ಮನೆ ಸ್ಥಳೀಯ ಬ್ಯೂಟಿ ಪಾರ್ಲರ್‌ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ದುರಂತ

ಬ್ಯೂಟಿ ಪಾರ್ಲರ್‌ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ದುರಂತ

0

Join Our Whatsapp Group

 

ಶ್ರೀರಂಗಪಟ್ಟಣ: ಪಟ್ಟಣದ ಮುಖ್ಯ ಬೀದಿಯಲ್ಲಿ ಸಾರ್ಟ್ ಸರ್ಕ್ಯೂಟ್ ನಿಂದ ಬ್ಯೂಟಿ ಪಾರ್ಲರ್‌

ಅಂಗಡಿಯಲ್ಲಿ ಅಗ್ನಿ ದುರಂತವಾಗಿ ಬೆಲೆ ಬಾಳುವ ೧೦ಲಕ್ಷ ಕ್ಕು ಹೆಚ್ಚು ಪ್ರಮಾಣದಲ್ಲಿ ಹಾನಿಯಾಗಿರುವ ಪ್ರಕರಣ ನಡೆದಿದೆ.

ಪಟ್ಟಣದ ಮಾತ್ರಶ್ರೀ ಬ್ಯೂಟಿ ಪಾರ್ಲರ್ ನಲ್ಲಿ ಬಳಸಲಾಗುತ್ತಿದ್ದ ಹಲವು ಸ್ಟಿಚ್ಚಿಂಗ್ ವಸ್ತುಗಳು  ಭಸ್ಮವಾಗಿದ್ದು, ¸ಮಧ್ಯರಾತ್ರಿಯ ೨ರ ಸಮಯದಲ್ಲಿ ನಡೆದಿದ್ದು, ಇದರಿಂದ ಅಪಾರ ನಷ್ಟವಾಗಿದ್ದು ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾರ್ಲರ್ ನ ಮಾಲೀಕರಾದ ಶಾರದ ಎಂದಿನಂತೆ ಸಂಜೆಯ ನಂತರ ಬಾಗಿಲು ಹಾಕಿಕೊಂಡು ಮನೆಗೆ ತೆರಳಿದ ನಂತರ ಮಧ್ಯರಾತ್ರಿಯಲ್ಲಿ ಬ್ಯೂಟಿ ಪಾರ್ಲರ್‌ಅಂಗಡಿಯಲ್ಲಿ ಸಾರ್ಟ್ ಸೆಕ್ಯೂಟ್‌ನಿಂದ ಅಗ್ನಿ ದುರಂತ ಕಾಣಿಸಿಕೊಂಡಿದೆ. ಬೆಂಕಿಯ ಜ್ಞೇಲೆಯಿಂದ ಪಾರ್ಲರ್‌ನಲ್ಲಿರುವ ವಸ್ತುಗಳು ಸಿಡಿದು ಶಬ್ದ ಹೊರ ಬಂದಿದೆ. ಅಕ್ಕ ಪಕ್ಕದವರು ಶಬ್ದದಿಂದ ಅಂಗಡಿಯಲ್ಲಿ ಕಳ್ಳರಿರಬಹುದು ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಅಷ್ಟರಲ್ಲಿ ಕಿಟಕಿ ಮೂಲಕ ಬೆಂಕಿಯ ಹೊಗೆ ಬರುತ್ತಿದ್ದುದ್ದನ್ನು ಗಮನಿಸಿದ ಪೊಲೀಸರು ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ನಂತರ ಕಿಟಕಿ ಹೊಡೆದು ನೀರು ಬೆಂಕಿ ನಂದಿಸಿದ್ದಾರೆ.ನಂತರ ಮಾಲೀಕರಿಗೆ ಈ ವಿಷಯ ತಿಳಿಸಿದ್ದು ಬೆಲೆ ಬಾಳುವ ಹಲವು ವಸ್ತುಗಳು ಬೆಂಕಿಯಲ್ಲಿ ಭಸ್ಮವಾಗಿದ್ದು ಕಂಡು ಬಂದಿದೆ,ಸಕಾಲದಲ್ಲಿ ಪೋಲಿಸ್ ಮತ್ತು ಆಗ್ನಿಶಾಮಕದಳದವರು ಕಾರ್ಯ ನಿರ್ವಹಿಸುವುದರಿಂದ ಅಕ್ಕಪಕ್ಕದ ಬಿಲ್ಡಿಂಗ್ ಮನೆಗಳಿಗೆ ಸ್ವಲ್ಪವೂ ಹಾನಿಯಾಗದೆ ಅಪಾಯದಿಂದ  ಪಾರಾಗಿದ್ದಾರೆ. ಬ್ಯೂಟಿ ಪಾರ್ಲರ್ ಒಳಭಾಗದ  ಕ್ಯಾಶ್ ಟೇಬಲ್ ಮತ್ತು ಆಭರಣ ಮತ್ತು ಬ್ಯೂಟಿ ಪಾರ್ಲರಿಗೆ ಬೇಕಾದ ವಸ್ತುಗಳು ಮತ್ತು ಹೊಸ ಜುಕಿ ಮಿಷನ್ ಮತ್ತು ೨ ಟೈಲರ್ ಮಿಷನ್ ಇವುಗಳು ಸುಟ್ಟು

ಕರುಕಲಾಗಿರುವುದನ್ನು ಕಂಡುಬರುತ್ತದೆ. ಅಲ್ಲದೆ ೭೨,೦೦೦/- ವಿವಿಧ ಬಗೆಯ ನೋಟುಗಳು ಸಹ ಸುಟ್ಟುಹೋಗಿರುತ್ತದೆ. ಒಳಗ ಟ್ರೆಸಿಂಗ್ ರೂಂ ಎಲ್ ಜೇರ್‌ಗಳು ಸಂಪೂರ್ಣ ಬೊಕಿ ಆಹುತಿಯಾಗಿರುತ್ತದೆ. ಜೊತೆಗೆ ಗ್ರಾಹಕರು ನೀಡಿದಂತಹ ಬೆಲೆ ಬಾಳುವ ೨ ಸಿಲ್ಕ್ ಸೀರೆಗಳು ಹಾಗೂ ಇತರೆ ಸೀರೆಗಳು ಬ್ರೌಸ್‌ಗಳು ಸಂಪೂರ್ಣ ಸುಟ್ಟು ಹೋಗಿರುತ್ತದೆ. ಆದರೆ ಪ್ರಾಥಮಿಕವಾಗಿ ಸಾರ್ಟ್ ಸೆಕ್ಯೂಟ್‌ನಿಂದ ಆಗಿದೆ ಎಂದು ಅಂದಾಜಿಸಲಾಗಿದೆ. ಈ ಅಗ್ನಿ ದುರಂತದ ಒಟ್ಟಾರೆ ಸುಮಾರು ೧೦ ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಗ್ನಿ ದುಂತಕ್ಕೆ ನಿಜವಾದ ಕಾರಣ ತನಿಖೆಯಿಂದ ತಿಳಿಯಬೇಕಾಗಿದೆ.