ಮನೆ ಸುದ್ದಿ ಜಾಲ ಇಡಿ ದಾಳಿ ವೇಳೆ I-PAC ಕಚೇರಿಗೆ ನುಗ್ಗಿ ಫೈಲ್‌ ಹೊತ್ತೊಯ್ದ ಸಿಎಂ – ದೀದಿ ವಿರುದ್ಧ...

ಇಡಿ ದಾಳಿ ವೇಳೆ I-PAC ಕಚೇರಿಗೆ ನುಗ್ಗಿ ಫೈಲ್‌ ಹೊತ್ತೊಯ್ದ ಸಿಎಂ – ದೀದಿ ವಿರುದ್ಧ ಎಫ್‌ಐಆರ್‌ ದಾಖಲು

0

ಕೋಲ್ಕತ್ತಾ : ಜಾರಿ ನಿರ್ದೇಶನಾಲಯ ದಾಳಿ ನಡೆಸಿದ ವೇಳೆ ಕೋಲ್ಕತ್ತಾದ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ ಕಚೇರಿಗೆ ನುಗ್ಗಿ ಫೈಲ್‌ ತಂದ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ 2 ಎಫ್‌ಐಆರ್‌ಗಳು ದಾಖಲಾಗಿದೆ. ಕಳ್ಳತನ ಮತ್ತು ಕ್ರಿಮಿನಲ್ ಅತಿಕ್ರಮಣ ಆರೋಪದ ಮೇಲೆ ಒಂದು, ಸಾರ್ವಜನಿಕ ಸೇವಕರಿಗೆ ಅಡ್ಡಿಪಡಿಸಿ ದುರ್ವರ್ತನೆ ತೋರಿದ ಆರೋಪದ ಮೇಲೆ ಮತ್ತೊಂದು ಪ್ರಕರಣವನ್ನ ಪೊಲೀಸರು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದಾರೆ.

ಜಾರಿ ನಿರ್ದೇಶನಾಲಯವು ಕೋಲ್ಕತ್ತಾದ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ ಕಚೇರಿ ಮತ್ತು ಅದರ ಹಿರಿಯ ಅಧಿಕಾರಿ ಪ್ರತೀಕ್‌ ಜೈನ್‌ ನಿವಾಸ ಸೇರಿದಂತೆ ಹಲವು ಸ್ಥಳಗಳಲ್ಲಿ ದಾಳಿ ನಡೆಸಿತ್ತು. ನಗರದಾದ್ಯಂತ ಕನಿಷ್ಠ 5 ಸ್ಥಳಗಳಲ್ಲಿ ಇಡಿ ತಂಡ ದಾಳಿ ನಡೆಸಿತ್ತು. ವಿಷಯ ತಿಳಿಯುತ್ತಿದ್ದಂತೆ ಐ-ಪಿಎಸಿ ಕಚೇರಿಗೆ ಬಂದ ಸಿಎಂ ಮಮತಾ ಬ್ಯಾನರ್ಜಿ, ಪ್ರಮುಖ ಮಾಹಿತಿಯುಳ್ಳ ಫೈಲ್‌ವೊಂದನ್ನ ತೆಗೆದುಕೊಂಡು ಹೋಗಿದ್ದರು.

ಬಳಿಕ ಇಡಿ ದಾಳಿಯನ್ನುದ್ದೇಶಿಸಿ ಮಾತನಾಡಿದ್ದ ದೀದಿ, ಇದು ಉದ್ದೇಶಪೂರ್ವಕ ಮತ್ತು ರಾಜಕೀಯ ಪ್ರೇರಿತ ದಾಳಿ. ಜೊತೆಗೆ ಬಿಜೆಪಿಯು ಅನೈತಿಕ ವಿಧಾನಗಳ ಮೂಲಕ ಬಂಗಾಳವನ್ನ ವಶಪಡಿಸಿಕೊಳ್ಳಲು ಮಾಡುತ್ತಿರುವ ಪ್ರಯತ್ನದ ಭಾಗವಾಗಿದೆ.

ಪ್ರಜಾಸತ್ತಾತ್ಮಕವಾಗಿ ಹೋರಾಡಲು ಸಾಧ್ಯವಾಗದ ಬಿಜೆಪಿ ಈಗ ಇ.ಡಿ. ಯನ್ನ ಅಸ್ತ್ರವಾಗಿ ಬಳಸಿಕೊಂಡು, ಪಕ್ಷದ ದಾಖಲೆಗಳು, ಕಾರ್ಯತಂತ್ರಗಳು, ಅಭ್ಯರ್ಥಿಗೆ ಸಂಬಂಧಿಸಿದ ವಿವರಗಳು ಮತ್ತು ನಿರ್ಣಾಯಕ ದಾಖಲೆಗಳನ್ನ ಬಲವಂತವಾಗಿ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದರು.

ಇಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿರುವ ಅಮಿತ್‌ ಶಾ ಕಚೇರಿ ಮುಂಭಾಗ ಭಾರೀ ಹೈಡ್ರಾಮವೇ ನಡೆದಿದೆ. 8 ಮಂದಿ ಟಿಎಂಸಿ ಸಂಸದರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಚೇರಿ ಪ್ರತಿಭಟನೆ ನಡೆಸಲಾಗಿದೆ. ಈ ವೇಳೆ ಸಂಸದರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.