ಮನೆ ಅಡುಗೆ ಬಳಲಿಕೆ ತಣಿಸುವ ಪೌಷ್ಟಿಕ ಖಾದ್ಯಗಳು

ಬಳಲಿಕೆ ತಣಿಸುವ ಪೌಷ್ಟಿಕ ಖಾದ್ಯಗಳು

0

ರಾಗಿ ಸಿಹಿ ಪುಡಿ
ಬೇಕಾಗುವ ಸಾಮಗ್ರಿ: 
ರಾಗಿ ಹುರಿಹಿಟ್ಟು -1 ಕಪ್, ಬೆಲ್ಲದ ಪುಡಿ ಮುಕ್ಕಾಲು ಕಪ್, ಎರಡು ಚಮಚ ಒಣಕೊಬ್ಬರಿ ಪುಡಿ, ಏಲಕ್ಕಿಪುಡಿ ಕಾಲು ಚಮಚ, ತುಪ್ಪ ರುಚಿಗೆ ತಕ್ಕಷ್ಟು.

Join Our Whatsapp Group

ಮಾಡುವ ವಿಧಾನ: ಸಣ್ಣ ಉರಿಯಲ್ಲಿ ಬಾಣಲೆಯಲ್ಲಿ ತುಪ್ಪ ಕರಗಿಸಿ ಮೊದಲಿಗೆ ಬೆಲ್ಲದಪುಡಿ ಹಾಕಿ ಕರಗಿಸಿ. ನಂತರ ರಾಗಿ ಹುರಿಹಿಟ್ಟು, ಒಣಕೊಬ್ಬರಿ ಪುಡಿ, ಏಲಕ್ಕಿ ಪುಡಿ ಹಾಕಿ ಒಂದೆರಡು ನಿಮಿಷ ಗೊಟಾಯಿಸಿ. ಸ್ಟವ್‌ ಆರಿಸಿ.

ಬಾಣಲೆಯಲ್ಲಿರುವ ಪುಡಿ ತಣಿದ ಮೇಲೆ ಅದನ್ನು ಗಾಳಿಯಾಡದ ಡಬ್ಬಿಗೆ ವರ್ಗಾಯಿಸಿ. ನಿಮಗೆ ಬೇಕೆನಿಸಿದಾಗ ಈ ಪುಡಿಯನ್ನು ಸೇವಿಸಬಹುದು. ಅಷ್ಟೇ ಅಲ್ಲ, ಹಾಲಿನೊಂದಿಗೆ ಈ ಪುಡಿಯನ್ನು ಬೆರೆಸಿ ಮಾಲ್ಟ್‌ ರೀತಿ ಮಾಡಿಕೊಂಡು ಕುಡಿಯಬಹುದು. ದೇಹಕ್ಕೆ ಶಕ್ತಿ ನೀಡುತ್ತದೆ, ದೇಹವನ್ನು ತಂಪಾಗಿಡುತ್ತದೆ.

***

ಪ್ರೊಟೀನ್ ಪೌಡರ್
ಬೇಕಾಗುವ ಸಾಮಗ್ರಿ: 
ಹುರಿದು, ಸಿಪ್ಪೆ ತೆಗೆದ ಕಡಲೆಕಾಯಿ ಬೀಜ 1 ಕಪ್, ಹುರಿಗಡಲೆ 1 ಕಪ್, ಒಣಕೊಬ್ಬರಿ ತುರಿ ಅರ್ಧ ಕಪ್, ಬೆಲ್ಲದಪುಡಿ 3 ಕಪ್, ಗೋಡಂಬಿ 6, ಬಾದಾಮಿ 6, ಏಲಕ್ಕಿ ಪುಡಿ 1 ಚಮಚ.

ಮಾಡುವ ವಿಧಾನ: ಬೆಲ್ಲದ ಪುಡಿ, ಏಲಕ್ಕಿ ಪುಡಿ ಹೊರತುಪಡಿಸಿ, ಉಳಿದೆಲ್ಲ ಪದಾರ್ಥಗಳನ್ನು ತರಿತರಿಯಾಗಿ ಅರೆಯಿರಿ. ನಂತರ  ಆ ಪುಡಿಗೆ ಬೆಲ್ಲ, ಏಲಕ್ಕಿಪುಡಿ ಹಾಕಿ. ಒಂದೆರದು ಸುತ್ತು ಅರೆಯಿರಿ. ಸ್ವಾದಿಷ್ಟಭರಿತ ಪ್ರೊಟೀನ್ ಪೌಡರ್ ಸಿದ್ಧ. ಇದನ್ನು ಹಾಲಿನೊಂದಿಗೆ ಬೆರೆಸಿಕೊಂಡು ಸೇವಿಸಬಹುದು. ಪಾಯಸ ತಯಾರಿಸುವಾಗ, ಈ ಪ್ರೊಟಿನ್ ಪುಡಿಯನ್ನು ಎರಡು ಚಮದಷ್ಟು ಬೆರೆಸಿಕೊಂಡರೆ, ಪಾಯಸ ರುಚಿಗಟ್ಟುತ್ತದೆ.