ಮನೆ ಮನರಂಜನೆ “ಅವನಿರಬೇಕಿತ್ತು’ ಚಿತ್ರದ ಫ‌ಸ್ಟ್‌ಲುಕ್‌ ಪೋಸ್ಟರ್‌ ರಿಲೀಸ್‌

“ಅವನಿರಬೇಕಿತ್ತು’ ಚಿತ್ರದ ಫ‌ಸ್ಟ್‌ಲುಕ್‌ ಪೋಸ್ಟರ್‌ ರಿಲೀಸ್‌

0

ಟೈಟಲ್‌ ಮೂಲಕ ಗಮನ ಸೆಳೆಯಬೇಕೆಂಬ ಕಾರಣಕ್ಕೆ ಕನ್ನಡದಲ್ಲಿ ಈಗ ವಿಭಿನ್ನ ಶೀರ್ಷಿಕೆಗಳ ಚಿತ್ರಗಳು ಬರುತ್ತಿವೆ. ಈ ಸಾಲಿಗೆ ಹೊಸ ಸೇರ್ಪಡೆ “ಅವನಿರಬೇಕಿತ್ತು’. ಹೀಗೊಂದು ಸಿನಿಮಾ ಸದ್ದಿಲ್ಲದೇ ತಯಾರಾಗಿದ್ದು, ಇತ್ತೀಚೆಗೆ ಚಿತ್ರದ ಫ‌ಸ್ಟ್‌ಲುಕ್‌ ಪೋಸ್ಟರ್‌ ರಿಲೀಸ್‌ ಮಾಡಿದೆ.

ದರ್ಶನ್‌, ಯಶ್‌ ಅವರು ಹೆಸರುಗಳನ್ನು ಬಳಸಿಕೊಂಡು ವಿಭಿನ್ನವಾಗಿ ಪ್ರಮೋಶನ್‌ ವಿಡಿಯೋ ಮಾಡಲಾಗಿದೆ. ಮುರಳಿ ಬಿ.ಟಿ ರವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅವನಿರಬೇಕಿತ್ತು ಚಿತ್ರವನ್ನ ಅಶೋಕ್‌ ಸಾಮ್ರಾಟ್‌ ನಿರ್ದೇಶಿಸಿದ್ದಾರೆ. ನಿರ್ದೇಶನದ ಜೊತೆಗೆ ಸಂಕಲವನ್ನ ಮಾಡಿದ್ದಾರೆ.

ನಾಯಕನಾಗಿ ಭರತ್‌ ಮತ್ತು ಸೌಮ್ಯ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ಚಿತ್ರದಲ್ಲಿ ಪ್ರಶಾಂತ್‌ ಸಿದ್ಧಿ, ಕಿರಣ್‌ ಕುಮಾರ್‌, ಅಜಯ್‌ ಶರ್ಮ ಸೇರಿದಂತೆ ಅನೇಕರು ನಟಿಸಿದ್ದಾರೆ.

ಚಿತ್ರಕ್ಕೆ ಹಂಸಲೇಖ ಶಿಷ್ಯ ಲೋಕಿ ತವಸ್ಯ ಸಂಗೀತ ಸಂಯೋಜಿ ಸಿದ್ದಾರೆ. ಪೃಥ್ವಿ ಮಾಲೂರು ಹಾಗೂ ದೇವರಾಜ್‌ ಪೂಜಾರಿ ಛಾಯಾಗ್ರಾಹಣ ಮಾಡಿದ್ದಾರೆ. ಲವ್‌ ಜೊತೆಗೆ ಸಸ್ಪೆನ್ಸ್‌ ಥ್ರಿಲ್ಲರ್‌ ಅಂಶ ದೊಂದಿಗೆ ಈ ಚಿತ್ರ ಸಾಗುತ್ತದೆ. ಮಾರ್ಚ್‌ನಲ್ಲಿ ತೆರೆಗೆ ಬರಲಿದೆ.