ಮನೆ ಮಾನಸಿಕ ಆರೋಗ್ಯ ರೋಗ ಭಯ

ರೋಗ ಭಯ

0

ಇತ್ತೀಚೆಗೆ ಹಲವಾರು ಜನ ರೋಗ ಭಯದಿಂದ ನರಳುತ್ತಿದ್ದಾರೆ ‘ನನ್ನ ಹೃದಯ ದುರ್ಬಲವಾಗುತ್ತಿದೆಯೋ ಏನೋ,ನನಗೆ ಹೃದಯಾಘಾತವಾಗಬಹುದು ಎಂದು ಭಯಪಡುತ್ತಾ. ಹೃದಯ ರೋಗ ತಜ್ಞರಲ್ಲಿಗೆ ಹೋಗಿ ಇ.ಸಿ ಜಿ. ಟ್ರೆಡ್ ವೀಲ್  ಟೆಸ್ಟ್, ಸ್ಕ್ಯಾನಿಂಗ್ ಇತ್ಯಾದಿ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ.

Join Our Whatsapp Group

‘ನನಗೆ ಆಗಾಗ ಕೆಮ್ಮುತ್ತಿದೆ.ನನ್ನ ತೂಕ ಕಡಿಮೆಯಾಗುತ್ತಿದೆ,ಸುಸ್ತು ಆಯಾಸವಿದೆ ನನಗೆ ಕ್ಷಯ ವಿರಬಹುದು, ಕ್ಯಾನ್ಸರ್ ಇರಬಹುದು’ ಎಂದು ಚಿಂತಿಸಿ ವೈದ್ಯರಗಳಿಗೆ ಹೋಗುತ್ತಾರೆ. ಆಗಾಗ ಕಿಟ್ಟೆಬ್ಬೊಟ್ಟೆಯಲ್ಲಿ ನೋವು ಬರುತ್ತಿದೆ. ಕಿಡ್ನಿಯಲ್ಲಿ ಕಲ್ಲಿರಬಹುದು ಎಂದು ಯೋಚಿಸಬಹುದು. ಆರು ತಿಂಗಳಿಂದ ತಲೆನೋವು ಮೊನ್ನೆ ತಲೆ ಸುತ್ತು ಬಂದು ಬೀಳುವ ಹಾಗಾಯ್ತು. ತಲೆಯೊಳಗೆ ಗೆಡ್ಡೆ ಬೆಳೆಯುತ್ತಿರಬಹುದು.ನ್ಯೂರೋ  ಸೆಂಟರ್ ಗೆ ಹೋಗಿ ತಲೆಯ ಸ್ಕ್ಯಾನಿಂಗ್ ಮಾಡಿಸಬೇಕು ಎನ್ನುವವರಿದ್ದಾರೆ.ಒಂದು ತಿಂಗಳ ಹಿಂದೆ ದೇಹದ ಕಾಮನೆಗೆ ಒಳಗಾಗಿ. ಒಬ್ಬ ಮದುವೆಯಾದ ಹೆಂಗಸಿನೊಂದಿಗೆ  ದೇಹ ಸಂಪರ್ಕ ಮಾಡಿದೆ. ನನಗೆ ಏಡ್ಸ್ ರೋಗ ಅಂಟಿರಬಹುದೇ ಅಥವಾ ನನಗೆ ಇಂಜೆಕ್ಷನ್ ಕೊಟ್ಟ ಆ ಡಾಕ್ಟರು, ಸಿರೆಂಜು ಸೂಜಿಯನ್ನು ಸರಿಯಾಗಿ  ಸ್ಟೆರಿಲೈಸ್ ಮಾಡಿದ್ದಾರೋ ಇಲ್ಲವೋ,ನನಗೆ ಏಡ್ಸ್ ಬಂದಿರಬಹುದೇ ರೋಟೀನ್ ಮೆಡಿಕಲ್ ಚಿಕಪ್ ಮಾಡಿಸಿಕೊಂಡು ಕೊಲೆಸ್ಟರಾಲ್, ಟ್ರೈಗ್ಲಿಸೆರೈಡ್ಸ್ ಸ್ವಲ್ಪ ಜಾಸ್ತಿ ಇದೆ ಎಂದು ರಿಪೋರ್ಟ್ ಬಂದಿದೆ ಅಂದರೆ ನನಗೆ ಬಿಪಿ ಕಾಯಿಲೆ ಬರಬಹುದು. ಬಿಪಿ ಬಂದರೆ ಪಾರ್ಶ್ವವಾಯು ಬಡಿಯಬಹುದು. ಕಣ್ಣಿನ ದೃಷ್ಟಿ ಮುಸುಕಾಗಬಹುದು ಎಂದು ಎಂದು ಯೋಚಿಸುತ್ತಾರೆ.‘ನಮ್ಮ ಮಗುವಿಗೆ ಗಂಟಲು ನೋವಿದೆ ಇದು ಡಿಫ್ತೀರಿಯಾ ಇರಬಹುದು ಅಂತ ಭಯ ಡಾಕ್ಟರ್ ’ಎನ್ನುವ ತಂದೆ ತಾಯಿಗಳಿಗೆ ಕೊರತೆ ಇಲ್ಲ.

     ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಿದಂತೆಲ್ಲ ಕಾಯಿಲೆಗಳ ಬಗೆಗೆ ಪತ್ರಿಕೆ ರೇಡಿಯೋ, ಟಿವಿಗಳಲ್ಲಿ ಮಾಹಿತಿ ಹೆಚ್ಚುತ್ತಿದ್ದಂತೆ, ಬಂಧು ಮಿತ್ರರು ಪರಿಚಿತರು, ಅಪರಿಚಿತರು ಕಾಯಿಲೆಯಿಂದ ನರಳಿದಾಗ ಅಥವಾ ತೀರಿಕೊಂಡಾಗ, ವ್ಯಕ್ತಿಗಳು ತಮಗೂ ಈ ಕಾಯಿಲೆ ಬರಬಹುದು ಅಥವಾ ಈಗಾಗಲೇ ಬಂದಿರಬಹುದು, ಇನ್ನು ತನ್ನ ಗತಿ ಏನು ಏನೇನು ವಿಷಮ ಪರಿಣಾಮಗಳಾಗುತ್ತವೆಯೋ?ಎಂತಹ ಸಾವು ಯಾವಾಗ ಬರುತ್ತದೋ?  ಎಂದು ಭಯ ಪೀಡಿ ತರಾಗುತ್ತಾರೆ.

      ಮತ್ತೆ ಕೆಲವರು, ತಮಗೆ ಮಾರಣಾಂತಿಕ ಕಾಯಿಲೆ ಇದೆ ಅಥವಾ ಹೃದಯ ಮಿದುಳು, ಮೂತ್ರಪಿಂಡದಂತಹ ಅಂಗಕ್ಕೆ ಈಗಾಗಲೇ ಹಾನಿಯಾಗಿದೆ ಎಂಬ ಭ್ರಮೆಗೆ ಇಡಾಗಿ, ವೈದ್ಯರನ್ನು ಪದೇ ಪದೇ ನೋಡಲು ಅನೇಕ ಬಗೆಯ ಪರೀಕ್ಷೆ ಮಾಡಿಸಿಕೊಳ್ಳಲು ದಾವಿಸುತ್ತಾರೆ. ಪರೀಕ್ಷೆ ಮಾಡಿಸಿ ರಕ್ತ ಮಲಮೂತ್ರ ಪರೀಕ್ಷೆ. ಎಕ್ಸ್ ರೇ  ಸ್ಕ್ಯಾನಿಂಗ್. ಇಸಿಜಿ ಸರಿಯಾಗಿ ನೋಡಲಿಲ್ಲ ಪರೀಕ್ಷೆಗಳನ್ನು ನಿಖರವಾಗಿ ಮಾಡಿಲ್ಲ ಎಂದು ಮತ್ತೊಬ್ಬ ವೈದ್ಯರನ್ನು ಕಾಣಲು ಓಡುತ್ತಾರೆ.ಈ ಮನೋ ಸ್ಥಿತಿಯನ್ನು ‘ಹೈಪ್ರೊಡ್ರಿಕಾಂಷಿಯಾಸಿಸ್’ ಎನ್ನುತ್ತಾರೆ. ರೋಗಿಗಳು ತಮ್ಮ ಕೆಲಸ ಕರ್ತವ್ಯಗಳನ್ನು ಮರೆತು, ಸದಾ ರೋಗಭ್ರಮೆಯಿಂದ ಬಳಲುತ್ತಾ. ತಮಗೆ ಹಾಗೂ ಎಲ್ಲರಿಗೂ ಹೊರೆಯಾಗುತ್ತಾರೆ.

     ಹಾಗಾದರೆ ರೋಗ ಭಯವನ್ನು ಬಿಡುವುದು ಹೇಗೆ? ದೇಹದಲ್ಲಿ ಯಾವುದೇ ನೋವು,ತೊಂದರೆ ಕಣಿಸಿಕೊಂದಾಗ, ತಕ್ಷಣ ಒಂದು ದೊಡ್ಡ ಕಾಯಿಲೆಯ ಬಗ್ಗೆ ಯೋಚಿಸಬೇಡಿ. ಉದಾಹರಣೆ ಎದೆ ನೋವು ಬಂದರೆ ಅದು ಹೃದಯ ಘಾತ ಲಕ್ಷಣ ಎಂದು ಕೊಳ್ಳಬೇಡಿ, ಚರ್ಮದ ಮೇಲೆ ಮಚ್ಚೆ ಕಂಡುಬಂದರೆ ಅದನ್ನು ಕುಷ್ಟರೋಗ ಎಂದುಕೊಳ್ಳಬೇಡಿ. ತಲೆಸುತ್ತು ಬಂದರೆ, ನಿಮಗೆ ಬಿಪಿ ಹೆಚ್ಚಿದೆ. ಪಾರ್ಶ್ವ ಆಗಿ ಬಡಿಯುತ್ತದೆ ಎನ್ನುವ ಆಲೋಚನೆಗೆ ಎಡೆ ಮಾಡಕೊಡಬೇಡಿ.ಒಂದು ರೋಗಲಕ್ಷಣ ಒಂದು ರೋಗಾಲಕ್ಷಣ ಹಲವು ಬಗೆಯ ಕಾಯಿಲೆಗಳಲ್ಲಿ ಕಂಡಬರಬಹುದು. ರೋಗಲಕ್ಷಣ ಮಾನಸಿಕ ಜನ್ಯವೂ ಆಗಿರಬಹುದು.  ಮಾನಸಿಕ ಒತ್ತಡದಿಂದ, ನಿರ್ದಿಷ್ಟ ಭಯದಿಂದ ಅನೇಕ ದೈಹಿಕ ರೋಗ ಲಕ್ಷಣಗಳು ಮೂಡುತ್ತವೆ. ಆದ್ದರಿಂದ ನಿಮ್ಮ ಪರಿಚಯದ ವೈದ್ಯರನ್ನು ಕಂಡು, ಈ ರೋಗಲಕ್ಷಣದ ಬಗ್ಗೆ ಚರ್ಚಿಸಿ. ಅದೇನು, ಅದಕ್ಕೆ ಪರಿಹಾರವೇನು ಎಂದು ಅರ್ಥ ಮಾಡಿಕೊಳ್ಳಿ, ಮನಸ್ಸನ್ನು ರೋಗ ಲಕ್ಷಣದಿಂದ ಹೊರತೆಗೆದು, ಹಿತವಾದ ಇತರ ಚಟುವಟಿಕೆಗಳತ್ತ ಹರಿಸಿ.