ಮನೆ ಅಪರಾಧ ಎರಡು ಕುಟುಂಬಗಳ ನಡುವೆ ಮಾರಾಮಾರಿ: ಜಗಳ ಬಿಡಿಸಲು ಹೋದ ವ್ಯಕ್ತಿಯ ಹತ್ಯೆ

ಎರಡು ಕುಟುಂಬಗಳ ನಡುವೆ ಮಾರಾಮಾರಿ: ಜಗಳ ಬಿಡಿಸಲು ಹೋದ ವ್ಯಕ್ತಿಯ ಹತ್ಯೆ

0

ರಾಯಚೂರು: ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬಗಳ ಮಧ್ಯ ನಡೆದಿದ್ದ ಮಾರಾಮಾರಿಯನ್ನು ಬಿಡಿಸಲು ಹೋಗಿದ್ದ ವ್ಯಕ್ತಿಯನ್ನೇ ಹೊಡೆದು ಕೊಲೆ ಮಾಡಿರುವಂತಹ ದುರಂತ ಘಟನೆ ಜಿಲ್ಲೆಯ ಮಾನ್ವಿ ತಾಲ್ಲೂಕಿನ ಮಲ್ಲಿಗೆ ಮಡುವು ಗ್ರಾಮದಲ್ಲಿ ಮಾರ್ಚ್​​ 3ರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Join Our Whatsapp Group

ಭೀಮಪ್ಪ ಕಾವಲಿ (45) ಮೃತ ವ್ಯಕ್ತಿ. ಸದ್ಯ ಮಾನ್ವಿ ಪೊಲೀಸರು ಉರುಕುಂದ, ವೇಂಕಟೇಶ್, ಗೋಕಯ್ಯ, ತಿಮ್ಮಪ್ಪ ಸೇರಿ ಏಳು ಜನರು ಬಂಧಿಸಿದ್ದಾರೆ. ದೂರು, ಪ್ರತಿ ದೂರು ದಾಖಲಾಗಿದೆ.

ಮಾನ್ವಿ ತಾಲ್ಲೂಕಿನ ಮಲ್ಲಿಗೆ ಮಡುವು ಗ್ರಾಮದ ಹೊರ ಭಾಗದಲ್ಲಿ ಹಳ್ಳದ ರಸ್ತೆ ಕಾಮಗಾರಿ ನಡೆಯಿತ್ತಿದೆ. ಇದೇ ಕಾಮಗಾರಿಯ ಬೋರ್ಡ್​ಗೆ ಆರೋಪಿ ವಿರೇಶ್ ಟ್ರ್ಯಾಕ್ಟರ್​​​ ಗುದ್ದಿಸಿದ್ದ. ಈ ಬಗ್ಗೆ ಕಾಮಗಾರಿ ಮಾಡಿಸುತ್ತಿದ್ದ ವೆಂಕೋಬಾ ಹಾಗೂ ವಿರೇಶ್ ನಡುವೆ ಕಿರಿಕ್ ಉಂಟಾಗಿದೆ. ಆಗ ವಿರೇಶ್​ನಿಂದ ವೆಂಕೋಬಾ ಮೇಲೆ ಹಲ್ಲೆ ಮಾಡಿರುವ ಆರೋಪ ಮಾಡಲಾಗಿದೆ.

ಈ ವಿಚಾರವಾಗಿ ವೆಂಕೋಬಾ ಹಾಗೂ ವಿರೇಶ್​ನ ಕುಟುಂಬಗಳ ನಡುವೇ ಭೀಕರ ಹೊಡೆದಾಟ ನಡೆದಿದೆ. ಆಗ ಎರಡು ಕಡೆಯವರು ಸಂಬಂಧಿಕರೇ ಅಂತ ಜಗಳ ಬಿಡಿಸಲು ಭೀಮಪ್ಪ ಹೋಗಿದ್ದ. ಆಗ ಭೀಮಪ್ಪನನ್ನೇ ದೊಣ್ಣೆ, ರಾಡ್​​ಗಳಿಂದ ಹೊಡೆದು ವಿರೇಶ್ ಹಾಗೂ ಆತನ ಕಡೆಯವರು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಪ್ರಮುಖ ಆರೋಪಿ ವಿರೇಶ್​ಗೂ ಗಾಯವಾಗಿದ್ದು, ಬಳ್ಳಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.