ಮನೆ ಮಾನಸಿಕ ಆರೋಗ್ಯ ಅತಿಭಯ

ಅತಿಭಯ

0

ಒಂಟಿಯಾಗಿರುವುದು, ಕತ್ತಲೆ, ಅಪಾಯಕಾರಿ, ಪ್ರಾಣಿ-ಕೀಟಗಳು ಅಪಾಯಕಾರಿ, ವಸ್ತು ಸ್ಥಳವನ್ನು ಕಂಡರೆ ಭಯವಾಗುವುದು ಎಲ್ಲರಿಗೂ ಸಹಜ ಭಯದ ಉದ್ದೇಶ, ಅಪಾಯವಿದೆ ಎಂದು ವ್ಯಕ್ತಿಯನ್ನು ಎಚ್ಚರಿಸಿ, ಮಾಡುವುದು ಆದರೆ ಕೆಲವರಿಗೆ ಅಪಾಯವಲ್ಲದ ವಸ್ತು ಸನ್ನಿವೇಶ ಪ್ರಾಣಿ-ಕೀಟಗಳು ಅಸಹಜವಾದ ಅತಿಯಾದ ಭಯವನ್ನುಂಟು ಮಾಡುತ್ತದೆ. ಅತಿವ ಭಯದಿಂದ ವ್ಯಕ್ತಿ ಕತ್ತರಿಸಿ ಹೋಗುತ್ತಾರೆ. ಅವರ ಸ್ಥಿತಿ ಚಿಂತಾಜನಕವಾಗುತ್ತದೆ. ಆದ್ದರಿಂದ ಈ ವಸ್ತು ಸನ್ನಿವೇಶವನ್ನು ಕಾಣುವುದನ್ನು ಎದುರಿಸುವುದನ್ನು ಅವರು ಆದಷ್ಟು ವಿವರಿಸಿಕೊಳ್ಳುತ್ತಾರೆ.

ಇದರಿಂದ ದೈನಂದಿನಿ ಚಟುವಟಿಕೆ ಕೆಲಸ ಕರ್ತವ್ಯಗಳಿಗೆ ಅಡ್ಡಿಯಾದರೂ ಅದನ್ನು ಗಣನೆಗೆ ತಂದುಕೊಳ್ಳುವುದಿಲ್ಲ ಈ ಮನೋಸ್ಥಿತಿಯನ್ನು ಪೋಬಿಯಾ ಅಥವಾ ಅತಿ ಭಯ ಮನೋರೋಗ ಎಂದು ಕರೆಯುತ್ತಾರೆ. ಈ ಪೋಬಿಯಾ ರೋಗವನ್ನುಂಟು ಮಾಡುವ ವಸ್ತು ಸನ್ನಿವೇಶಗಳೆಂದರೆ ಲಿಫ್ಟ್ ಟೆಲಿಪೋನ್ ಬೂತ್ ನಂತಹ ಚಿಕ್ಕ ಆವರಣಗಳು, ಸಿನಿಮಾ ಥಿಯೇಟರ್, ಕ್ರೀಡಾಂಗಣದಂತ ದೊಡ್ಡ ಆವರಣಗಳು, ಸೇತುವೆ, ಸುರಂಗ ಮಾರ್ಗಗಳು, ಕಿಕ್ಕಿರಿದ ಬಸ್ ಅಥವಾ ರೈಲು ಡಬ್ಬಿ, ಜಿರಳೆ, ಜೇಡ, ನಾಯಿ, ಬೆಕ್ಕುಗಳು, ಜನರು ಗುಂಪು, ರಕ್ತ ಸುರಿವ ಗಾಯ, ಸೂಜಿ ಸಿರಿಂಜ್ ಗಳು, ಆಸ್ಪತ್ರೆ ದಂತ ವೈದ್ಯನ ಕುರ್ಚಿ, ಆಪರೇಷನ್ ಥಿಯೇಟರ್, ಬಾಲ್ಕನಿ ಅಥವಾ ಮನೆಯ ಮೇಲಿನ ಎತ್ತರದ ಜಾಗ, ನಿಂತ ಅಥವಾ ಹರಿವ ನೀರು, ಚಲಿಸುವ ವಾಹನಗಳು, ಯಂತ್ರಗಳು ಇತ್ಯಾದಿ. ಈ ವಸ್ತು ಸನ್ನಿವೇಶಗಳನ್ನು ನೋಡುವುದರಲ್ಲಿ ಕೇಳಿದರೆ ಸಾಕು ಅಥವಾ ಅವುಗಳ ಕಲ್ಪನೆ ಮಾಡಿಕೊಂಡರು ವ್ಯಕ್ತಿ ಹೆದರಿ ನಡುಗಿ ಹೋಗುತ್ತಾನೆ.

ಈ ಫೋಬಿಯ ಯಾವ ವಯಸ್ಸಿನಲ್ಲಾದರೂ ಕಂಡು ಬರಬಹುದಾದರೂ ಮಕ್ಕಳು ಅಧಿವೇಶಸಿನವರು ಹಾಗೂ ಪ್ರೌಡವಯಸ್ಕರಲ್ಲಿ ಜಾಸ್ತಿ.

ಫೋಬಿಯ ಕಲಿಕೆಯ ವಿಧಾನದಿಂದ ಬರುವ ಮನೋರೋಗ ಎಂದು ನಡವಳಿಕೆ ತಜ್ಞರು ಹೇಳುತ್ತಾರೆ. ಮೊಲವನ್ನು ಮೊದಲು ಬಾರಿ ನೋಡಿದ ಮಗು ಆದರೆ ಹತ್ತಿರ ಹೋಗುವಾಗ ಅನುವಾಗುತ್ತಿದ್ದಂತೆ ಪಕ್ಕದಲ್ಲಿ ಯಾರೋ ಮಾಡಿದ ಜೋರಾದ ಶಬ್ದದಿಂದ ಹೆದರುತ್ತದೆ. ಈ ಶಬ್ದ ಮೊಲದಿಂದಲೇ ಬಂದಿದೆ ಎಂದು ಯೋಚಿಸುತ್ತಾರೆ. ತತ್ಬರಿಣಾವಾಗಿ, ನಿರಪಾಯಕಾರಿಯಾದ ಮೂಲವನ್ನು ಅಪಾಯಕಾರಿ ಎಂದು ಆಧಾರ ಮನಸ್ಸು ತಪ್ಪಾಗಿ ಗುರುತಿಸುತ್ತದೆ. ನಂತರ ಮೊಲ ಕಂಡಾಗ ಅಥವಾ ಮೊಲವನ್ನು ಇತರ ಪ್ರಾಣಿ ಯಾವುದೇ ಪ್ರಾಣಿ ಅಥವಾ ಗೊಂಬೆಯನ್ನು ಕಂಡಾಗ ಅತಿಬಯಕ್ಕೆ ಒಳಗಾಗುತ್ತಾರೆ ಎನ್ನಲಾಗುತ್ತದೆ. ಲಿಫ್ಟ್ ಅರ್ಧದಲ್ಲಿ ನಿಂತು ಒಳಗಿದ್ದವರು ಉಸಿರು ಕಟ್ಟಿ ಮೂರ್ಚೆ ಹೋದರು ಎಂದು ಕೇಳಿದ ವ್ಯಕ್ತಿಗೆ ತಾನು ಹತ್ತುವ ಲಿಫ್ಟ್ ಕೂಡ ಮಧ್ಯ ನಿಂತು ತಾನು ಅಪಾಯವಾಗಬಹುದು ಎನ್ನುವ ತರ್ಕದಿಂದ ಲಿಫ್ಟ್ ಅಥವಾ ಯಾವುದೇ ಚಿಕ್ಕ ಆವರಣವನ್ನು ಕಂಡರೆ ಫೋಬಿಯ ಶುರುವಾಗಬಹುದು. ಕಾರಣ ಎಂಬ ಮತ್ತೊಂದು ವಾದವಿದೆ.

ಕಾರಣ ಏನೇ ಇರಲಿ, ಫೋಬಿಯಾ ರೋಗಕ್ಕೆ ಚಿಕಿತ್ಸೆ ಇದೆ. ಶಮನಕಾರಿ ಮಾತ್ರೆಗಳು ಸೇವಿಸಬೇಕು. ಕಾರಣವಾಗುವ ವಸ್ತು-ಸನ್ನಿವೇಶನದಲ್ಲಿ ಭಯ ಉಂಟಾಗದಿರುವಂತೆ-ತರಬೇತಿ-ರಿಲ್ಯಾಕ್ಸ ನೇಷನ್ ವಿಧಾನವನ್ನು ಹೇಳಿಕೊಡಲಾಗುತ್ತದೆ. ಮನೋವೈದ್ಯರನ್ನು ಕಾಣಿ. 

ಕೆಲವು ಪ್ರಕರಣಗಳಲ್ಲಿ, ಭಯ ನಿರ್ದಿಷ್ಟ ಜಾಗ, ವಸ್ತು ಸಂದರ್ಭ ಎನ್ನದೆ, ಎಲ್ಲಾ ಕಾಲದಲ್ಲೂ ಇರಬಹುದು ಅಥವಾ ಪರೀಕ್ಷಿ ಸಂದರ್ಶನ ಜವಾಬ್ದಾರಿಗಳನ್ನು ನಿರ್ವಹಿಸುವ ಹೊಸ ಸ್ಥಳದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಬಹುದು.

 ನಿರ್ಮಿಸುವ ಮನಸ್ಸಿಗೆ ಉಲ್ಲಾಸಕೊಡುವ ಚಟುವಟಿಕೆಗಳು (ಯೋಗ, ಧ್ಯಾನ, ಪ್ರಾರ್ಥನೆ, ಸಂಗೀತ, ಓದು, ಕ್ರೀಡೆ, ಸುಂದರ ರಮ್ಯ ಸ್ಥಳಗಳಲ್ಲಿ ಓಡಾಡುವುದು, ಆತ್ಮೀಯರೊಡನೇ ಒಡನಾಟ ಇತ್ಯಾದಿ) ಹಾಗೂ ಆತಂಕ ನಿವಾರಣ ಔಷಧಗಳು ಸಹಾಯಕರಿ.

ಹಿಂದಿನ ಲೇಖನಟಿಬೆಟಿಯನ್ ವ್ಯಕ್ತಿಗೆ ಚಾಕು ಇರಿದು ಕೊಲೆ: ಹತ್ಯೆ ಮಾಡಿದವನಿಗೂ ಗಂಭೀರ ಗಾಯ
ಮುಂದಿನ ಲೇಖನಲೋಯರ್ ರೆಸ್ಪಿರೇಟರಿ ಟ್ರ್ಯಾಕ್ಟ್ ಇನ್ಫೆಕ್ಷನ್