ಮನೆ ರಾಷ್ಟ್ರೀಯ ಪಟಾಕಿ, ಗ್ಯಾಸ್ ಸಿಲಿಂಡರ್ ಸ್ಫೋಟ: ನಾಲ್ವರ ಸಾವು, 7ಜನರಿಗೆ ಗಾಯ

ಪಟಾಕಿ, ಗ್ಯಾಸ್ ಸಿಲಿಂಡರ್ ಸ್ಫೋಟ: ನಾಲ್ವರ ಸಾವು, 7ಜನರಿಗೆ ಗಾಯ

0

ಚೆನ್ನೈ(Chennai):  ಇಂದು ಮುಂಜಾನೆ ಮೋಹನೂರಿನ ನಿವಾಸದಲ್ಲಿ ಪಟಾಕಿ ಮತ್ತು ಗ್ಯಾಸ್ ಸಿಲಿಂಡರ್ ಸ್ಫೋಟದಿಂದಾಗಿ ನಾಲ್ವರು ಸಾವಿಗೀಡಾಗಿದ್ದು, ಏಳು ಜನರು ಗಾಯಗೊಂಡಿದ್ದಾರೆ.  ಸ್ಫೋಟದಿಂದ ಸಮೀಪದ 16 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ತಿಲ್ಲೈಕ್ ಕುಮಾರ್(73),  ಅವರ ತಾಯಿ ಸೆಲ್ವಿ (57) ಮತ್ತು ಪತ್ನಿ ಪ್ರಿಯಾ (27) ಸಾವಿಗೀಡಾಗಿದ್ದಾರೆ. ಕುಮಾರ್ ಅವರ 4 ವರ್ಷದ ಮಗಳು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಅವರ ನೆರೆಹೊರೆಯವರಾದ 70 ವರ್ಷದ ಮಹಿಳೆ ಕೂಡ ಸ್ಫೋಟದ ಪ್ರಭಾವದಿಂದ ಸಾವಿಗೀಡಾಗಿದ್ದಾರೆ.

ಸ್ಫೋಟದಿಂದ ಸುಟ್ಟಗಾಯ ಅಥವಾ ಗಾಯಗಳಾಗಿರುವ ನಾಲ್ವರನ್ನು ಚಿಕಿತ್ಸೆಗಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೋಹನೂರಿನ ಬಳಿ ಪಟಾಕಿ ಅಂಗಡಿ ನಡೆಸುತ್ತಿರುವ ತಿಲ್ಲೈಕ್ ಕುಮಾರ್ ಅವರು ಹೊಸ ವರ್ಷಾಚರಣೆ ಅಂಗವಾಗಿ ಸೂಕ್ತ ಸುರಕ್ಷತೆಯಿಲ್ಲದೆ  ತಮ್ಮ ನಿವಾಸದಲ್ಲಿ ಪಟಾಕಿಗಳನ್ನು ಮಾರಾಟಕ್ಕಾಗಿ ಸಂಗ್ರಹಿಸಿದ್ದರು.

ಬೆಳಗಿನ ಜಾವ 3 ಗಂಟೆ ಸುಮಾರಿಗೆ, ತಿಲ್ಲೈಕ್ ಮತ್ತು ಅವರ ಕುಟುಂಬದವರು ನಿದ್ರಿಸುತ್ತಿದ್ದಾಗ ಪಟಾಕಿಗಳಿಗೆ ಬೆಂಕಿ ಹೊತ್ತಿಕೊಂಡಿದೆ ಮತ್ತು ತಕ್ಷಣವೇ ಬೆಂಕಿ ಎಲ್ಲೆಡೆ ಆವರಿಸಿದೆ. ಇದು ತರುವಾಯ ಅಡುಗೆ ಅನಿಲ ಸಿಲಿಂಡರ್ ಸೋರಿಕೆಗೆ ಕಾರಣವಾಯಿತು ಮತ್ತು ದೊಡ್ಡ ಸ್ಫೋಟ ಸಂಭವಿಸಿದೆ.

ವಿದ್ಯುತ್ ಶಾರ್ಟ್-ಸರ್ಕ್ಯೂಟ್ ಅಥವಾ ನಂದಿಸದ ಮೇಣದಬತ್ತಿಯು ಸ್ಫೋಟಕ್ಕೆ ಕಾರಣವಾಗಬಹುದೇ ಎಂದು ತನಿಖೆ ನಡೆಸುತ್ತಿದೆ ಎಂದು ಹೇಳಿದರು.