ಮನೆ ರಾಜಕೀಯ ಸೋಲಿನ ಭಯದಿಂದ ನಿಷೇಧಿತರ ಪಿಎಫ್’ಐ, ಎಸ್‌ ಡಿಪಿಐ ‘ದತ್ತುಪುತ್ರ’ರ ಬೆಂಬಲಯಾಚಿಸಿದ ಕಾಂಗ್ರೆಸ್: ಪ್ರತಾಪ್ ಸಿಂಹ ಟೀಕೆ

ಸೋಲಿನ ಭಯದಿಂದ ನಿಷೇಧಿತರ ಪಿಎಫ್’ಐ, ಎಸ್‌ ಡಿಪಿಐ ‘ದತ್ತುಪುತ್ರ’ರ ಬೆಂಬಲಯಾಚಿಸಿದ ಕಾಂಗ್ರೆಸ್: ಪ್ರತಾಪ್ ಸಿಂಹ ಟೀಕೆ

0

ಮೈಸೂರು: ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ಧರಾಮಯ್ಯ ಸೋಲಿನ ಭಯದಿಂದ ನಿಷೇಧಿತ ಪಿಎಫ್‌ ಐಯ ರಾಜಕೀಯ ಸಂಘಟನೆ ಎಸ್‌ ಡಿಪಿಐ ‘ದತ್ತುಪುತ್ರ’ರ ಬೆಂಬಲ ಯಾಚಿಸಿದ್ದಾರೆ ಎಂದು ಸಂಸದ ಪ್ರತಾಪಸಿಂಹ ಟೀಕಿಸಿದರು.

Join Our Whatsapp Group

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ಮೂಲಕ ಮುಂದೆ ಅಧಿಕಾರಕ್ಕೇರಿದರೆ ಹಿಂದಿನಂತೆ ಬಿಜೆಪಿ, ಆರ್‌ ಎಸ್‌ ಎಸ್‌ ಕಾರ್ಯಕರ್ತರ ಸರಣಿ ರಾಜಕೀಯ ಹತ್ಯೆ ನಡೆಸಿ ರಾಜ್ಯವನ್ನೂ ತಾಲಿಬಾನ್‌ ಶೈಲಿಗೆ ಒಯ್ಯಲು ಸಜ್ಜಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ವರುಣಾ ಕ್ಷೇತ್ರದಲ್ಲಿ ವಿ. ಸೋಮಣ್ಣ ಅಭ್ಯರ್ಥಿ ಎಂದು ತಿಳಿಯುತ್ತಿದ್ದಂತೆ ಭಯಭೀತರಾದ ಸಿದ್ದರಾಮಯ್ಯ ತಮ್ಮ ಮಾನಸ ‘ದತ್ತುಪುತ್ರ’ ಎಸ್‌ ಡಿಪಿಐ ಮುಖಂಡರ ಬೆಂಬಲ ಯಾಚಿಸಿದ್ದಾರೆ. ಇದಕ್ಕಾಗಿ, ಸಿದ್ದರಾಮಯ್ಯ ನೇತೃತ್ವದಲ್ಲಿದ್ದ ಕಾಂಗ್ರೆಸ್‌ ಸರ್ಕಾರದಲ್ಲಿ ಗೃಹಸಚಿವರಾಗಿದ್ದ ಪಿ.ಪರಮೇಶ್ವರ್‌ ಅವರ ಮೂಲಕ ಹೇಳಿಕೆ ನೀಡಿಸಿರುವುದು ಆಘಾತಕಾರಿ ಎಂದರು.

ಪೊಲೀಸ್‌ ಇಲಾಖೆಯ ವಿರೋಧದ ನಡುವೆಯೂ 1600 ಪಿಎಫ್‌ ಐ–ಎಸ್‌ ಡಿಪಿಐ ಕಾರ್ಯಕರ್ತರ 175 ಕ್ರಿಮಿನಲ್‌ ಪ್ರಕರಣಗಳನ್ನು ವಾಪಸ್‌ ಪಡೆದಿದ್ದರು. ಪಿಎಫ್‌ ಐಯ ಚಟುವಟಿಕೆಗಳ ಹಿನ್ನೆಲೆಯಲ್ಲಿ ಅದನ್ನು ಈಗ ಕೇಂದ್ರ ಸರ್ಕಾರ ನಿಷೇಧಿಸಿದೆ. ಆದರೆ ಅವರೇ ಹುಟ್ಟುಹಾಕಿದ ಎಸ್‌ ಡಿಪಿಐ ಇನ್ನೂ ಸಕ್ರಿಯವಾಗಿದೆ. ಹಿಂದೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕಗಳಲ್ಲಿ ಸರಣಿ ಕೊಲೆಗಳು, ವಿದೇಶಿ ಅಕ್ರಮ ಹಣವ್ಯವಹಾರ, ದೇಶದ್ರೋಹ ಆರೋಪದಲ್ಲಿ ನಿಷೇಧಗೊಂಡಿದ್ದ ‘ಸಿಮಿ’, ‘ಕೆಎಫ್‌ ಡಿ’ ಪ್ರಮುಖರೇ ಪಿಎಫ್‌ ಐ ಹುಟ್ಟುಹಾಕಿದ್ದರು, ಅವರ ಎಸ್‌ಡಿಪಿಐ ರಾಜಕೀಯ ಬಣದ ಬೆಂಬಲವನ್ನು ಕಾಂಗ್ರೆಸ್‌ ಯಾಚಿಸಿರುವುದರ ಹಿಂದಿನ ಮನಸ್ಥಿತಿಯನ್ನು ಜನರು ತಿಳಿದಿರಬೇಕು ಎಂದು ಪ್ರತಾಪಸಿಂಹ ಹೇಳಿದರು.

ಇದಲ್ಲದೆ, ಬೆಂಗಳೂರಿನ ಕೆ.ಜಿ.ಹಳ್ಳಿಯಲ್ಲಿ ಕಾಂಗ್ರೆಸ್‌ನ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿದ್ದು, ಭಟ್ಕಳದ ಪರೇಶ್‌ ಮೇಸ್ತ, ದಕ್ಷಿಣಕನ್ನಡದ ಸುರತ್ಕಲ್‌ನ ದೀಪಕ್‌, ಸುಳ್ಯದ ಪ್ರವೀಣ್‌ನೆಟ್ಟಾರು, ಮಡಿಕೇರಿಯ ರುದ್ರೇಶ್‌ ಸೇರಿದಂತೆ ಅನೇಕರ ಹತ್ಯೆಯಲ್ಲಿ ಸಂಚು ರೂಪಿಸಿದ ಪಿಎಫ್‌ಐ ಸಂಘಟನೆಯ ಅಧೀನ ರಾಜಕೀಯ ಪಕ್ಷ ಎಸ್‌ ಡಿಪಿಐ ಎಂಬುದನ್ನು ಜನರು ಅರಿತಿರಬೇಕು. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಈಗ ಎಸ್‌ ಡಿಪಿಐ ಬೆಂಬಲ ಪಡೆದು, 2047ರ ಇಸ್ಲಾಂ ದೇಶದ ಅಜೆಂಡಕ್ಕೆ ಬಿಟ್ಟುಕೊಡಲು ಸಜ್ಜಾಗುತ್ತಿದ್ದಾರೆ. ಅಸ್ಸಾಂ ನಿಂದ ಆರಂಭಿಸಿ ದಕ್ಷಿಣ ಭಾರತದ ವರೆಗೆ ಇಸ್ಲಾಮಿಕ್‌ ಕಾರಿಡಾರ್‌ ಮಾಡುವ ಪ್ರಯತ್ನಕ್ಕೆ ಇವರೂ ಬೆಂಬಲ ನೀಡುವ ಪರೋಕ್ಷ ತಂತ್ರಿದು ಎಂದು ಪ್ರತಾಪಸಿಂಹ ಆರೋಪಿಸಿದರು.

ನಮ್ಮನ್ನು ಸಂಘಿಗಳು, ಬಿಜೆಪಿ ಸಂಘಪರಿವಾರದ ಅಜೆಂಡಾ ಜಾರಿ ಮಾಡುತ್ತಿದೆ ಎಂದು ಆರೋಪಿಸುತ್ತಾರೆ, ಹೌದು ನಾವು ರಾಷ್ಟ್ರಪ್ರೇಮಿ ಸಂಘಪರಿವಾರದವರು, ಅನುಬಂಧಿತ ಬಿಜೆಪಿ ಪಕ್ಷದವರೇ ಎಂದು ಸಮರ್ಥಿಸಿಕೊಂಡ ಸಂಸದ ಪ್ರತಾಪಸಿಂಹ, ನಿಷೇಧಿತ ಸಂಘಟನೆಗಳ ಕಾರ್ಯಕರ್ತರು, ಸರಣಿ ಕೊಲೆಗಟುಕರ ಮೇಲಿನ ಕ್ರಿಮಿನಲ್‌ ಪ್ರಕರಣ ರದ್ದು ಮಾಡುವಂಥವರಲ್ಲ. ಅಭಿವೃದ್ಧಿ ಕಾರ್ಯವನ್ನು ಮುಂದಿಟ್ಟೇ ಚುನಾವಣೆ ಗೆಲ್ಲುತ್ತೇವೆ. ಕೇಂಧ್ರ ಸರ್ಕಾರದ ಯೋಜನೆಗಳು ರಾಜ್ಯದ ಸರ್ಕಾರದ ಆರ್ಥಿಕ ಹಾಗೂ ಮೂರಕ ವ್ಯವಸ್ಥೆಯ ಸಹಯೋಗದ ಯೋಜನೆಗಳಲ್ಲಿ ಶಿವಮೊಗ್ಗದ ವಿಮಾನ ನಿಲ್ದಾಣ, ಬೆಂಗಳೂರು –ಮೈಸೂರು ಎಕ್ಸ್‌ಪ್ರೆಸ್‌ವೇ, 2018ರ ವೇಳೆಗೆ ಗ್ರಾಮೀಣ ಭಾಗದ ಪ್ರತಿ ಮನೆಗೂ ನಲ್ಲಿ ನೀರು ಕೊಡಿಸುವ ಜಲಜೀವನ್‌ ಮಿಷನ್‌, ಅಮೃತ್‌ –1 ಹಾಗೂ 2 ಯೋಜನೆಗಳು, ಧಾರವಾಡದ ಐಐಟಿ ಹೀಗೆ ಅನೇಕ ಯೋಜನೆಗಳು ಜನರಿಗೆ ಗೊತ್ತಿದೆ ಇದಕ್ಕಾಗಿ ಪ್ರಧಾನಿ ಜಕಳೆದೆರು ತಿಂಗಳಲ್ಲಿ ರಜ್ಯ ಭೇಟಿ ಮಾಡಿ ಜನರಿಗೆ ಇವುಗಳ ಪ್ರಯೋಜನ ನೀಡಿದ್ದಾರೆ ಎಂದರು.

ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ಕವೀಶ್‌ಗೌಡ ಮಾತನಾಡಿ, ಪ್ರಧಾನಿ ಮೋದಿ ಅವರ ಯೋಜನೆಗಳನ್ನು 8 ವರ್ಷಗಳಿಂದ ನೋಡುತ್ತಿದ್ದೇನೆ, ಅವರ ಅಭಿಮಾನಿಯಾಗಿ ಪಕ್ಷದ ಯೋಜನೆಗಳನ್ನು ಒಪ್ಪಿಕೊಂಡೇ ಸೇರ್ಪಡೆಗೊಂಡು ಅಭ್ಯರ್ಥಿಯಾಗಿದ್ದೇನೆ. ಕ್ಷೇತ್ರದಲ್ಲಿ ಈ ವರೆಗೆ ಶಾಸಕರಾದವರು ಪ್ರಭಾವಿಗಳು. ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿಲ್ಲ. ಹಾಗಾಗಿ ಜನರು ಬದಲಾವಣೆ ಬಯಸಿ ಯುವಕನಾದ ನನಗೆ ಅವಕಾಶ ಬೆಂಬಲ ನೀಡುವ ಮನಸ್ಸು ಮಾಡಿದ್ದಾರೆ. 3 ತಿಂಗಳಿಂದ ಕ್ಷೇತ್ರದಲ್ಲಿ ಪ್ರಚಾರದಲ್ಲಿದ್ದೇನೆ. ವಿದ್ಯಾರ್ಥಿಗಳು ಹಾಗೂ ಬಡವರ ಮಕ್ಕಳಿಗೆ ಶಿಕ್ಷಣ, ಶಿಷ್ಯವೇತನ, ಉದ್ಯಮ, ಉದ್ಯೋಗಕ್ಕೆ ಆದ್ಯತೆ. ಕೇಂದ್ರ–ರಾಜ್ಯ ಸರ್ಕರಗಳ ಅಭಿವೃಧ್ಧಿ– ಆರೋಗ್ಯ ಯೋಜನೆಗಳು ಇಲ್ಲಿಯೂ ಅಮರ್ಪಕ ಅನುಷ್ಠಾನಕ್ಕೆ ಗುರಿ ಇರಿಸಿ ಜನಬೆಂಬಲ ಗಳಿಸುತ್ತೇನೆ ಎಂದರು.

ಹಿಂದಿನ ಲೇಖನಐವರು ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದ ಹೆಚ್.ಡಿ.ಕುಮಾರಸ್ವಾಮಿ
ಮುಂದಿನ ಲೇಖನಲಂಚ ಪ್ರಕರಣ: ಮಾಡಾಳ್ ವಿರೂಪಾಕ್ಷಪ್ಪಗೆ ಜಾಮೀನು ಮಂಜೂರು ಮಾಡಿದ ವಿಶೇಷ ನ್ಯಾಯಾಲಯ