ಎಳೆ ಮಕ್ಕಳಿಗೆ ಜ್ವರ ಬಂದರೆ ತಂದೆ- ತಾಯಿಯರಿಗಷ್ಟೇ ಅಲ್ಲ ಮನೆಯವರಿಗೆಲ್ಲ ಗಾಬರಿಯಾಗುತ್ತದೆ. ಹಸುಗುಸು ಜ್ವರದಿಂದ ನರಳುತ್ತಿದ್ದರೆ ತಾಯಿಯ ಹೃದಯದ ಬಡಿತ ಹೆಚ್ಚಾಗುತ್ತದೆ.
ಎರಡು ವರ್ಷದೊಳಗಿನ ಮಕ್ಕಳಿಗೆ ಜ್ವರ ಬರುವುದು ಹೆಚ್ಚು. ಆ ಜ್ವರದ ಕಾರಣಗಳು ಕಂಡು ಹಿಡಿಯುವುದು ಕಷ್ಟ. ರಕ್ತ ಪರೀಕ್ಷೆಯಿಂದ ಜ್ವರವನ್ನು ನಿರ್ಧರಿಸಲಾಗುವುದಿಲ್ಲ. ಎಳೆಯ ಮಕ್ಕಳಿಗೆ ಜ್ವರ ಬಂದಾಗ ಆ ಜ್ವರ ಎಂತಹದು ಅದರಿಂದ ಆಗುವ ಜಟಿಲತೆಗಳೇನು ಅದನ್ನು ನಿಯಂತ್ರಿಸುವ ಬಗೆ ಹೇಗೆ ಎಂಬುದನ್ನು ಪರೀಕ್ಷೆಗಳ ಮೂಲಕ ನಿರ್ಧಾರಕ್ಕೆ ಬರುವುದಕ್ಕಿಂತ ಒಳ್ಳೆಯ ಅನುಭವ ಮತ್ತು ಸಾಮರ್ಥ್ಯವಿರುವ ವೈದ್ಯರು ಮಗುವಿನ ಜ್ವರದ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಬಲ್ಲರು.
ಮಕ್ಕಳ ಜ್ವರದ ವಿಧಗಳು :-
ಎಳೆಯ ಮಕ್ಕಳಿಗೆ ಜ್ವರ ಬರಲು ಬ್ಯಾಕ್ಟೀರಿಯಾ ಮತ್ತು ವೈರಸ್ ಗಳ ಪ್ರಧಾನ ಕಾರಣ ಇವುಗಳಿಂದ ಹಲವಾರು ರೀತಿ ರೋಗಗಳು ಬರುತ್ತದೆ. ಆ ರೋಗಗಳಿಂದಾಗಿ ಜ್ವರಬರುತ್ತದೆ. ಮಕ್ಕಳ ಜ್ವರಗಳಿಗೆ ಸ್ವಯಂ ವೈದ್ಯಸೂಕ್ತವಲ್ಲ ಕಡ್ಡಾಯವಾಗಿ ವೈದ್ಯರಿಗೆ ತೋರಿಸಬೇಕು. ಮಾಮೂಲಿ ಜ್ವರ ಎಂದುಕೊಂಡದ್ದು ಕೆಲವು ಗಂಟೆ ಇಲ್ಲವೇ ದಿನಗಳಲ್ಲಿ ಜಟಿಲವಾಗಬಹುದು ಗಂಭೀರವಾಗಿದ್ದರೆ ಮಾತ್ರ ವೈದ್ಯರಿಗೆ ತೋರಿಸಬೇಕೆಂದು ಕೊಂಡಿದ್ದರೆ ಒಮ್ಮೊಮ್ಮೆ ಕೈ ನೀಡುತ್ತದೆ ಎಳೆಯ ಮಕ್ಕಳಲ್ಲಿ ಶೀಘ್ರವಾಗಿ ಜಟಿಲತೆಗಳು ಉಂಟಾಗುತ್ತದೆ.
ಬ್ಯಾಕ್ಟೀರಿಮಿಯಾ – ಸೆಪ್ಟಿಸೀಮಿಯ :-
ಎಳೆ ಮಕ್ಕಳಿಗೆ ಜ್ವರ ಬಂದಾಗ ಎರಡು ಪದಗಳು ಹೆಚ್ಚಾಗಿ ಬಳಸಲ್ಪಡುತ್ತದೆ 1.ಬ್ಯಾಕ್ಟೀ ರಿಮಿಯ 2.ಸೆಪ್ಟಿಸೀನಿಯ.
ರಕ್ತದಲ್ಲಿ ಬ್ಯಾಕ್ಟೀರಿಯಗಳು ಸೇರಿಕೊಂಡಾಗ ಬ್ಯಾಕ್ಟೀರಿಮಿಯಾ ಎನ್ನುತ್ತಾರೆ. ಬ್ಯಾಕ್ಟೀರಿಯಾ ದಾಳಿಯಿಂದ ಮಕ್ಕಳು ಸಪ್ಪಗೆ ಮಂಕಾದಂತೆ ಕಂಡುಬರುತ್ತಾರೆ. ಅದಕ್ಕಿಂತಲೂ ಹೆಚ್ಚಿನ ರೋಗ ಲಕ್ಷಣಗಳು ಅವರಲ್ಲಿ ಕಂಡುಬರುವುದಿಲ್ಲ
ಬಹಳಷ್ಟು ಮಕ್ಕಳು ಬ್ಯಾಕ್ಟೀರಿಯಾ ದಾಳಿಗೀಡಾದರೂ ತಡೆದುಕೊಂಡು ಅದರಿಂದ ಹೊರ ಬರುತ್ತಾರೆ. ಗುರುತಿಸಿ ಆರಂಭದಲ್ಲಿ ಸೂಕ್ತ ಚಿಕಿತ್ಸೆ ಮಾಡಿದರೆ ಮಗುವಿಗೆ ಹೆಚ್ಚಿನ ತೊಂದರೆಯಾಗುವುದಿಲ್ಲ.
ಬ್ಯಾಕ್ಟೀಮಿಯಾಗೆ ಚಿಕಿತ್ಸೆ ಮಾಡದಿದ್ದರೆ ಅದನ್ನು ತಡೆದುಕೊಳ್ಳಲಾಗದ ಮಕ್ಕಳಿಗೆ ಸೆಪ್ಟಿಸೀಮಿಯಾ, ಮೆನಿಂಜೈಟಿಸ್ (ಮೆದುಳುಬಾವು) ಬರುವ ಸಂಭವವಿದೆ.
ರಕ್ತದಲ್ಲಿ ಎಡೆಬಿಡದೆ ಬ್ಯಾಕ್ಟೀರಿಯಾಗಳಿದ್ದು ಮತ್ತಷ್ಟು ಬೆಳವಣಿಗೆ ಆಗುತ್ತಾ ಅವುಗಳಿಂದ ವಿಷ ಪದಾರ್ಥ ಬಿಡುಗಡೆಯಾಗಿ ರಕ್ತ ಕಲುಷಿತವಾಗುವುದನ್ನು ಸೆಪ್ಟಿಸೀಮಿಯ ಎನ್ನುತ್ತಾರೆ
ಸೆಪ್ಟಿಸೀಮಿಯ ಅಧಿಕವಾದಾಗ ಜ್ವರದ ತೀವ್ರತೆ ಹೆಚ್ಚಾಗುತ್ತದೆ ಅದಕ್ಕೆ ಮೊದಲು ಸಾಮಾನ್ಯ ಸ್ಥಿತಿಯಲ್ಲಿದ್ದ ಜ್ವರ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ ಮಗು ಬಹಳ ಸೊರಗುತ್ತದೆ. ರೋಗ ಲಕ್ಷಣಗಳು ತೀವ್ರವಾಗುತ್ತದೆ ಔಷಧಿ ಬಳಸಿದರೂ ಅದಕ್ಕೆ ಪ್ರತಿಕ್ರಿಯೆ ಕಂಡುಬರುವುದಿಲ್ಲ.
ಮಾಮೂಲು ಬ್ಯಾಕ್ಟಿರಿಯ ಜ್ವರಕ್ಕೆ ಪ್ಯಾರಾಸಿಟಮಾಲ್ ಸಿರಪ್ ಬಳಸಿದರೆ ಅಥವಾ ಒದ್ದೆ ಬಟ್ಟೆಯನ್ನು ಮಗುವಿನ ಮೈ ಒರೆಸಿದರೆ ಜ್ವರ ಕಡಿಮೆಯಾಗುತ್ತದೆ. ಸೆಪ್ಟಿ ಸಿಮಿಯದಲ್ಲಿ ಮಾತ್ರ ಏನೇ ಮಾಡಿದರು ಮಗು ಬೇಗ ಚೇತರಿಸಿಕೊಳ್ಳುವುದಿಲ್ಲ.
ಮೂರು ತಿಂಗಳ ಮಕ್ಕಳಲ್ಲಿ ಜ್ವರ :-
ಶೇಕಡ 1-2 ರಷ್ಟು ಎಳೆಯ ಮಕ್ಕಳಿಗೆ ಮೂರು ತಿಂಗಳೊಳಗೆ 101 ಡಿಗ್ರಿಗಿಂತ ಹೆಚ್ಚು ಜ್ವರ ಬರುವ ಸಂಭವವಿರುತ್ತದೆ. ಮುಖ್ಯವಾಗಿ ವೈರಸ್ ಸೋಂಕು ಕಾರಣವಾಗಿರುತ್ತದೆ. ಸ್ಟೆಪಲೋಕೋಸ್, ಸ್ಟ್ರಪ್ಟೊಕೋಕಸ್ ಎಂಬ ಬ್ಯಾಕ್ಟೀರಿಯಗಳಿಂದಲೂ ಜ್ವರ ಬರುತ್ತದೆ. ಸಾಮಾನ್ಯವಾಗಿ ಮೂರು ತಿಂಗಳೊಳಗಿನ ಮಕ್ಕಳಿಗೆ ಜ್ವರ ತೀವ್ರವಾಗಿ ಬಂದರೆ ತೊಂದರೆಗಳು ಉಂಟಾಗುತ್ತದೆ. ಹಾಗಾಗಿ ಎಳೆ ಮಕ್ಕಳ ವಿಷಯದಲ್ಲಿ ತಂದೆ ತಾಯಂದಿರು ಎಚ್ಚರದಿಂದಿರಬೇಕು.
ಮೂರು ತಿಂಗಳ ನಂತರ ಎರಡು ವರ್ಷದೊಳಗೆ ಬರುವ ಮಕ್ಕಳ ಜ್ವರ :-
ಮೂರು ತಿಂಗಳ ನಂತರ ಮತ್ತು ಎರಡು ವರ್ಷದೊಳಗೆ ಮಕ್ಕಳಿಗೆ ಜ್ವರ ಹೆಚ್ಚಾಗಿ ಬರುತ್ತಿರುತ್ತದೆ. ಈ ವಯಸ್ಸಿನಲ್ಲಿ ಬರುವ ಜ್ವರಗಳು ಸಾಮಾನ್ಯವಾಗಿ ವೈರಸ್ ಸೋಂಕಿನಿಂದಾಗಿರುತ್ತದೆ 2-8% ಮಕ್ಕಳಿಗೆ ಬ್ಯಾಕ್ಟೀರಿಯರ್ ಸೋಂಕು ತಗಲುತ್ತದೆ. ಬ್ಯಾಕ್ಟೀರಿಯಾ ಸೋಂಕುಇದ್ದಾಗ ಬ್ಲಡ್ ಕಲ್ಚರ್ ಮಾಡಿದಾದರೆ, ಸ್ಟ್ರೆಪ್ಟೋಕೋಕಸ್ ನ್ಯುಮೋನಿಯಾ, ಹಿಮೋಫಿಲಿಸ್, ಇನ್ ಫ್ಲುಯೆಂಜಾದ ಬ್ಯಾಕ್ಟೀರಿಯಾಗಳಾಗಿರುತ್ತದೆ. ಈ ಬ್ಯಾಕ್ಟೀರಿಯಾಗಳಲ್ಲಿ ಶೇಕಡ 50-60 ಸ್ಟ್ರೆಪ್ಟೋಕೋಕಸ್ ನ್ಯುಮೋನಿಯಾ ಆಗಿದ್ದರೆ ಶೇಕಡ 20-30 % ಹಿಮೋಫಿಲಿಸ್ ಇನ್ ಫ್ಲುಯೆಂಜಾ ರೋಗಾಣುಗಳಿರುತ್ತದೆ ಇನ್ನುಳಿದ 20 30% ರಷ್ಟು ರೋಗಾಣುಗಳಾಗಿರುತ್ತದೆ. ಈ ವಯಸ್ಸಿನಲ್ಲಿ ಜ್ವರ ಬಂದಾಗ 4-5% ಮಕ್ಕಳಿಗೆ ಮೆನಿಂಜೈಟಿಸ್ (ಮೆದುಳು ಬಾವು) ಬರುತ್ತದೆ ಮೆದುಳು ಬಾವು ಬಂದವರಿಗೆ ಜ್ವರ 104 ಕ್ಕಿಂತ ಹೆಚ್ಚಾಗಿರುತ್ತದೆ.
ರೋಗವನ್ನು ನಿರ್ಧರಿಸುವ ಪ್ರಾಮುಖ್ಯತೆ :-
ಮಕ್ಕಳಿಗೆ ಜ್ವರ ಬಂದಾಗ ವಿವರವಾಗಿ ಪರಿಶೀಲಿಸುವುದು ಪರೀಕ್ಷಿಸುವುದು ಬಹು ಅಗತ್ಯ ಪರೀಕ್ಷೆಗಳ ಮೂಲಕ ರೋಗವನ್ನು ನಿರ್ಧರಿಸುವುದಕ್ಕಿಂತಲೂ ಮಗುವಿನಲ್ಲಿರುವ ರೋಗಲಕ್ಷಣಗಳನ್ನು ಗಮನಿಸಬೇಕು. ರೋಗಲಕ್ಷಣಗಳನ್ನು ಗಮನಿಸುವಾಗ ಮಗುವಿನ ವಯಸ್ಸು ದೃಷ್ಟಿಯಲ್ಲಿಟ್ಟುಕೊಳ್ಳಬೇಕು ಒಟ್ಟಾರೆ ಮಗುವಿನ ಆರೋಗ್ಯದ ಸ್ಥಿತಿಗತಿಗಳನ್ನು ಪರಿಶೀಲಿಸಬೇಕು. ಅನಾರೋಗ್ಯ ಕೀಳಾಗುವ ಮೊದಲು ಮಗುವಿನ ಚಟುವಟಿಕೆ ಹೇಗಿತ್ತು. ನಂತರ ಏನಾಗಿದೆ ಎಂಬುದನ್ನು ಅಂದಾಜು ಮಾಡಬೇಕು, ಇದರ ಜೊತೆಗೆ ಕಿವಿಯಲ್ಲಿ ಕಿವು, ಗಂಟಲು ನೋವು, ಮೂಗಿನಲ್ಲಿ ಸುರಿಯುವುದು ಮುಂತಾದವುಗಳನ್ನು ದೃಷ್ಟಿಯಲ್ಲಿಟ್ಟುಕೊಳ್ಳಬೇಕು..
ಮೂರು ತಿಂಗಳ ಒಳಗಿನ ಮಕ್ಕಳಿಗೆ ಜ್ವರ 101 ಡಿಗ್ರಿಗಿಂತ ಹೆಚ್ಚಾಗಿದ್ದರೆ ಬ್ಯಾಕ್ಟೀರಿಯಾ ಇರಬಹುದೆಂದು ಭಾವಿಸಬೇಕು. ಎರಡು ವರ್ಷದೊಳಗಿನ ಮಕ್ಕಳಿಗೆ ಜ್ವರ 104° ಗಿಂತ ಹೆಚ್ಚಾಗಿದ್ದರೆ ಗಂಭೀರವಾಗಿ ಪರಿಗಣಿಸಬೇಕು.
ಮಗು ಸಪ್ಪಗಿದ್ದರೆ ಏಕೆ ಹಾಗಿದೆಯೆಂದು ಪರಿಶೀಲಸಬೇಕು. ಮಗುವಿನ ಕೆಮ್ಮು, ನೆಗಡಿ, ಗಂಟಲು ನೋವು ಏನಾದರೂ ಇದೆ ನೋಡಬೇಕು, ಉಸಿರಾಟ ಹೆಚ್ಚಾಗಿದೆಯೇ, ನಾಡಿ ಬಡಿತ ಜಾಸ್ತಿಯಾಗಿದೆಯೇ, ಮೂತ್ರ ವಿಸರ್ಜನೆ ಕಷ್ಟವಾಗುತ್ತಿದೆ ಎಂಬುದನ್ನು ಎಲ್ಲಾ ಗಮನಿಸಿ ವೈದ್ಯರ ಗಮನಕ್ಕೆ ತರಬೇಕು.
ಪ್ರಯೋಗಾಲದ ಪರೀಕ್ಷೆಗಳು :-
ಪ್ರಯೋಗಾಲಯದ ಪರೀಕ್ಷೆಗಳ ಮೂಲಕವೇ ಸಂಪೂರ್ಣ ರೋಗ ನಿರ್ಧಾರವಾಗುವುದಿಲ್ಲ. ರಕ್ತಪರಿಕ್ಷೆಯಲ್ಲಿ ಏನು ಇಲ್ಲದಿದ್ದರೂ ಮಗುವಿಗೆ ಗಂಭೀರವಾದ ಕಾಯಿಲೆ ಇರಬಹುದು ಪ್ರಯೋಗಾಲಯದ ಪರೀಕ್ಷೆಗಳು ಸ್ವಲ್ಪಮಟ್ಟಿಗೆ ಸಹಕಾರಿಯಾಗಬಹುದು ಮಗುವಿನ ಆರೋಗ್ಯದ ಸ್ಥಿತಿಗತಿರುವ ಲಕ್ಷಣಗಳು ಪ್ರಯೋಗಾಲಯದ ಪರೀಕ್ಷೆಗಳು ಇವೆಲ್ಲ ಪರಿಶೀಲಿಸಿ ರೋಗವನ್ನು ನಿರ್ಧರಿಸಬೇಕಾಗುತ್ತದೆ.
ಬಿಳಿ ರಕ್ತ ಕಣಗಳ ಸಂಖ್ಯೆ-ಬ್ಲಡ್ ಕಲ್ಚರ್ :-
ಮಗುವಿಗೆ ಜ್ವರ ಬಂದಾಗ ಮುಖ್ಯವಾಗಿ ಎರಡು ಪರೀಕ್ಷೆಗಳ ನೈವೇದ್ಯಗೆ ಬರುತ್ತದೆ ಒಂದು ಬಿಳಿ ಕಣಗಳ ಸಂಖ್ಯೆ (wbc count). ಎರಡು ಬ್ಲಡ್ ಕಲ್ಚರ್.
ಬಿಳಿ ರಕ್ತ ಕಣಗಳ ಒಟ್ಟು ಸಂಖ್ಯೆಯೊಂದಿಗೆ ಅಬ್ಸಲ್ಯೂಟ್ ನ್ಯೂಟ್ರೋಫಿಲ್ ಕೌಂಟ್ ಕೂಡ ಅಗತ್ಯಗಳಿವೆ. ಬಿಳಿ ಕಣಗಳ ಪ್ರಮಾಣ ಟ್ಯಾಕ್ಸಿಂಗ್ ಗ್ರಾನ್ಯೂಲ್ಸ್ ರೋಗದ ತೀವ್ರತೆಯನ್ನು ನಿರ್ಧರಿಸಲು ಸಹಕರಿಸುತ್ತದೆ.
ಬಿಳಿ ಕಣಗಳ ಸಂಖ್ಯೆ ಒಂದು ಮಿ.ಮೀ.ಗೆ-15000 ಕ್ಕಿಂತಲೂ ಹೆಚ್ಚಾಗಿದ್ದರೆ, ಇ. ಎಸ್. ಆರ್ರ್. 30 ಕ್ಕಿಂತ ಹೆಚ್ಚಾಗಿದ್ದರೆ ಅದು ಬ್ಯಾಕ್ಟೀರಿಯಾ ಆಗಿರಬಹುದು.
ಬ್ಲಡ್ ಕಲ್ಚರ್ ಮೂಲಕ ಅದು ಎಂತಹ ಬ್ಯಾಕ್ಟೀರಿಯಾ ಸೋಂಕೆಂಬುದನ್ನು ತಿಳಿಯಬಹುದು ಅಷ್ಟೇ ಅಲ್ಲದೆ ಯಾವ ರೋಗ ನಿರೋಧಕ ಔಷಧಿಗಳು ಆ ರೋಗಾಣುಗಳ ವಿರುದ್ಧ ಕೆಲಸ ಮಾಡುತ್ತದೆ ಎಂದು ನಿರ್ಧರಿಸಬಹುದು.
ಗಮನಿಸಬೇಕಾದ ವಿಷಯಗಳು : –
ಮಕ್ಕಳಿಗೆ ಜ್ವರ ಬಂದಾಗ ಬಿಳಿ ರಕ್ತ ಕಣಗಳ ಸಂಖ್ಯೆಯನ್ನು ಪರೀಕ್ಷಿಸುವುದು ಬಹಳಮುಖ್ಯ. ಬಿಳಿ ರಕ್ತ ಕಣಗಳ ಸಂಖ್ಯೆ ನಿಗದಿತ ಸಂಖ್ಯೆಗಿಂತಲೂ ಹೆಚ್ಚಾಗಿದ್ದರೆ, ಬ್ಯಾಕ್ಟೀರಿಯಾ ಸೋಂಕಿದೆ ಎಂದು ಗುರುತಿಸಬೇಕು. ಅದಕ್ಕನುಗುಣವಾಗಿ ರೋಗನಿರೋಧಕ ಔಷಧಿಗಳು ಬಳಸಬೇಕು. ಬಿಳಿ ರಕ್ತ ಕಣಗಳ ಸಂಖ್ಯೆ ಒಂದು ಕ್ಯೂಬಿಕ್ ಮಿ.ಮೀ.ಗೆ 15000 ಕ್ಕಿಂತ ಹೆಚ್ಚಾಗಿದ್ದರೆ ಬ್ಯಾಕ್ಟೀರಿಯ ಎಂದು ಪರಿಗಣಿಸಬೇಕು.
ಬ್ಯಾಕ್ಟೀರಿಯ ನಿಯಂತ್ರಿಸದಿದ್ದರೆ ನಿಧಾನವಾಗಿ ಮೆನಿಂಜೈಟಿಸ್ ಬರುವ ಸಂಭವವಿದೆ ಹಾಗಾಗಿ ಜ್ವರವಿದ್ದಷ್ಟು ದಿನ ಮೆನಿಂಜೈಟಿಸ್ ಲಕ್ಷಣಗಳು ಬೆಳವಣಿಗೆ ಆಗುತ್ತಿರುವುದು ಇಲ್ಲದಿರುವುದನ್ನು ಗಮನಿಸುತ್ತಿರಬೇಕು….
ಜ್ವರ ನೂರಾರು ಡಿಗ್ರಿಗಿಂತಲೂ ಹೆಚ್ಚಾಗಿದ್ದರೆ ರೋಗ ಗಂಭೀರವಾಗಿದೆ ಎಂದು ಅರ್ಥ ಚರ್ಮದ ಮೇಲೆ ರಾಷ್ ಗುಳ್ಳೆಗಳು ಬಂದರೆ ಎಚ್ಚರ ವಹಿಸಬೇಕು. ಇದನ್ನು ವೈದ್ಯರು ನಿರ್ಧರಿಸುತ್ತಾರೆ.
ಜ್ವರಕ್ಕೆ ಪ್ರಥಮ ಚಿಕಿತ್ಸೆ :-
ಮಗುವಿಗೆ ಜ್ವರವಿದ್ದಾಗ ಅದು ಎಷ್ಟಿದೆ ಎಂಬುದನ್ನು ಥರ್ಮಾಮೀಟರ್ನಿಂದ ಅಳೆಯಬೇಕು. ಆ ಸಂಖ್ಯೆಯನ್ನು ಕಾಗದ ಮೇಲೆ ನಮೂದಿಸಬೇಕು 101 ಡಿಗ್ರಿಗಿಂತಲೂ ಹೆಚ್ಚಾಗಿದ್ದರೆ ಒದ್ದೆ ಬಟ್ಟೆಯಿಂದ ಮೈಯನ್ನು ಒರೆಸಬೇಕು.
ಜ್ವರ 103-104 ರಷ್ಟು ಇದ್ದರೆ ಹಣ ಮತ್ತು ತಲೆಯ ಮೇಲೆ ಒದ್ದೆ ಬಟ್ಟೆಯನ್ನು ಹಾಕಬೇಕು. ಜ್ವರ ಇನ್ನೂ ಹೆಚ್ಚಾಗಿದ್ದರೆ ಇಡೀ ಮೈಗೆ ಒದ್ದೆ ಬಟ್ಟೆ ಹೊದಿಸಬೇಕು, ಜ್ವರ 101 ಕೇಳಿದಾಗ ತಕ್ಷಣ ಒದ್ದೆ ಬಟ್ಟೆ ತೆಗೆಯಬೇಕು.
ಜ್ವರ ಹೆಚ್ಚಾಗಿದ್ದಾಗ ಪ್ಯಾರಾಸಿಟಮಲ್ ಸಿರಪ್ ಕುಡಿಸಬೇಕು ಇದರ ಪ್ರಮಾಣವನ್ನು ವೈದ್ಯರ ನಿರ್ಧರಿಸಿರುತ್ತಾರೆ.
ಔಷಧಿ ಬಳಸುತ್ತಿದ್ದರು ಜ್ವರ ಏರುತ್ತಿರಬಹುದು ಅಂತಹ ಜ್ವರವನ್ನು ನಿಯಂತ್ರಿಸಲು ವೈದ್ಯರ ಸಲಹೆ ಪಡೆಯಬೇಕು ಜ್ವರ ಹೆಚ್ಚಾಗಿದ್ದರೆ ಮಗು ಕುಡಿಯುವುದಾದರೆ ದ್ರವಹಾರವನ್ನು ಹೆಚ್ಚಿಗೆ ಕೊಡಬೇಕು. ಜ್ವರ ಹೆಚ್ಚಾಗಿದ್ದರು ಪರಿಸ್ಥಿತಿ ಚಿಂತಾ ಜನಕವಾಗಿದ್ದರು ವೈದ್ಯರ ಸಲಹೆಯಂತೆ ಆಸ್ಪತ್ರೆಯಲ್ಲಿರಬೇಕು.