇಳೆ ಅಲ್ಲೇ ಇದ್ದ ದಿನೇಶ್ ಬಿಡಿಸಲು ಓಡಿ ಬಂದಿದ್ದಾರೆ. ಇಬ್ಬರ ಮೇಲೂ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಇಬ್ಬರಿಗೂ ಬೆನ್ನು ಹಾಗೂ ತೋಳು, ಕೈಗಳಿಗೆ ತೀವ್ರವಾದ ಗಾಯಗಳಾಗಿದ್ದು, ಹುಣಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿಗಳ ವಿರುದ್ಧ ನಗರ ಠಾಣೆಗೆ ದೂರು ನೀಡಿದ ಮೇರೆಗೆ  ಪ್ರಕರಣಕ್ಕೆ ಎಸ್.ಐ. ಮಹಮ್ಮದ್ ಹುಸೇನ್ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.