ಹುಬ್ಬಳ್ಳಿ: ಹಾವೇರಿ ಜಿಲ್ಲೆಯ ರೈತನ ಜಮೀನನ್ನು ನೋಟಿಸ್ ಕೊಡದೆ ವಕ್ಫ್ ಎಂದು ಮಾಡಿಕೊಂಡಿದ್ದಾರೆ. ಇದೇ ವಿಚಾರ ಮಾತಾಡಿದ್ದಕ್ಕೆ ನಮ್ಮ ಸಂಸದರ ಮೇಲೆ ಎಫ್‌ಐಆರ್ ಮಾಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಆರೋಪಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾವೇರಿಯಲ್ಲಿ ಎಫ್‌ಐಆರ್ ಆಗಬೇಕಿರುವುದು ನೋಟಿಸ್ ಕೊಡದೆ ವಕ್ಫ್ ಆಗಿಪರಿವರ್ತನೆ ಮಾಡಿದವರ ಮೇಲೆ. ಇವರಿಗೆ ಸಾಮಾನ್ಯ ಜ್ಞಾನ ಇಲ್ವಾ? ಈ ಸರ್ಕಾರ ನ್ಯಾಯ ನಿರ್ಲಕ್ಷ್ಯ ಮಾಡಿದೆ ಎಂದರು.
ಮಠ, ಮಂದಿರ ಜಮೀನು, ಖಾಲಿ ಜಾಗವನ್ನು ವಕ್ಫ್‌ಗೆ ವಶಪಡಿಸಿಕೊಳ್ಳಲು ಅಧಿಕಾರಿಗಳಿಗೆ ಅಘೋಷಿತ ಆದೇಶವಾಗಿದೆ. ವಕ್ಫ್ ಹೆಸರಲ್ಲಿ ಗೋಮಾಳ ಜಾಗ ಸಹ ಬಿಟ್ಟಿಲ್ಲ. ಸರ್ಕಾರ ಕೂಡಲೇ ಅಧಿಕಾರಿಗಳನ್ನು ವಜಾ ಮಾಡಬೇಕು. ರೈತರ ಜಮೀನು ವಶಪಡಿಸಿಕೊಳ್ಳಲು ಆದೇಶ ಮಾಡಿರುವ ಅಧಿಕಾರಿಗಳ ವಜಾ ಮಾಡಬೇಕು. ಅಲ್ಲದೆ ಸಚಿವ ಜಮೀರ ಅಹಮ್ಮದ್‌ರನ್ನು ವಜಾ ಮಾಡಬೇಕು. ಇದು ಬಿಟ್ಟು ನಮ್ಮ ಸಂಸದರ ಮೇಲೆ ಎಫ್‌ಐಆರ್ ಮಾಡಿದೆ ಎಂದರು.