ಮನೆ ರಾಷ್ಟ್ರೀಯ ಪಿಒಕೆಯಲ್ಲಿ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ: ಮೂವರ ಸಾವು, 6 ಮಂದಿಗೆ ಗಾಯ

ಪಿಒಕೆಯಲ್ಲಿ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ: ಮೂವರ ಸಾವು, 6 ಮಂದಿಗೆ ಗಾಯ

0
ಸಾಂದರ್ಭಿಕ ಚಿತ್ರ

ಇಸ್ಲಾಮಾಬಾದ್: ಬೆಲೆ ಏರಿಕೆ, ದುಬಾರಿ ವಿದ್ಯುತ್‌ ಬಿಲ್‌ ಹಾಗೂ ತೆರಿಗೆ ವಿರೋಧಿಸಿ ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ನಡೆಯುತ್ತಿರುವ ಮುಷ್ಕರ ಮುಂದುವರಿದಿದೆ.

Join Our Whatsapp Group

ರಾಜಧಾನಿ ಮುಜಫರಾಬಾದ್‌ ನಲ್ಲಿ ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ ಮೂವರು ಮೃತಪಟ್ಟು, 6 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಹಣದುಬ್ಬರ, ಬೆಲೆ ಏರಿಕೆ ವಿರೋಧಿಸಿ ಶುಕ್ರವಾರದಿಂದ ಪೂರ್ಣ ಬಂದ್ ಆಚರಿಸಲಾಗುತ್ತಿದ್ದು, ಜನಜೀವನ ಬಹುತೇಕ ಸ್ಥಗಿತವಾಗಿದೆ.

ಪರಿಸ್ಥಿತಿ ನಿಯಂತ್ರಿಸುವ ಕ್ರಮವಾಗಿ ಹೋರಾಟಗಾರರು ಹಾಗೂ ಸರ್ಕಾರದ ಪ್ರತಿನಿಧಿಗಳ ನಡುವೆ ಮಾತುಕತೆ ನಡೆದಿದೆ. ಇದರ ಹಿಂದೆಯೇ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್ ಅವರು, ಈ ವಲಯದಲ್ಲಿ ಪರಿಹಾರ ಕ್ರಮಗಳಿಗಾಗಿ ಹಣ ಬಿಡುಗಡೆ ಮಾಡಿದ್ದಾರೆ.

ಪರಿಸ್ಥಿತಿಯನ್ನು ನಿಯಂತ್ರಿಸುವ ಕ್ರಮವಾಗಿ ಪಾಕಿಸ್ತಾನ ಸರ್ಕಾರ ಒಟ್ಟು ₹2300 ಕೋಟಿ ಮೊತ್ತವನ್ನು ಈ ವಲಯಕ್ಕಾಗಿ ಹಂಚಿಕೆ ಮಾಡಿದೆ.

ಜಮ್ಮು ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ (ಜೆಎಎಸಿ) ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕಡಿಮೆ ವೆಚ್ಚದಲ್ಲಿ ವಿದ್ಯುತ್ ಪೂರೈಸಬೇಕು ಹಾಗೂ ರಿಯಾಯಿತಿ ದರದಲ್ಲಿ ಗೋಧಿ ಹಿಟ್ಟು ಪೂರೈಸಬೇಕು ಎಂಬುದು ಪ್ರತಿಭಟನಕಾರರ ಪ್ರಮುಖ ಬೇಡಿಕೆಯಾಗಿದೆ.

ಹೋರಾಟಗಾರರು ಮತ್ತು ಪೊಲೀಸರ ನಡುವೆ ಇಲ್ಲಿ ಶನಿವಾರ ಘರ್ಷಣೆ ನಡೆದಿದ್ದು, ಒಬ್ಬ ಪೊಲೀಸ್‌ ಅಧಿಕಾರಿ ಮೃತಪಟ್ಟಿದ್ದರು.

ಹಿಂದಿನ ಲೇಖನಲೋಕಸಭಾ ಚುನಾವಣೆ: ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ
ಮುಂದಿನ ಲೇಖನ5 ರೂ. ಕುರ್ಕುರೆ ತಂದಿಲ್ಲ ಎಂದು ಗಂಡನಿಗೆ ಡಿವೋರ್ಸ್​​​ ನೀಡಲು ಮುಂದಾದ ಪತ್ನಿ