ಬೆಂಗಳೂರು: ಅಪಾರ್ಟ್‌ಮೆಂಟ್ ನಿರ್ಮಿಸಿಕೊಡುವುದಾಗಿ ಜಾಹೀರಾತು ನೀಡಿ, ಅಪಾರ್ಟ್‌ಮೆಂಟ್ ಗಳು ಪೂರ್ಣಗೊಳ್ಳದಿದ್ದರೂ ಸಾರ್ವಜನಿಕರಿಂದ ಹಣ ಪಡೆದು ಸಾವಿರಾರು ಕೋಟಿ ರೂ. ವಂಚನೆ ಮಾಡಿದ ಆರೋಪದಡಿ ಓಜೋನ್ ಅರ್ಬನ್ ಇನ್ಫಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಸೇರಿ 13 ಮಂದಿ ವಿರುದ್ಧ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದೇವನಹಳ್ಳಿಯ ಹೌಸ್ ಆಫ್ ಹಿರಾನಂದನಿಯ ಓಜೋನ್ ಅರ್ಬನ್ ಬೈಯರ್ಸ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಫಾರೂಲ್ ಜಾನ್ ನರೊನಾ ಎಂಬುವರು ನೀಡಿದ ದೂರಿನ ಮೇರೆಗೆ ಸಿಸಿಬಿ ಪೊಲೀಸರು, ಹಲಸೂರಿನ ಒಜೋನ್ ಅರ್ಬನ್ ಇನಾø ಡೆವಲಪರ್ಸ್, ರಿಚ್ಮಂಡ್ ಟೌನ್‌ನಲ್ಲಿರುವ ವಾಸುದೇವನ್ ಸತ್ಯಮೂರ್ತಿ, ಪ್ರಿಯಾ ವಾಸುದೇವನ್, ಮ್ಯೂಸಿಯಂ ರಸ್ತೆಯ ಸತ್ಯಮೂರ್ತಿ ಸಾಯಿ ಪ್ರಸಾದ್, ದುರ್ಬಕುಲಾ ವಂಶಿ ಸಾಯಿ, ಶ್ರೀನಿವಾಸ್ ಗೋಪಾಲನ್, ಶಿವಸಾಗರ್ ನೇಮಿಚಂದ್, ರಾಜೀವ್ ಭಂಡಾರಿ, ಬಿಟಲ್ ಮಂಗಿಲಾಲ್ ಸಿಂಗ್, ಎಸ್.ಭಾಸ್ಕರನ್, ಗೌರವ್ ಗೋಯಲ್, ಗಣಪತಿ ಜೋಶಿ ಹಾಗೂ ವಿವಿಧ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಅದಕ್ಕೂ ಮೊದಲು ಸಿಸಿಬಿಯ ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಬಳಿಕ ಓಜೋನ್ ಗ್ರೂಪ್ ಕಂಪನಿಯ ಬಗ್ಗೆ ಸಿಸಿಬಿಯ ಪಿಐ ಸಂತೋಷ್ ರಾವ್ ತನಿಖೆ ನಡೆಸಿದಾಗ ನಿರ್ದೇಶಕರು ವಂಚನೆ ಮಾಡಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಏನಿದು ಸಾವಿರಾರು ಕೋಟಿ ರೂ. ವಂಚನೆ?: ಒಜೋನ್ ಗ್ರೂಪ್ ಎಂಬ ಕಂಪನಿಯ ನಿರ್ದೇಶಕರು, ಓಜೋನ್ ಅರ್ಬನ್ ಪ್ರಾಜೆಕ್ಟ್ ಹೆಸರಿನಲ್ಲಿ ಮನೆಗಳನ್ನು ನಿರ್ಮಾಣ ಮಾಡುವುದಾಗಿ ಜಾಹೀರಾತು ನೀಡಿದ್ದರು. ಆದರೆ, ಅಪಾರ್ಟ್‌ಮೆಂಟ್‌ಗಳು ಪೂರ್ಣಗೊಳಿಸಿದ್ದರೂ ಬ್ಯಾಂಕ್ ಅಧಿಕಾರಿಗಳ ಜೊತೆಗೆ ಶಾಮೀಲಾಗಿ ಗೃಹಸಾಲ ಮಾಡಿಸಿಕೊಂಡು ಖರೀದಿದಾರರಿಂದ ಹಣ ಪಡೆದುಕೊಂಡಿದ್ದಾರೆ. ಆ ಹಣವನ್ನು ಸ್ವಂತ ಕಂಪನಿಗಳ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿರುವುದು ಹಾಗೂ ಗ್ರಾಹಕರಿಗೆ ದೂರು ನೀಡದಂತೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವುದು ಕಂಡುಬಂದಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಪೂಜನಹಳ್ಳಿ ಹಾಗೂ ಕನ್ನಮಂಗಲ ಗ್ರಾಮದಲ್ಲಿ ಓಜೋನ್ ಅರ್ಬನ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಅಧಿಕಾರಿಗಳು ಓಜೋನ್ ಹೆಸರಿನಲ್ಲಿ 2012ರಲ್ಲಿ ಯೋಜನೆ ಕೈಗೆತ್ತಿಕೊಂಡಿದ್ದರು. 2017ಕ್ಕೆ ಈ ಯೋಜನೆ ಮುಕ್ತಾಯ ಮಾಡಿ ಫ್ಲ್ಯಾಟ್‌ಗಳನ್ನು ಹಸ್ತಾಂತರಿಸಬೇಕಿತ್ತು. ತಮ್ಮ ಅಸೋಸಿಯೇಷನ್ ಸದಸ್ಯರಿಗೂ ಮನೆ ಮಾರಾಟ ಮಾಡಲಾಗಿತ್ತು. ಹಲಸೂರಿನಲ್ಲಿ ಇರುವ ಕಚೇರಿ ನಿರ್ದೇಶಕರು ಹಾಗೂ ಮಧ್ಯವರ್ತಿಗಳು, ಅಪಾರ್ಟ್‌ಮೆಂಟ್ ನಿರ್ಮಾಣ ಯೋಜನೆಯ ಬಗ್ಗೆ ಆನ್‌ಲೈನ್ ಹಾಗೂ ಆಫ್ಲೈನ್‌ನಲ್ಲಿ ಜಾಹೀರಾತು ನೀಡಿದ್ದರು.
ಕಂಪನಿಯ ಅಧಿಕಾರಿಗಳು ಮತ್ತು ನಿರ್ದೇಶಕರು ಮನೆಗಳನ್ನು ಖರೀದಿಸುವವರಿಗೆ ತಮ್ಮ ಬ್ಯಾಂಕ್‌ಗಳೊಂದಿಗೆ ಟೈ ಆಪ್ ಮಾಡಿಕೊಂಡಿದ್ದು, ಬ್ಯಾಂಕ್‌ಗಳಿಂದ ಮತ್ತು ಹೌಸಿಂಗ್ ಫೈನಾನ್ಸ್ ಕಂಪನಿಗಳಿಂದ ಗೃಹ ಸಾಲ ಕೊಡಿಸುವುದು, ವಿವಿಧ ಸ್ಕಿಮ್‌ಗಳ ಅಡಿ ಯಲ್ಲಿ ಸೌಲಭ್ಯ ಒದಗಿಸುವುದಾಗಿ ಆಮಿಷವೊಡಿದ್ದಾರೆ. ಬಳಿಕ ವಿವಿಧ ಬ್ಯಾಂಕ್‌ಗಳಲ್ಲಿ ಖರೀದಿದಾರರ ಹೆಸರಿನಲ್ಲಿ 1500 ಕೋಟಿ( ಮಾರ್ಟ್‌ಗೇಜ್) ಲೋನ್ ಮೂಲಕ ಸಂಗ್ರಹಿಸಿದ್ದಾರೆ. ಖರೀದಿದಾರರಿಂದ ನೇರವಾಗಿ 1800 ಕೋಟಿ ರೂ. ಸೇರಿ 3300 ಕೋಟಿ ವಂಚನೆ ಮಾಡಲಾಗಿದೆ ಎಂದು ಫಾರೂಲ್ ಜಾನ್ ನರೊನಾ ದೂರಿನಲ್ಲಿ ಆರೋಪಿಸಿದ್ದಾರೆ.
ಕಳೆದ 12 ವರ್ಷಗಳಿಂದ ಹಣ ವಾಪಸ್ ನೀಡದೇ ಕಿರುಕುಳ ನೀಡಲಾಗುತ್ತಿದೆ. ಹಣವನ್ನು ವಾಪಸ್ ನೀಡು ವಂತೆ ಕೆ-ರೆರಾ ಆದೇಶ ಹೊರಡಿಸಿದ್ದರೂ ಕಂಪನಿ ಅಧಿ ಕಾರಿಗಳು ವಾಪಸ್ ಮಾಡಿಲ್ಲ. ಕಂಪನಿಯ ನಿರ್ದೇಶ ಕರು ಹಾಗೂ ಅಧಿಕಾರಿಗಳ ಬ್ಯಾಂಕ್ ಖಾತೆ ನಿರ್ವಹ ಣೆಯೂ ಸಮರ್ಪಕವಾಗಿ ನಡೆದಿಲ್ಲ. ಶೇ.49ರಷ್ಟು ಮಾತ್ರ ಪ್ರಾಜೆಕ್ಟ್ ಮುಕ್ತಾಯಗೊಳಿಸಲಾ ಗಿದೆ. ಈ ಅಕ್ರಮದಲ್ಲಿ ಕೆಲ ಬ್ಯಾಂಕ್ ಅಧಿಕಾರಿಗಳ ಕೈವಾಡ ಕೂಡ ಇದೆ. ಹೀಗಾಗಿ ಎಲ್ಲಾ ಆರೋಪಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಫಾರೂಲ್ ಜಾನ್ ನರೊನಾ ದೂರಿನಲ್ಲಿ ಕೋರಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.