ಮನೆ ರಾಷ್ಟ್ರೀಯ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಫಿಜಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ

ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಫಿಜಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ

0

ಸುವಾ (ಫಿಜಿ): ಎರಡು ದಿನಗಳ ಫಿಜಿ ಭೇಟಿಯಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಫಿಜಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Join Our Whatsapp Group

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ರಾಷ್ಟ್ರಪತಿ ಕಚೇರಿ, ‘ಫಿಜಿಯ ಅಧ್ಯಕ್ಷ ರತು ವಿಲಿಯಮ್ ಮೈವಲಿಲಿ ಕಟೋನಿವೆರೆ ಅವರು ದ್ರೌಪದಿ ಮುರ್ಮು ಅವರಿಗೆ ‘ಆರ್ಡರ್ ಆಫ್ ಫಿಜಿ’ಯನ್ನು ನೀಡಿ ಗೌರವಿಸಿದರು. ಇದು ಫಿಜಿಯ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ’ ಎಂದು ಬರೆದುಕೊಂಡಿದೆ.

ಭಾರತದಿಂದ ರಾಷ್ಟ್ರಪತಿಯೊಬ್ಬರು ದ್ವೀಪಸಮೂಹ ರಾಷ್ಟ್ರಕ್ಕೆ ಭೇಟಿ ನೀಡಿರುವುದು ಇದೇ ಮೊದಲು.

ಈ ವೇಳೆ ಮಾತನಾಡಿದ ಮುರ್ಮು, ಈ ಗೌರವವು ಭಾರತ ಮತ್ತು ಫಿಜಿ ನಡುವಿನ ಸ್ನೇಹದ ಪ್ರತಿಬಿಂಬವಾಗಿದೆ ಎಂದು ಬಣ್ಣಿಸಿದರು. ಜತೆಗೆ ಉಭಯ ದೇಶಗಳ ಬಾಂಧವ್ಯವನ್ನು ಶ್ಲಾಘಿಸಿ, ಫಿಜಿಯನ್ನು ಸದೃಢ ರಾಷ್ಟ್ರವಾಗಿಸಲು ಪಾಲುದಾರಿಕೆಗೆ ಭಾರತ ಸಿದ್ಧವಾಗಿದೆ ಎಂದರು.

‘ಗಾತ್ರದಲ್ಲಿ ಅಗಾಧ ವ್ಯತ್ಯಾಸವಿದ್ದರೂ, ಭಾರತ ಮತ್ತು ಫಿಜಿ ಪ್ರಜಾಪ್ರಭುತ್ವ ಒಳಗೊಂಡಂತೆ ಬಹಳಷ್ಟು ಸಾಮ್ಯತೆಗಳನ್ನು ಹೊಂದಿದೆ. ಸುಮಾರು 10 ವರ್ಷಗಳ ಹಿಂದೆ ಇದೇ ಸಭಾಂಗಣದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮತ್ತು ಫಿಜಿಯನ್ನು ಒಂದುಗೂಡಿಸುವ ಕೆಲವು ಮೂಲಭೂತ ಮೌಲ್ಯಗಳನ್ನು ಒತ್ತಿಹೇಳಿದ್ದರು. ಅವುಗಳಲ್ಲಿ ‘ನಮ್ಮ ಪ್ರಜಾಪ್ರಭುತ್ವ, ನಮ್ಮ ಸಮಾಜಗಳ ವೈವಿಧ್ಯತೆ, ಎಲ್ಲಾ ಮಾನವರು ಸಮಾನರು ಮತ್ತು ಪ್ರತಿಯೊಬ್ಬ ವ್ಯಕ್ತಿಯ ಸ್ವಾತಂತ್ರ್ಯ, ಘನತೆ ಮತ್ತು ಹಕ್ಕುಗಳಿಗೆ ನಮ್ಮ ಬದ್ಧತೆ’ ಸೇರಿವೆ. ಈ ಮೌಲ್ಯಗಳು ಉಭಯ ದೇಶಗಳ ನಡುವೆ ಮಾರ್ಗದರ್ಶನಕ್ಕೆ ಸಹಕಾರಿ ಎಂದರು.