ಒಡಿಶಾ: ಪುರಿಯಲ್ಲಿ ಜಗನ್ನಾಥ ಉತ್ಸವದ ಸಂದರ್ಭದಲ್ಲಿ ಪಟಾಕಿ ಸ್ಫೋಟಗೊಂಡು 20ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಚಂದನ್ ಯಾತ್ರೆ ಆಚರಣೆಯ ಅಂಗವಾಗಿ ನರೇಂದ್ರ ಕೊಳದಲ್ಲಿ ನಡೆದ ಟ್ರಿನಿಟಿಯ ಚಾಪಾ ಖೇಲಾ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.
ಮೂಲಗಳ ಪ್ರಕಾರ ಕೆರೆಯ ದೇವಿ ಘಾಟ್ ಬದಿಯಲ್ಲಿ ಪಟಾಕಿ ಸಿಡಿಸಲು ಅವಕಾಶವಿತ್ತು. ದುರದೃಷ್ಟವಶಾತ್, ಸಿಡಿದ ಪಟಾಕಿಗಳ ಕಿಡಿಗಳು ಪವಿತ್ರ ಕೊಳದಲ್ಲಿ ಜಲಕ್ರೀಡೆಯನ್ನು ವೀಕ್ಷಿಸಲು ನೆರೆದಿದ್ದ ಭಕ್ತರ ಮೇಲೆ ಬಿದ್ದವು.
ಗಾಯಾಳುಗಳನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಶಸ್ತ್ರಚಿಕಿತ್ಸೆಯ ವಾರ್ಡ್ ಗೆ ಸ್ಥಳಾಂತರಿಸುವ ಮೊದಲು ರೋಗಿಗಳನ್ನು ಹೊರಾಂಗಣ ವಿಭಾಗದಲ್ಲಿ ಚಿಕಿತ್ಸೆ ನೀಡಲಾಯಿತು. 18ಕ್ಕೂ ಹೆಚ್ಚು ಗಂಭೀರ ರೋಗಿಗಳನ್ನು ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.
ಕೆಲವು ರೋಗಿಗಳನ್ನು ಹೆಚ್ಚಿನ ವಿಶೇಷ ಆರೈಕೆಗಾಗಿ ಕಟಕ್ ಮತ್ತು ಭುವನೇಶ್ವರದ ಆಸ್ಪತ್ರೆಗಳಿಗೆ ವರ್ಗಾಯಿಸಬೇಕಾಯಿತು. ರೋಗಿಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ರೋಗಿಗಳನ್ನು ಸ್ಥಳಾಂತರಿಸಲಾಗುತ್ತಿದೆ ಎಂದರು.
ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಅವರ ಚಿಕಿತ್ಸೆಯ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಗಾಯಾಳುಗಳ ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ಭರಿಸಲಾಗುವುದು. ಎಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಾ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಭರಿಸಲಾಗುವುದು ಎಂದು ಸಿಎಂ ನವೀನ್ ಪಟ್ನಾಯಕ್ ಎಕ್ಸ್ ನಲ್ಲಿ ಬರೆದಿದ್ದಾರೆ.