ಮನೆ ಅಪರಾಧ ಭ್ರೂಣ ಹತ್ಯೆ: ಮತ್ತಿಬ್ಬರ ಬಂಧನ, 8ಕ್ಕೆ ಏರಿದ ಬಂಧಿತರ ಸಂಖ್ಯೆ

ಭ್ರೂಣ ಹತ್ಯೆ: ಮತ್ತಿಬ್ಬರ ಬಂಧನ, 8ಕ್ಕೆ ಏರಿದ ಬಂಧಿತರ ಸಂಖ್ಯೆ

0

ಪಾಂಡವಪುರ:ನಾಗರಿಕ ಸಮಾಜ ತಲೆತಗ್ಗಿಸುವಂತಹ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆಯ ಅಮಾನವೀಯ ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟಾರೆ ೮ ಆರೋಪಿಗಳು ಈವರೆಗೂ ಜೈಲು ಸೇರಿದಂತಾಗಿದೆ.

Join Our Whatsapp Group


ಪಾಂಡವಪುರ ತಾಲೂಕಿನ ಮಹದೇಶ್ವರಪುರ ಗ್ರಾಮದ ಶಿವಣ್ಣ ಅವರ ಮಗ ಕಿರಣ್ ಹಾಗೂ ಹೊಸಕೋಟೆ ಗ್ರಾಮದ ಲೇ.ಪ್ರಕಾಶ್ ಅವರ ಮಗ ಎಚ್.ಪಿ.ಅಖಿಲಾಶ್ ಇಬ್ಬರು ಆರೋಪಿಗಳನ್ನು ಶುಕ್ರವಾರ ಬಂಧಿಸಲಾಗಿದ್ದು, ಈ ಪೈಕಿ ಒರ್ವ ಆರೋಪಿ ಪೊಲೀಸ್ ಠಾಣೆಗೆ ಬಂದು ಶರಣಾದರೆ ಮತ್ತೊಬ್ಬನನ್ನು ಸ್ವಗ್ರಾಮ ಹೊಸಕೋಟೆಯಲ್ಲಿ ವಶಕ್ಕೆ ಪಡೆಯಲಾಗಿದೆ.
ಮೇ.೫ ರಂದು ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಿಂಬದಿಯ ಆರೋಗ್ಯ ಇಲಾಖೆಯ ವಸತಿಗೃಹದಲ್ಲಿ ಭ್ರೂಣ ಪತ್ತೆ ಮತ್ತು ಹತ್ಯೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದಿದ್ದರು.ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಇಬ್ಬರು ಹಾಗೂ ಶುಕ್ರವಾರ ಮತ್ತಿಬ್ಬರು ಆರೋಪಿಗಳನ್ನು ಪಾಂಡವಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಕುಮಾರ್ ಹಾಗೂ ಸಬ್ ಇನ್ಸ್ಪೆಕ್ಟರ್ ಉಮೇಶ್ ಅವರು ಚುರುಕು ಕಾರ್ಯಾಚರಣೆ ಮೂಲಕ ಬಂಧಿಸಿ ವಿಚಾರಣೆ ನಡೆಸಿ ಜೈಲಿಗೆ ಕಳುಹಿಸಿದ್ದಾರೆ.
ಇಬ್ಬರು ಆರೋಪಿಗಳಾದ ಕಿರಣ್ ಮತ್ತು ಚಾಲಕ ವೃತ್ತಿ ನಿರ್ವಹಿಸುತ್ತಿದ್ದ ಎಚ್.ಪಿ.ಅಖಿಲಾಶ್ ಗರ್ಭಪಾತಕ್ಕೆ ಒಳಗಾಗುವ ಗರ್ಭಿಯಣಿಯರಿಗೆ ಭ್ರೂಣ ಪತ್ತೆಗಾಗಿ ಸ್ಕಾö್ಯನಿಂಗ್, ಹತ್ಯೆ ಮಾಡುವ ಗೌಪ್ಯ ಸ್ಥಳಗಳು ಸೇರಿದಂತೆ ಇತರೆ ಕೃತ್ಯಗಳಲ್ಲಿ ತೊಡಗಿಕೊಂಡಿದ್ದರು ಎನ್ನಲಾಗಿದೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಇದು ಎರಡನೇ ಪ್ರಕರಣವಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿ ಮತ್ತಷ್ಟು ಆರೋಪಿಗಳನ್ನು ಬಂಧಿಸಿ ಸಾಧ್ಯತೆ ದಟ್ಟವಾಗಿದೆ.