ಮನೆ ಅಪರಾಧ ವಸತಿ ಕಟ್ಟಡದಲ್ಲಿ ಬೆಂಕಿ: 7 ಮಂದಿ ಸಜೀವ ದಹನ

ವಸತಿ ಕಟ್ಟಡದಲ್ಲಿ ಬೆಂಕಿ: 7 ಮಂದಿ ಸಜೀವ ದಹನ

0

ಇಂದೋರ್(Indore): ಮಧ್ಯ ಪ್ರದೇಶ ರಾಜಧಾನಿ ಇಂದೋರ್ ನ ಸ್ವರ್ಣ ಭಾಗ್ ಕಾಲೊನಿಯ ಎರಡು ಮಹಡಿಯ ವಸತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಏಳು ಮಂದಿ ಸಜೀವ ದಹನಗೊಂಡಿರುವ ಘಟನೆ ಶನಿವಾರ ನಸುಕಿನಲ್ಲಿ ನಡೆದಿದೆ.

ಪ್ರಾಥಮಿಕ ತನಿಖೆಯ ಪ್ರಕಾರ ಮನೆಯೊಂದರ ಒಳಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡು ಹತ್ತಿ ಉರಿದಿರಬಹುದು ಎಂದು ಇಂದೋರ್ ಪೊಲೀಸ್ ಆಯುಕ್ತ ಹರಿನಾರಾಯಣ ಚಾರಿ ಮಿಶ್ರ ತಿಳಿಸಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ 9 ಮಂದಿಯನ್ನು ಇದುವರೆಗೆ ರಕ್ಷಿಸಿದ್ದು. ಬೆಂಕಿಯನ್ನು ನಂದಿಸಿ ಸಹಜ ಸ್ಥಿತಿಗೆ ತರಲು ಮೂರು ಗಂಟೆ ಹಿಡಿಯಿತು ಎಂದು ಅಗ್ನಿಶಾಮಕ ಸಿಬ್ಬಂದಿ ಹೇಳಿದ್ದಾರೆ. ಹೆಚ್ಚಿನ ತನಿಖೆ ಮುಂದುವರಿದಿದೆ.

ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದೋರ್ ಅಗ್ನಿ ದುರಂತದಲ್ಲಿ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.