ಮನೆ ರಾಜ್ಯ ದೇಶದಲ್ಲೇ ಮೊದಲ ಪ್ರಯತ್ನ: ತೀವ್ರ ನಿಗಾ ಘಟಕಲ್ಲಿರುವ 16 ರೋಗಿಗಳಿಗೆ ಮತದಾನದ ಅವಕಾಶ ಕಲ್ಪಿಸಿದ ಮಣಿಪಾಲ್...

ದೇಶದಲ್ಲೇ ಮೊದಲ ಪ್ರಯತ್ನ: ತೀವ್ರ ನಿಗಾ ಘಟಕಲ್ಲಿರುವ 16 ರೋಗಿಗಳಿಗೆ ಮತದಾನದ ಅವಕಾಶ ಕಲ್ಪಿಸಿದ ಮಣಿಪಾಲ್ ಆಸ್ಪತ್ರೆ

0

ಬೆಂಗಳೂರು: ಮಣಿಪಾಲ ಆಸ್ಪತ್ರೆಯಲ್ಲಿನ ಸುಮಾರು 45 ಒಳರೋಗಿಗಳು ಮತದಾನದಲ್ಲಿ ಭಾಗವಹಿ ತಾವುಗಳು ಮತ ಚಲಾಯಿಸುವುದರ ಬಗ್ಗೆ ಆಸ್ಪತ್ರೆಯ ವೈದ್ಯರಲ್ಲಿ ತಮ್ಮ ಆಸಕ್ತಿ ವ್ಯಕ್ತಪಡಿಸಿದ್ದರು. ಆದರೆ, ಅವರು ತುರ್ತು ಘಟಕದಲ್ಲಿದ್ದು ಗಂಭೀರ ಪರಿಸ್ಥಿತಿಯಲ್ಲಿದ್ದರಿಂದ ಅವರಲ್ಲಿ 16 ಮಂದಿಯನ್ನು ಮಾತ್ರ ಆಯ್ಕೆ ಮಾಡಿ, ಬಿಬಿಎಂಪಿ ಆಯುಕ್ತರು, ರಾಜ್ಯ ಚುನಾವಣಾ ಆಯುಕ್ತರ ಸಹಕಾರದ ಮೇರೆಗೆ ಅವರನ್ನು ಅವರವರ ಮತಗಟ್ಟೆಗಳಿಗೆ ಕಳಿಸಿ ಮತದಾನ ಮಾಡಿಸಲಾಯಿತು. ಅವರಿಗಾಗಿ ಮತಗಟ್ಟೆಗಳಲ್ಲಿ ಪ್ರತ್ಯೇಕ ವೋಟಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಆಸ್ಪತ್ರೆಯೊಂದು ತಾನಾಗಿಯೇ ರೋಗಿಗಳಿಗೆ ಮತದಾನದ ಅವಕಾಶ ಕಲ್ಪಿಸಿದ್ದು ದೇಶದಲ್ಲೇ ಇದು ಮೊದಲ ಬಾರಿ.

ಹೈಲೈಟ್ಸ್‌:

ಮಣಿಪಾಲ ಆಸ್ಪತ್ರೆಯ 16 ರೋಗಿಗಳಿಗೆ ಮತದಾನದ ಅವಕಾಶ.

ವಿಶೇಷ ಸೌಲಭ್ಯಗಳಡಿ ಅವರನ್ನು ಮತಗಟ್ಟೆಗೆ ಕೊಂಡೊಯ್ದು ಮತದಾನ ಮಾಡಿಸಿದ ಆಸ್ಪತ್ರೆ ಸಿಬ್ಬಂದಿ.

16 ರೋಗಿಗಳೆಲ್ಲರೂ ಡಯಾಲಿಸಿಸ್ ಸೇರಿದಂತೆ ಹಲವಾರು ಗಂಭೀರ ಚಿಕಿತ್ಸೆಯಲ್ಲಿದ್ದವರು.

ಪಟ್ಟಿಗೆ ಅಧಿಕಾರಿಗಳ ಒಪ್ಪಿಗೆ

ಮತದಾನಕ್ಕೆ ಕಳುಹಿಸಲು ಆಯ್ಕೆಯಾಗಿರುವ ಪಟ್ಟಿಯೊಂದನ್ನು ತಯಾರಿಸಿ, ಆ ಪಟ್ಟಿಯನ್ನು ಮೊದಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರಾದ ತುಷಾರ್ ರಂಗನಾಥ್ ಅವರಿಗೆ ಕಳುಹಿಸಲಾಯಿತು. ಅವರು ಆಸ್ಪತ್ರೆಯ ಈ ವಿನೂತನ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಬಿಬಿಎಂಪಿಯಿಂದ ಆಗುವ ಸಹಾಯ ನೀಡುವುದಾಗಿ ತಿಳಿಸಿದರು

ಆಸ್ಪತ್ರೆಯಲ್ಲಿ, ಡಯಾಲಿಸಿಸ್, ಕಿಮೋ ಥೆರಪಿಯಂಥ ಹಲವಾರು ಚಿಕಿತ್ಸೆಗಳನ್ನು ಪಡೆಯುತ್ತಿದ್ದ ಸುಮಾರು 45 ರೋಗಿಗಳು ಮತದಾನಕ್ಕೆ ತಮಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಆಸ್ಪತ್ರೆಯ ವೈದ್ಯರಲ್ಲಿ ಸಹಾಯ ಕೇಳಿದ್ದರು. ಅವರ ಸದುದ್ದೇಶವನ್ನು ಅರ್ಥ ಮಾಡಿಕೊಂಡ ವೈದ್ಯರು ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿಯು, ಮೊದಲಿಗೆ ರೋಗಿಗಳ ಸ್ಥಿತಿಗತಿಗಳನ್ನು ಆಧರಿಸಿ ಅವರನ್ನು ಮತಗಟ್ಟೆಗಳವರೆಗೆ ಸಾಗಿಸಬಹುದೇ ಎಂದು ನಿರ್ಧರಿಸಲು ತೀರ್ಮಾನಿಸಲಾಗಿತ್ತು. ಆ ನಿಟ್ಟಿನಲ್ಲಿ ಪರೀಕ್ಷಿಸಿದಾಗ, ಅವರಲ್ಲಿ 16 ರೋಗಿಗಳನ್ನು ಮತದಾನಕ್ಕೆ ಕೊಂಡೊಯ್ಯಬಹುದಾಗಿತ್ತು. ಹಾಗಾಗಿ, ಅವರನ್ನೇ ಮತದಾನಕ್ಕೆ ಕೊಂಡೊಯ್ಯಲು ತೀರ್ಮಾನಿಸಲಾಯಿತು.

ಆನಂತರ, ಆ ಪಟ್ಟಿಯನ್ನು ಕರ್ನಾಟಕ ಚುನಾವಣಾ ಆಯುಕ್ತರಾದ ಮನೋಜ್ ಕುಮಾರ್ ಮೀನಾ ಅವರಿಗೆ ಕಳುಹಿಸಲಾಗಿತ್ತು. ಅವರೂ ಸಹ ಈ ಪ್ರಯತ್ನಕ್ಕೆ ಸಹಕಾರ ನೀಡುವುದಾಗಿ ಹೇಳಿದರು. ಅದರಿಂದ, ಕಿಮೋಥೆರಪಿ, ಟ್ರಾನ್ಸ್ ಪ್ಲಾಂಟ್ ಥೆರಪಿಯಂಥ ಗಂಭೀರ ಚಿಕಿತ್ಸೆಗಳಿಗೆ ಒಳಗಾಗಿದ್ದವರನ್ನು ಅವರವರ ಮತಗಟ್ಟೆಗಳಿಗೆ ಕರೆದೊಯ್ದು ಅವರಿಂದ ಮತದಾನ ಮಾಡಿಸಲಾಯಿತು

ಅಸಲಿಗೆ, ಆ 16 ರೋಗಿಗಳನ್ನು ಮತಗಟ್ಟೆಗಳಿಗೆ ಕರೆದೊಯ್ದು ಪುನಃ ಅವರನ್ನು ಆಸ್ಪತ್ರೆಗೆ ಕರೆತರುವುದು ಅಷ್ಟು ಸುಲಭವಾದ ಕೆಲಸವಾಗಿರಲಿಲ್ಲ. ಅವರಲ್ಲಿ ಕೆಲವರು ಕೀಮೋಥೆರಪಿಗೆ ಒಳಗಾಗಿದ್ದವರಾಗಿದ್ದರು. ಇನ್ನೂ ಕೆಲವರು ಶ್ವಾಸಕೋಶದ ಕ್ಯಾನ್ಸರ್ ನಿಂದ ಗುಣಮುಖರಾಗಿರುವಂಥವರಾಗಿದ್ದರು. ಇನ್ನೂ ಕೆಲವರು, ಕಿಡ್ನಿ ಸೋಂಕಿನಿಂದ ಹಾಗೂ ಅಂಗಾಗ ಕಸಿ/ ಅಂಗಾಂಗ ದಾನಗಳನ್ನು ಪಡೆದು ಆ ಮಾರಣಾಂತಿಕ ಸ್ಥಿತಿಯಿಂದ ಚೇತರಿಸಿಕೊಳ್ಳುವವರಾಗಿದ್ದರು. ತೀವ್ರ ನಿಗಾ ಘಟಕದಲ್ಲಿರ ಬೇಕಾಗಿದ್ದ ಇಂಥವರನ್ನು ಮತಗಟ್ಟೆಗೆ ಕೊಂಡೊಯ್ಯುವುದು ಹಾಗೂ ಅವರನ್ನು ಪುನಃ ಆಸ್ಪತ್ರಗೆ ಕರೆದು ತರುವುದು ಅಷ್ಟು ಸುಲಭವಾಗಿರಲಿಲ್ಲ. ಸ್ವಲ್ಪ ಏರುಪೇರಾದರೂ ಅವರ ಜೀವಕ್ಕೇ ಅಪಾಯವಿತ್ತು. ಈ ರೋಗಿಗಳಿಗೆ ವಿಶೇಷವಾಗಿ ಪ್ರತ್ಯೇಕವಾಗಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಹಾಗೂ ಚುನಾವಣಾಧಿಕಾರಿಗಳ ಸಹಾಯ, ಮತಗಟ್ಟೆಗಳಲ್ಲಿನ ಸಿಬ್ಬಂದಿಯ ಸಹಾಯದಿಂದ ಈ ಕೆಲಸ ಸುಲಭ ಸಾಧ್ಯವಾಯಿತು ಅದರಂತೆ, ಮತದಾನ ಮಾಡಿಸಿ ಪುನಃ ಅವರನ್ನು ಆಸ್ಪತ್ರೆಗೆ ಕಳುಹಿಸಲಾಯಿತು.

ಎಲ್ಲೆಲ್ಲಿ ಮತದಾನ?

ಮತದಾನದ ಈ ವಿಶೇಷ ಸೌಲಭ್ಯವನ್ನು ಪಡೆದ 16 ರೋಗಿಗಳನ್ನು ಮತದಾನ ಕೇಂದ್ರಗಳಿರುವ ಆನೇಕಲ್, ರಾಜಾಜಿ ನಗರ, ಸನ್ ಸಿಟಿ, ಹರಳೂರು, ಮಲ್ಲೇಶ್ ಪಾಳ್ಯ, ಮಲ್ಲೇಶ್ವರಂ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್ ಹಾಗೂ ಸಿವಿ ರಾಮನ್ ನಗರಕ್ಕೆ ಪ್ರತ್ಯೇಕ ಆ್ಯಂಬುಲೆನ್ಸ್ ಗಳಲ್ಲಿ ಕೊಂಡೊಯ್ಯಲಾಯಿತು. ಮೊದಲೇ ರೋಗಿಗಳ ಆಗಮನದ ಬಗ್ಗೆ ಮಾಹಿತಿ ಇದ್ದದ್ದರಿಂದ, ಮತಗಟ್ಟೆಗಳಲ್ಲಿನ ಸಿಬ್ಬಂದಿಯು ರೋಗಿಗಳನ್ನು ಮತಗಟ್ಟೆಗಳೊಳಗೆ ಕೊಂಡೊಯ್ಯಲು ಸಹಾಯ ಮಾಡಿದರು.

ಆಸ್ಪತ್ರೆ ವತಿಯಿಂದ ಧನ್ಯವಾದ

ರೋಗಿಗಳ ಮತದಾನಕ್ಕೆ ಸಹಕರಿಸಿ ಎಲ್ಲಾ ಚುನಾವಣಾ ಸಿಬ್ಬಂದಿಗೆ ಮಣಿಪಾಲ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿಯಾಗಿರುವ ಕಾರ್ತಿಕ್ ರಾಜಗೋಪಾಲ ಅವರು ಧನ್ಯವಾದ ಅರ್ಪಿಸಿದ್ದಾರೆ. ಮತದಾನಕ್ಕಾಗಿ ಆಸ್ಪತ್ರೆಯಿಂದ ಕರೆದೊಯ್ದಿದ್ದವರಲ್ಲಿ ಇಬ್ಬರ ಸ್ಥಿತಿ ತುಂಬಾ ಸೂಕ್ಷ್ಮವಾಗಿತ್ತು. ಅವರನ್ನು ವಿಶೇಷವಾಗಿ ಜಾಗ್ರತೆ ವಹಿಸಿ ಮತದಾನ ಮಾಡಿಸಿ, ಪುನಃ ಆಸ್ಪತ್ರೆಗೆ ಕರೆತರಲಾಯಿತು ಎಂದು ಅವರು ಹೇಳಿದರು.