ತಾಯಿಯ ಎದೆ ಹಾಲು ಕುಡಿಯುವ ವಯಸ್ಸಿನವರು ಬೆರಳು ಚೀಪುವುದು ಸಹಜ.ಆದರೆ, ನಾಲ್ಕೈದು ವರ್ಷಗಳಾದ ನಂತರವೂ ಈ ಅಭ್ಯಾಸ ಮುಂದುವರೆದರೆ ಒಳ್ಳೆಯದಲ್ಲ ಮತ್ತೆ ಕೆಲವರು ಬಾಯಲ್ಲಿ ಬೆರಳುಗಳ ಜೊತೆಗೆ, ಇನ್ನೊಂದು ಕೈಯಿಂದ ಕಿವಿಯೊಂದಿಗೆ ಆಟವಾಡುತ್ತಾ ಮೈಮರೆಯುತ್ತಿರುತ್ತಾರೆ. ಕೆಲವರು ಬಾಯಲ್ಲಿ ಬೆರಳಿಟ್ಟುಕೊಂಡು ಪ್ರಶಾಂತವಾಗಿ ನಿದ್ರಿಸುತ್ತಿರುತ್ತಾರೆ.ಇದು ಅವರವರು ರೂಢಿಸಿಕೊಂಡ ಅಭ್ಯಾಸವಾದರಿಂದ ಧೈರ್ಯವಾಗಿರಿ. ತನ್ನ ತಮ್ಮ ತಂಗಿಯನ್ನು ಅತಿಯಾಗಿ ಮುದ್ದಿಸುತ್ತಾರೆ. ತನ್ನನ್ನು ಕಡೆಗಣಿಸುತ್ತಿದ್ದಾರೆಂದುಕೊಳ್ಳುವ ಮಕ್ಕಳು ಈ ಅಭ್ಯಾಸಕ್ಕೆ ಬಲಿಯಾಗಬಹುದು. ಅಂತಹ ಮಕ್ಕಳಿಗೆ ಮಾನಸಿಕ ಧೈರ್ಯ ನೀಡಬೇಕು.ಇದನ್ನು ಮಾನಸಿಕ ತಜ್ಞರು ಮತ್ತು ಸಲಹೆಗಾರರು ಮಾಡಬಲ್ಲರು. ಇದು ಬದಲಾಗದಿದ್ದರೆ ದೊಡ್ಡವರಾದ ಮೇಲೆ ಪೆನ್ನು ಪೆನ್ಸಿಲ್ ಗಳನ್ನು ಬಾಯಲ್ಲಿಟ್ಟುಕೊಳ್ಳುವ ಅಭ್ಯಾಸ ಶುರು ಆಗಬಹುದು
ಅಭ್ಯಾಸ ಬದಲಾಯಿಸುವ ಉಪಾಯಗಳು
★ಸಣ್ಣ ಮಕ್ಕಳಾದರೆ ಯಾವ ಬೆರಳನ್ನು ಬಾಯಿಯಲ್ಲಿ ಇಟ್ಟುಕೊಳ್ಳುವುದೊ ಆ ಬೆರಳಿಗೆ ನಿಂಬೆರಸ, ಸ್ವಲ್ಪ ದೊಡ್ಡವರಾದರೆ ಬೇವಿನ ರಸ ಅಥವಾ ಹಾಗಲಕಾಯಿ ರಸವನ್ನು ಲೇಪಿಸಬೇಕು.
★ಬೆರಳಿಗೊಂದು ರಬ್ಬರ್ ಬ್ಯಾಂಡ್ ಅನ್ನು ಹಾಕಬೇಕು. ಮರೆತು ಬಾಯಲ್ಲಿಟ್ಟುಕೊಂಡರೂ ತಕ್ಷಣ ನೆನಪಿಗೆ ಬರುತ್ತದೆ.
★ಬೆರಳಿಗೆ ಒಂದು ದೊಡ್ಡ ಬಟ್ಟೆಯನ್ನು ಸುತ್ತಬೇಕು. ಇದರಿಂದಾಗಿ ನಿದ್ದೆಯಲ್ಲಿ ಅಪಿ ತಪ್ಪಿ ಬಾಯಲ್ಲಿ ಬೆರಳಿಟ್ಟುಕೊಳ್ಳಬೇಕೆಂದುಕೊಂಡರೂ ಹಿಡಿಸುವುದಿಲ್ಲ.
★ ಬೆರಳಿಗೆ ಸೆಲೋ ಟಿಪ್ ಅಥವಾ ಬ್ಯಾಂಕ್ ಏಡ್ ಸುತ್ತಬೇಕು. ಅವುಗಳನ್ನು ಬಾಯಿಯಲ್ಲಿ ಟ್ಟುಕೊಳ್ಳುವುದರಿಂದ ಅಪಾಯ ಎಂದು ಹೇಳಬೇಕು.
★ಸ್ವಲ್ಪ ದೊಡ್ಡ ಮಕ್ಕಳಾದರೆ,ಬಾಯಲ್ಲಿ ಬೆರಟ್ಟುಕೊಳ್ಳುವುದರಿಂದ ಉಗುರಿನಲ್ಲಿನ ಕಲ್ಮಶ ಮಣ್ಣಿನಿಂದಾಗಿ ಆರೋಗ್ಯ ಹಾಳಾಗುತ್ತದೆಯೆಂದು ತಿಳಿ ಹೇಳಬೇಕು.
ಉಗುರು ಕಚ್ಚುವುದು :
ಇದು ಕೂಡ ಒಂದು ಮಾನಸಿಕ ಸಮಸ್ಯೆ ಐದು ವರ್ಷ ವಯಸ್ಸಿನಿಂದ ಪ್ರಾರಂಭವಾಗಿ ದೊಡ್ಡವರಾದ ಮೇಲೂ ಇರಬಹುದು.
ಈ ಸಮಸ್ಯೆಯಿರುವವರು ತಮಗೇ ಗೊತ್ತಿಲ್ಲದ ಹಾಗೆ, ಉರುಗಳನ್ನು ಕಚ್ಚುತ್ತಿರುತ್ತಾರೆ. ಸಹಜವಾಗಿ ಯಾವುದಾದರೂ ತೀವ್ರ ಆಲೋಚನೆ, ವ್ಯಾಕುಲತೆ ಹಾಗೂ ಆತಂಕಗೊಂಡ ಸಮಯದಲ್ಲಿ ಈ ರೀತಿ ಕಚ್ಚುತ್ತಾರೆ ಮತ್ತೆ ಕೆಲವರು ಟಿ.ವಿ. ಧಾರಾವಾಹಿಗಳನ್ನು ನೋಡುತ್ತಿದ್ದರೂ, ಭಾಗವಹಿಸಿದ್ದರೂ ಉಗುರು ಕಚ್ಚುತ್ತಲೇ ಇರುತ್ತಾರೆ. ನೋಡುವವರಿಗೆ ಇದು ಅಸಹ್ಯವನ್ನುಂಟು ಮಾಡುತ್ತದೆಂದು ಗೊತ್ತಾಗಿ ಅವರಿಗೆ ಶೇಕ್ ಹ್ಯಾಂಡ್ ನೀಡಲು ಕೂಡಾ ಹಿಂಜರಿಯುತ್ತಾರೆ. ಹೀಗೆ ತಿಳಿದೂ ಕೂಡಾ ಅಭ್ಯಾಸ ಬಿಡಲಾಗದೆ ಒದ್ದಾಡುತ್ತಾರೆ.
ಇದಕ್ಕೆ ಪರಿಹಾರವೇನೆಂದರೆ, ಉಗುರು ಕಚ್ಚಲು ಮುಂದಾದಾಗ ನೆನಪಿಗೆ ಬರುವ ಹಾಗೆ, ಆ ಬೆರಳಿನ ಉಗುರಿಗೆ ಕೆಂಪು ಬಣ್ಣ ಹಚ್ಚಿಕೊಳ್ಳಬೇಕು.ಎಲ್ಲಕ್ಕಿಂತ ಮಿಗಿಲಾಗಿ ಒತ್ತಡವನ್ನು Shops ಮಾಡಿಕೊಳ್ಳವ ಯೋಗ,ಧ್ಯಾನ,ಅಥವಾ ಸೆಲ್ಫ್ ಹಿಪ್ನಾಟಿಸಮ್ ಉತ್ತಮ ಪರಿಹಾರ.
ಹಿಂಸಾತ್ಮಕ ಪ್ರವರ್ತನೆ :
ಕೆಲವೊಂದು ಮಕ್ಕಳ ನಡುವಳಿಕೆಗಳು ಭಯಾನಕವಾಗಿರುತ್ತದೆ. ಕೈ ಕುಯ್ದುಕೊಳ್ಳುವುದು ಅಥವಾ ಕುಯ್ಯುತ್ತೇನೆ ಎಂದು ಬಿದರಿಸುವುದು. ಬೇಕಂತಲೇ ತಪ್ಪುಗಳನ್ನು ಮಾಡುವುದು. ಶಾಲೆಗೆ ಹೋಗುವುದಿಲ್ಲವೆಂದು ಹಠಹಿಡಿಯುವುದು, ಸಾಯಬೇಕೆಂದು ಪ್ರಯತ್ನಿಸುವುದು, ಮನೆಬಿಟ್ಟು ಓಡಿ ಹೋಗುವುದು, ವಸ್ತುಗಳನ್ನು ಹೊಡೆದುಹಾಕುವುದು ಹಾಳು ಮಾಡುವುದು ಮುಂತಾದವುಗಳನ್ನು ಮಾಡುತ್ತಿರುತ್ತಾರೆ.
ಮನೋ ವಿಜ್ಞಾನಿಗಳ ಸಂಶೋಧನೆಯಲ್ಲಿ ಮುಖ್ಯವಾಗಿ ಸ್ಪಷ್ಟವಾದದ್ದೇನೆಂದರೆ,ಅಂತಹ ಮಕ್ಕಳನ್ನು ಟೀಚರ್ ಗಳು ಇತರರು ಸಂಬಂಧಿತ ಕೆಲಸಗಳಿಗೆ ಬಳಸಿಕೊಳ್ಳುವುದರಿಂದ ಮಾನಸಿಕ ಒತ್ತಡಕ್ಕೆ ಗುರಿಯಾಗಿ, ತಮ್ಮಗಿರವಿಲ್ಲದೇನೆ ಈ ರೀತಿಯಾಗಿ ನಡೆದುಕೊಳ್ಳಬಹುದೆಂದು ಸ್ಪಷ್ಟಪಡಿಸಿದರು. ಇನ್ನು ಎರಡನೇ ಕಾರಣ ತಾಯಿ ಅಥವಾ ತಂದೆಯ ಅತಿರೇಕದ ಪ್ರವರ್ತನೆ ಕೂಡಾ ಹಿಂಸಾತ್ಮಕ ರೀತಿಗೆ ಕಾರಣವಾಗಬಹುದು. ಒಬ್ಬ ಫ್ಯಾಮಿಲಿ ಕೌನ್ಸಿಲರ್ ಇದಕ್ಕೆ ಸುಲಭವಾಗಿ ಚಿಕಿತ್ಸೆ ನೀಡಬಲ್ಲರು.