ಮನೆ ಅಪರಾಧ ಕಾಂಗ್ರೆಸ್​​ ಮುಖಂಡನಿಗೆ ಬ್ಲ್ಯಾಕ್​ಮೇಲ್​ ಮಾಡಿದ ವ್ಯಕ್ಯಿ ವಿರುದ್ಧ ಎಫ್​​ಐಆರ್​​..!

ಕಾಂಗ್ರೆಸ್​​ ಮುಖಂಡನಿಗೆ ಬ್ಲ್ಯಾಕ್​ಮೇಲ್​ ಮಾಡಿದ ವ್ಯಕ್ಯಿ ವಿರುದ್ಧ ಎಫ್​​ಐಆರ್​​..!

0

ಬೆಂಗಳೂರು : ಕಾಂಗ್ರೆಸ್ ಮುಖಂಡ ಸಿದ್ದೇಗೌಡಗೆ ಬ್ಲ್ಯಾಕ್​ಮೇಲ್ ಮಾಡಿದ ಸ್ಥಳೀಯ ರಾಜಕಾರಣಿ ಧನಂಜಯ್​​ ಎಂಬುವವರ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್​​ ದಾಖಲಾಗಿದೆ.

ನನ್ನ ತಂಟೆಗೆ ಬಂದರೆ ಚುನಾವಣೆ ಸಂದರ್ಭದಲ್ಲಿ ನಿನ್ನ ಮಕ್ಕಳ ವಿಡಿಯೋ ಬಿಡುಗಡೆ ಮಾಡುತ್ತೇನೆ ಎಂದು ಧಮ್ಕಿ ಹಾಕಿದ್ದರು. ಧನಂಜಯ್​​​ ಬೆದರಿಕೆಗೆ ಸಿದ್ದೇಗೌಡ ಪತ್ನಿ ಯಶೋಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ರು.

ಧನಂಜಯ್​​ ಆಗಾಗ ಯಶೋಧ ಅವರ ಮನೆಗೆ ಬರುತ್ತಿದ್ದ. ನಿನ್ನ ಗಂಡ ಬಿಬಿಎಂಪಿ ಚುನಾವಣೆಗೆ ನಿಂತರೆ ಸ್ಕ್ರೀನ್ ಶಾಟ್ ರಿಲೀಸ್ ಮಾಡುತ್ತೇನೆ. ನಿಮ್ಮ ಮಕ್ಕಳ ಕೆಲ ವಿಡಿಯೋಗಳು ನನ್ನ ಬಳಿ ಇದೆ. ನಿನ್ನ ಗಂಡ ಮಹಿಳೆಯರಿಗೆ ಮಾಡಿದ ಮೆಸೇಜ್ ಸ್ಕ್ರೀನ್ ಶಾಟ್ ಇದೆ. ಸಿದ್ದೇಗೌಡ ಮಾಡಿದ್ದಾರೆನ್ನಲಾದ ಮೆಸೇಜ್ ಸ್ಕ್ರೀನ್ ಶಾಟ್ ಅನ್ನು ಯಶೋಧ ಅವರಿಗೆ ಕಳುಹಿಸಿ ಬಳಿಕ ಡಿಲೀಟ್ ಮಾಡಿದ್ದ.

ಧನಂಜಯ್​​ ಬ್ಲ್ಯಾಕ್​ಮೇಲ್​​ ಮಾಡಿದ್ದಲ್ಲದೇ ಸಿದ್ದೇಗೌಡನ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ತನ್ನ ತಂಟೆಗೆ ಬಾರದಂತೆ ಅವಾಜ್ ಹಾಕಿದ್ದ. ತನ್ನ ಸಹವಾಸಕ್ಕೆ ಬಂದರೆ ನಿನ್ನ ಮಕ್ಕಳನ್ನ ಜೀವಂತವಾಗಿ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದ. ಈ ಹಿನ್ನಲೆ ಯಶೋಧ ಪೊಲೀಸರಿಗೆ ದೂರು ನೀಡಿದ್ದರು ಎಂದು ವರದಿಯಾಗಿದೆ.