ಮನೆ ಅಪರಾಧ ಅಗ್ನಿ ಅವಘಡ: 9 ಮಂದಿ ಅಯ್ಯಪ್ಪ ಮಾಲಾಧಾರಿಗಳಿಗೆ ಗಂಭೀರ ಗಾಯ

ಅಗ್ನಿ ಅವಘಡ: 9 ಮಂದಿ ಅಯ್ಯಪ್ಪ ಮಾಲಾಧಾರಿಗಳಿಗೆ ಗಂಭೀರ ಗಾಯ

0

ಹುಬ್ಬಳ್ಳಿ: ಇಲ್ಲಿನ ಸಾಯಿನಗರದ ಅಚ್ಚವ್ವನ ಕಾಲೋನಿಯಲ್ಲಿ ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿ ಒಂಬತ್ತು ಮಂದಿ ವೃತಧಾರಿಗಳು ಗಂಭೀರ ಗಾಯಗೊಂಡ ಘಟನೆ ರವಿವಾರ (ಡಿ.22) ರಾತ್ರಿ ನಡೆದಿದೆ.

Join Our Whatsapp Group

ಅಯ್ಯಪ್ಪಸ್ವಾಮಿ ವ್ರತಧಾರಿ‌ಗಳು ರವಿವಾರ ಪೂಜೆ ಸಲ್ಲಿಸಿ ರಾತ್ರಿ ನಿದ್ರೆಗೆ ಜಾರಿದಾಗ ದೀಪವು ಸಿಲಿಂಡರ್‌ ಗೆ ತಾಗಿ ಬೆಂಕಿಯು ಕೋಣೆ ತುಂಬಾ ಆವರಿಸಿಕೊಂಡಿದೆ.

ಈ ಅವಘಡದಲ್ಲಿ ರಾಜು ಹರ್ಲಾಪುರ, ಬಾಲಕ ವಿನಾಯಕ ಬಾರಕೇರ, ಪ್ರಕಾಶ ಬಾರಕೇರ, ಶಂಕರ ರಾಯನಗುಂಡಿ, ಮಂಜು ತೋರದ, ಸಂಜಯ ಸವದತ್ತಿ, ಅಂಜು ಸ್ವಾಮಿ, ಪ್ರವೀಣ, ತೇಜಸ್ ರೆಡ್ಡಿ ಸುಟ್ಟು ಗಾಯಗೊಂಡಿದ್ದು ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾಲಕ ಹೊರತುಪಡಿಸಿ ಉಳಿದವರಿಗೆ ಹೆಚ್ಚಿನ ಸುಟ್ಟ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.