ಉತ್ತರ ಪ್ರದೇಶ: ದುರ್ಗಾ ಪೂಜೆ ಪೆಂಡಾಲ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 3 ಮಂದಿ ಮೃತಪಟ್ಟು, 64 ಮಂದಿ ಗಾಯಗೊಂಡಿರುವ ಘಟನೆ ಔರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ನರ್ಥುವಾ ಹಳ್ಳಿಯ ನಡೆದಿದೆ.
ದುರ್ಗಾ ಪೂಜೆಯ ಪೆಂಡಾಲ್‌ನಲ್ಲಿ ಭಾನುವಾರ ರಾತ್ರಿ ನಡೆಯುತ್ತಿದ್ದ ಡಿಜಿಟಲ್ ಶೋ ನೋಡಲು 300–400 ಮಂದಿ ಆಗಮಿಸಿದ್ದರು. ಈ ಸಂದರ್ಭ ಹಾಲೊಜೆನ್ ಲೈಟ್ ಹೆಚ್ಚು ಬಿಸಿಯಾದ ಕಾರಣ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಅಗ್ನಿ ಆಕಸ್ಮಿಕದಲ್ಲಿ ಒಟ್ಟು 67 ಮಂದಿ ಗಾಯಗೊಂಡಿದ್ದು, ಅದರಲ್ಲಿ ಮೂವರು ಸಾವಿಗೀಡಾಗಿದ್ದಾರೆ. ಮತ್ತೆ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಗಾಯಗೊಂಡವರಲ್ಲಿ ಹೆಚ್ಚಿನ ಮಂದಿ ಮಹಿಳೆಯರು ಮತ್ತು ಮಕ್ಕಳು. ಅವಘಡ ಕುರಿತಂತೆ ತನಿಖೆ ಪೊಲೀಸರ ವಿಶೇಷ ತಂಡ ರಚಿಸಲಾಗಿದೆ.
ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ.