ಮನೆ ರಾಷ್ಟ್ರೀಯ ಭಾರತವನ್ನು ಶತ್ರುಗಳಿಂದ ರಕ್ಷಿಸಿ ಹೊರಟ ಮಿಗ್​-21ಗೆ ಅಂತಿಮ ವಿದಾಯ

ಭಾರತವನ್ನು ಶತ್ರುಗಳಿಂದ ರಕ್ಷಿಸಿ ಹೊರಟ ಮಿಗ್​-21ಗೆ ಅಂತಿಮ ವಿದಾಯ

0

ಚಂಡೀಗಢ : ಅರವತ್ಮೂರು ವರ್ಷಗಳ ಕಾಲ ರಕ್ಷಣಾ ಗುರಾಣಿಯಂತೆ ಶತ್ರುಗಳಿಂದ ಭಾರತವನ್ನು ರಕ್ಷಿಸಿದ್ದ ಮಿಗ್-21 ಯುದ್ಧ ವಿಮಾನ ತನ್ನ ಕೆಲಸವನ್ನು ಮುಗಿಸಿ ನಿವೃತ್ತಿ ಪಡೆದಿದೆ. ಇಂದು ಚಂಡೀಗಢದಲ್ಲಿ ಅಂತಿಮ ಹಾರಾಟ ನಡೆಸಿತು. ಭಾರತದ ಜನತೆ ಹಾಗೂ ವಾಯುಪಡೆಗೆ ಇದು ಭಾವನಾತ್ಮಕ ಕ್ಷಣವಾಗಿದೆ. 1950 ರ ದಶಕದಲ್ಲಿ ಸೋವಿಯತ್ ಒಕ್ಕೂಟವು ವಿನ್ಯಾಸಗೊಳಿಸಿದ MiG-21 ಅನ್ನು 1963 ರಲ್ಲಿ ಭಾರತೀಯ ವಾಯುಪಡೆಗೆ ಸೇರಿಸಲಾಯಿತು.

ಭಾರತವು ಒಟ್ಟು 874 ವಿಮಾನಗಳನ್ನು ಸ್ವಾಧೀನಪಡಿಸಿಕೊಂಡಿತ್ತು. 1965 ಮತ್ತು 1971 ರ ಪಾಕಿಸ್ತಾನದ ವಿರುದ್ಧದ ಯುದ್ಧಗಳಿಂದ ಕಾರ್ಗಿಲ್ ಸಂಘರ್ಷದವರೆಗೆ, ಎಲ್ಲಾ ಹಂತದಲ್ಲೂ ಮಿಗ್-21 ಭಾರತದ ವಾಯುಪಡೆಗೆ ಬೆನ್ನೆಲುಬಾಗಿ ನಿಂತಿತ್ತು. ಇಂದು ಅದಕ್ಕೆ ಅಂತಿಮ ವಿದಾಯ ಹೇಳಲಾಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿ ಹಲವು ಗಣ್ಯರು ಸ್ಥಳದಲ್ಲಿದ್ದರು.